ದಾಂಡೇಲಿ: ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನಡೆಯುತ್ತಿರುವ ಕೊರೊನಾ ಥರ್ಮಲ್ ಸ್ಕ್ರೀನಿಂಗ್ ಸೆಂಟರ್ ಗೆ ನಗರದ ವೆಸ್ಟ್ ಕೋಸ್ಟ್ ಪೇಪರ್ ಮಿಲ್‍ನವರು ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ಸರಿ ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ಶೇಡ್ ನಿರ್ಮಿಸಿ ಕೊಟ್ಟಿದ್ದಾರೆ.
ತಹಶಿಲ್ದಾರ ಶೈಲೇಶ ಪರಮಾನಂದರವರು ಈ ಶೆಡ್ ನಿರ್ಮಿಸಿಕೊಡುವಂತೆ ಕಾಗದ ಕಂಪನಿಯವರಲ್ಲಿ ಮನವಿ ಮಾಡಿದ್ದರು. ಸ್ಪಂದಿಸಿದ ಕಾಗದ ಕಂಪನಿ ತನ್ನ ಸಾಮಾಜಿಕ ಹೊಣೆಗಾರಿಕೆಯಡಿ ಇದನ್ನು ನಿರ್ಮಿಸಿದೆ. ಕಂಪನಿಯವರು ಇದನ್ನು ತಹಶೀಲ್ದಾರ ಮೂಲಕ ಸಾರ್ವಜನಿಕ ಆಸ್ಪತ್ರೆಯ ವೈದ್ಯರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ತಹಶಲ್ದಾರ ಶೈಲೇಶ ಪರಮಾನಂದ, ಸರಕಾರಿ ಆಸ್ಪತ್ರೆಯ ಮಖ್ಯ ವೈದ್ಯಾಧಿಕಾರಿ ರಾಜೇಶ ಪ್ರಸಾದ, ಹಾಗೂ ಸಿಬ್ಬಂದಿಗಳು, ಕಾಗದ ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ, ಕೈಲಾಶ ಜೋಷಿ ಮುಂತಾದವರಿದ್ದರು.
ಕೊರೊನಾ ಸಂದರ್ಭದಲ್ಲಿ ಇದು ಪರೀಕ್ಷೆಗೊಳಗಾಗುವ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಆಸ್ಪತ್ರೆಯ ಮುಖ್ಯ ವೈಧ್ಯಾಧಿಕಾರಿ ರಾಜೇಶ ಪ್ರಸಾದ ತಿಳಿಸಿದ್ದು, ಕಂಪನಿಯ ಸೇವಾ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
Be the first to comment