ಡಿಗ್ಗಿ-ಕ್ಯಾಸಲರಾಕ್ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ: ಗಡಿ ಭಾಗದ ಜನರ ಗೋಳು ಕೇಳೋರಿಲ್ಲ

ಜನಪ್ರತಿನಿದಿಗಳೇ ಒಮ್ಮೆ ಗಮನಹರಿಸಿ...

ಡಿಗ್ಗಿ ಆಸ್ಪತ್ರೆ

ಜೋಯಿಡಾ: ಒಂದು ಆಸ್ಪತ್ರೆ ನಿರ್ಮಾಣವಾಗಿ ಹತ್ತಾರು ವರ್ಷಗಳಾದರೂ ಒಬ್ಬನೇ ಒಬ್ಬ ವೈದ್ಯ ಹಾಗಿರಲಿ, ಸಿಬ್ಬಂದಿಯೂ ಅಲ್ಲಿ ಕಾರ್ಯ ನಿರ್ವಹಿಸಿಲ್ಲ ಅಂತೆಂದರೆ ನಮ್ಮ ಆಡಳಿತ ವಯವಸ್ಥೆಯ ಹೊಣೆಗೇಡಿತನ ಎಷ್ಟಿರಬಹುದೆಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಇದು ಜೋಯಿಡಾ ತಾಲೂಕಿನ ವ್ಯಥೆಯ ಕಥೆಯಾಗಿದೆ.

ಡಿಗ್ಗಿ ಆಸ್ಪತ್ರೆಯ ಅರಣ್ಯ ರೋಧನ: ಡಿಗ್ಗಿ ಎಂದರೆ ಇದು ಜೋಯಿಡಾ ತಾಲೂಕಿನ ಗಡಿ ಭಾಗ. ಗೋವಾಕ್ಕೆ ಅತ್ಯಂತ ಸಮೀಪವಿರುವ ಪ್ರದೇಶ. ಕಾಳಿ ನದಿಯ ಜನ್ಮ ಸ್ಥಳವಾಗಿದ್ದರಿಂದ ಇದು ಒಂದು ರೀತಿಯ ಐತಿಹಾಸಿಕ ಸ್ಥಳವೂ ಹೌದು. ಭಾಗಶಹ ಇಲ್ಲಿ ವಾಸವಿರುವವರು ಬುಡಕಟ್ಟು ಕುಣಬಿಗಳೇ ಹೆಚ್ಚಿನವರು. ಅತ್ಯಂತ ಹಿಂದುಳಿದ ಗುಡ್ಡಗಾಡು ಪ್ರದೇಶ ಇದು. ಇಲ್ಲೊಂದು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಸರಿ ಸುಮಾರು 13 ವರ್ಷಗಳ ಹಿಂದೆಯೇ ಇಲ್ಲಿ ಈ ಆರೋಗ್ಯ ಕೇಂದ್ರಕ್ಕೆ ಸುಸಜ್ಜಿತ ಕಟ್ಟಡವೂ ಆಗಿತ್ತು. ಅಂದು 39 ಲಕ್ಷ ರೂ. ವೆಚ್ಚ ಮಾಡಿದ್ದರು. ಈಗ ವೈದ್ಯರೇ ಇಲ್ಲದ ಆಸ್ಪತ್ರೆಗೆ ಮತ್ತೆ 35 ಲಕ್ಷ ರೂ ಖರ್ಚು ಮಾಡಲಾಗುತ್ತಿದೆ. ಆದರೆ ಇಲ್ಲಿ ಇಬ್ಬನೇ ಒಬ್ಬ ಆರೋಗ್ಯ ಸಿಬ್ಬಂದಿಯೂ ಕೂಡಾ ಈವರೆಗೂ ಬಂದಿಲ್ಲ. ಒಂದೇ ಒಂದು ಗುಳಿಗೆಯನ್ನೂ ಜನರಿಗೆ ನೀಡಿಲ್ಲ. ಆದರೆ ಖರ್ಚು ಮಾತ್ರ ಬಿಂದಾಸ್.

ಕಳೆದೆರಡು ವರ್ಷಗಳ ಹಿಂದೆ ಖಾಸಗಿ ಸಂಸ್ಥೆಯವರೊಬ್ಬರು ಈ ಆಸ್ಪತ್ರೆÉಯನ್ನು ನಡೆಸಲು ಪಡೆದಿದ್ದರೆಂಬ ಮಾಹಿತಿಯನ್ನು ಆರೋಗ್ಯ ಇಲಾಖೆಯವರು ನೀಡುತ್ತಾರಾದರೂ ಅವರೂ ಸಹ ಆ ಆಸ್ಪತ್ರೆಯನ್ನು ಸರಿಯಾಗಿ ನಿರ್ವಹಿಸಿಲ್ಲ. ವೈದ್ಯರನ್ನು ನೇಮಿಸಿಲ್ಲ ಎಂಬ ಆಕ್ಷೇಪ ಸ್ಥಳೀಯರದ್ದಾಗಿದೆ. ವೈದ್ಯರೇ ಆಸ್ಪತ್ರೆಯಲ್ಲಿ ಇರುವುದಿಲ್ಲ. ಒಬ್ಬ ವೈದ್ಯರ ನೇಮಕವನ್ನೂ ಸರಕಾರದಿಂದ ನೇಮಕ ಮಾಡಲಾಗುವುದಿಲ್ಲ ಎಂದ ಮೇಲೆ 75 ಲಕ್ಷ ರು.ಗಳಷ್ಟು ಹಣವನ್ನು ಕರ್ಚು ಮಾಡುವುದಾದರೂ ಯಾವ ಪುರುಷಾರ್ಥಕ್ಕೆ ಎಂಬುದಕ್ಕೆ ಸಂಬಂದೊಟ್ಟ ಇಲಾಖೆಯೇ ಉತ್ತರಿಸಬೇಕಿದೆ. ಈ ಭಾಗದ ಜನರು ಅದೆಷ್ಟು ಬಾರಿ ಇ¯ಖೆಯ ಹಾಗೂ ಜನಪ್ರತಿನಿದಿಗಳ ಗಮಕ್ಕೆ ತಂದರೂ ಅದು ಅರಣ್ಯರೋಧನವಾಗುತ್ತಿದೆ.

ಕ್ಯಾಸಲಾರಕ್ ಆಸ್ಪತ್ರೆಯ ಕಥೆ: ಕ್ಯಾಸಲರಾಕ್ ಇದೂ ಕೂಡಾ ಜೋಯಿಡಾದ ಸುಂದರ ಗಡಿ ಭಾಗ. ಇಲ್ಲಿಯೂ ಸಹ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಸುಸಜ್ಜಿತ ಕಟ್ಟಡವೂ ಇದೆ. ಆದರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಇಲ್ಲಿಯೂ ಸಹ ವೈದ್ಯರಿಲ್ಲ. ಇದೀಗ ಒಬ್ಬ ವೈದ್ಯನನ್ನು ಬೇರೆಡೆಯಿಂದ ನಿಯೋಜಿಸಲಾಗಿದೆಯಾದರೂ ಅವರೂ ಸಹ ಬರುತ್ತಿಲ್ಲ. ಅದಕ್ಕೆ ಅವರು ಮಳೆಗಾಲ. ರಸ್ತೆ ಸರಿಯಿಲ್ಲ, ಬಂದು ಹೋಗಲು ಆಗುತ್ತಿಲ್ಲ ಎಂಬ ಕಾರಣ ನೀಡುತ್ತಿದ್ದಾರಂತೆ. ಆದರೆ ಇಲ್ಲಿಯ ಜನರ ಸ್ಥಿತಿ ಮಾತ್ರ ಚಿಂತಾಜನಕವಾಗಿದೆ.
ಜನಪ್ರತಿನಿದಿಗಳ್ಯಾಕೆ ಮೌನ: ಜೋಯೊಡಾಂತ ಗುಡ್ಡಗಾಡು ಪ್ರದೇಶದ;ಲಿ ಇಂತಹ ಕನಿಷ್ಠ ಆರೀಓಗ್ಯ ವ್ಯವಸ್ಥೆಯಿದೆಯಾದತೂ, ಕಟ್ಟಡಹಳಿದ್ದರೂ ವೈದ್ಯರು, ಸಿಬ್ಭಂದಿಗಳು ಇರದೇ ಜನ ಸಮಸ್ಯೆಯಲ್ಲಿರುವರಾದರೂ ಯಾಕೆ ಜನಪ್ರತಿನಿದಿಗಳು ಚಕಾರ ಎತ್ತುತ್ತಿಲ್ಲ. ವೈದ್ಯರನ್ನು ನೇಮಿಸುವ ಒಂದು ಸಣ್ಣ ಪ್ರಯತ್ನ ಯಾಕೆ ಮಾಡುತ್ತಿಲ್ಲ ಚುನಾವನೆ ಬಂದಾಗ ಬರುವ ಇವರು ಜನರ ಬವಣೆ ಬಗೆಹರಿಸಲ್ಯಾಕೆ ಬರುತ್ತಿಲ್ಲ ಎಂಬುದು ಸ್ಥಳೀಯರ ಅಸಹಾಯಕ ಪ್ರಶ್ನೆಯಾಗಿದೆ.
ಕೊರೊನಾ ಜೊತೆ ಸಾಂಕ್ರಾಮಿಕ ರೋಗದ ಭಯ : ಎಲ್ಲಡೆ ಜನರಲ್ಲಿ ಕೊರೊನಾ ವೈರಸ್ ಹರಡುವ ಭಯವಿದೆ. ಇದರ ಜೊತೆ ಜೊತೆ ಜೋಯಿಡಾದಲ್ಲಿ ಕೆಲವೆಡೆ ಮಂಗನ ಕಾಯಿಲೆಯೂ ಕಾಣಿಸಿಕೊಂಡಿದೆ. ಜೊತೆಗೆ ಮಳೆಗಾಲ ಬೇರೆ. ಸಾಂಕ್ರಾಮಿಕ ರೋಗವೂ ಹರಡುವ ಸಾದ್ಯತೆಯಿರುತ್ತದೆ. ಹೀಗೆ ಏನಾದರೂ ಆರೋಗ್ಯ ಸಮಸ್ಯೆಯಾದರೆ ಡಿಗ್ಗಿ ಹಾಗೂ ಕ್ಯಾಸಲರಾಕ್ ಭಾಗದ ಜನರು ಸಮಸ್ಯೆ ಎದುರಿಸಬೇಕಾಗಿದೆ. ತುರ್ತು ಆರೋಗ್ಯ ಸಮಸ್ಯೆಯಾದರೆ ಅವರು 40-50 ಕಿ.ಮಿ ದೂರ ಜೋಯಿಡಾಕ್ಕೆ, ಕುಂಬಾರವಾಡಾಕ್ಕೆ ಅಥವಾ ರಾಮನಗರಕ್ಕೆ ಹೋಗಿ ಚಿಕಿತ್ಸೆ ಪೆಯಬೇಕಾದ ಅನಿವಾರ್ಯತೆಯಿದೆ. ತಮ್ಮ ಊರಲ್ಲಿ ಆಸ್ಪತ್ರೆಯಿದ್ದರೂ ವೈದ್ಯರಿಲ್ಲದ ಅಥವಾ ಸಿಬ್ಬಂದಿಗಳು ಇಲ್ಲದ ಕಾರಣ ಪ್ರಾಥಮಿಕ ಚಿಕಿತ್ಸೆಯನ್ನೂ ಪಡೆಯಲಾಗದಂತ ದುಸ್ಥಿತಿ ಈ ಭಾಗದ ಜನರದ್ದಾಗಿದೆ. ಇರುವ ವ್ಯವಸ್ಥೆ ಕನ್ನಡಿಯೊಳಗಿನ ಗಂಟಿನಂತಾಗಿದೆ.

ಹೇಳಿ ಹೇಳಿ ಸಾಕಾಗಿ ಹೋಗಿದೆ

ಡಿಗ್ಗಿಯಲ್ಲಿ ಹಾಗೂ ಕ್ಯಾಸಲರಾಕ್‍ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವ್ಯದ್ಯರಿಲ್ಲದಿರುವ ಬಗ್ಗೆ ಹಲವು ಬಾರಿ ಇಲಾಖೆ ಹಾಗೂ ಸರಕಾರದ ಗಮನಕ್ಕೆ ತರಲಾಗಿದೆ. ಡಿಗ್ಗಿಯಲ್ಲಂತೂ ಆಸ್ಪತ್ರೆ ಕಟ್ಟಿದಾಗಿನಿಂದ ಒಬ್ಬನೇ ಒಬ್ಬ ವೈದ್ಯರಾಗಲೀ ಸಿಬ್ಬಂದಿಯಾಗಲಿ ಬಂದಿಲ್ಲ. ಆರೋಗ್ಯ ಸಮಸ್ಯೆಯಾದಾಗ ಈ ಭಾಗದ ಜನ ಬಹಳ ಸಂಕಷ್ಟಕ್ಕೊಳಗಾಗುತ್ತಾರೆ. ಆದಷ್ಟು ಬೇಗ ಈ ಆರೋಗ್ಯ ಕೇಂದ್ರಗಳಿಗೆ ವೈದ್ಯರನ್ನು ನೇಮಿಸುವ ಕೆಲಸವಾಗಬೇಕು ಎನ್ನುತ್ತಾರೆ ಬಾಜರಕುಣಂಗ ಗ್ರಾ.ಪಂ. ಉಪಾಧ್ಯಕ್ಷ ಅಜೀತ ಮಿರಾಶಿ.

ಡಿಗ್ಗಿ, ಕ್ಯಾಸಲರಾಕ್‍ನಲ್ಲಿ ವೈದರಿಲ್ಲದಿರುವುದು ನಿಜ
ಡಿಗ್ಗಿ ಹಾಗೂ ಕ್ಯಾಸಲರಾಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದಿರುವುದು ನಿಜ. ಕ್ಯಾಸಲರಾಕ್‍ಗೆ ಓರ್ವ ವೈದ್ಯರನ್ನು ನೇಮಿಸಲಾಗಿತ್ತು. ಆದರೆ ಸ್ಥಳೀಯ ಕೆಲ ಸಂಚಾರ ಸಮಸ್ಯೆಯಿಂದ ಅವರಿಗೂ ಹೋಗಲಾಗುತ್ತಿಲ್ಲ. ಇನ್ನು ಕೆಲ ಸಿಬ್ಬಂದಿಗಳನ್ನು ಡಿಗ್ಗಿ, ಕ್ಯಾಸಲರಾಕ್‍ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ನೇಮಿಸಿದ್ದರೂ ಅವರೂ ಕೂಡಾ ಹಾಜರಾಗಿಲ್ಲ ಎನ್ನುತ್ತಾರೆ ಜೋಯಿಡಾ ತಾಲೂಕು ವೈದ್ಯಾಧಿಕಾರಿ ಡಾ. ಸುಜಾತಾ ಉಕ್ಕಳ್ಳಿ.

  • ಒಡನಾಡಿ ವರದಿ
About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*