ದಾಂಡೇಲಿ: ಪೌರ ಕಾರ್ಮಿಕರ ಸುರಕ್ಷಾ ಸಂರಕ್ಷಣೆಗೆ ಒತ್ತಾಯಿಸಿ ಮುನ್ಸಿಪಲ್ ಕಾರ್ಮಿಕರ ಸಂಘಟನೆಯು ಜೂನ್ 29ರಂದು ರಾಜ್ಯದಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.
ಕೊರೊನಾ ಸಂದರ್ಭದಲ್ಲಿ ಸೀಲ್‍ಡೌನ್, ಕ್ವಾರೆಂಟೈನ್, ಆಸ್ಪತ್ರೆ ಮುಂತಾದೆಡೆ ಪೌರ ಕಾರ್ಮಿಕರು ತಮ್ಮ ಹಾಗೂ ತಮ್ಮ ಕುಟುಂಭದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಮರ್ಪಕ ಸುರಕ್ಷತೆಯಿಲ್ಲದ ಕಾರಣ ವಿವಿದೆಡೆ ಸುಮಾರು 23 ಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಕೊರೊನಾ ಸೋಂಕು ತಗುಲಿದೆ. ಜೊತಗೆ ಸ್ಥಳಿಯ ಸಂಸ್ಥೆಗಳ ಸಿಬ್ಬಂದಿಗಳೂ ಸಹ ಕೊರೊನಾ ವಾರಿಯರ್ಸಗಳಂತೆ ಕಾರ್ಯ ನಿರ್ವಹಿಸುತ್ತಿದ್ದರೂ ಅವರಿಗೂ ಸರಿಯಾದ ರಕ್ಷಣಾ ಸೌಕರ್ಯಗಳಿಲ್ಲ. ಬೆಳಗಾವಿಯ ಕುಡಚಿ ಮುನಸಿಪಾಲ್ಟಿಯಂತೆ ಎಲ್ಲರಿಗೂ ಸುರಕ್ಷತಾ ಸಮವಸ್ತ್ರಗಳನ್ನು ನೀಡುವ ಜೊತೆಗೆ ವಿಶ್ರಾಂತಿ ಗೃಹ ಒದಗಿಸಬೇಕು.
ಜೊತೆಗೆ ಸಂಕಷ್ಠದಲ್ಲಿರುವ ಪೌರ ಕಾರ್ಮಕರಿಗೆ ಅಗತ್ಯ ಸವಲತ್ತು ಒದಗಿಸುಬೇಕು. ಹಾಗೂ ಕಾಲ ಕಾಲಕ್ಕೆ ಅವರ ಆರೋಗ್ಯ ತಪಾಸಣೆ ನಡೆಸಬೇಕು ಎಂಬನೇಕ ಬೇಡಿಕೆಯನ್ನಿಟಟುಕೊಂಡು ರಾಜ್ಯದಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ಮುನ್ಸಿಪಲ್ ನೌಕರರ ಸಂಘಟನೆಯ ರಾಜ್ಯಾದ್ಯಕ್ಷ ಹರೀಶ ನಾಯ್ಕ. ಕಾರ್ಯದರ್ಶಿ ಮುಜೀಬ ಸಯ್ಯದ್, ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ಡಿ. ಸ್ಯಾಮಸನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment