ದಾಂಡೇಲಿ: ನಗರಕ್ಕೆ ಸಮೀಪದ ಮೌಳಂಗಿಯ ಅಂಬೇಡ್ಕರ ಭವನದಲ್ಲಿ ಶಾಹು ಮಹರಾಜರ 147 ನೇ ಜಯಂತಿ ಕಾರ್ಯಕ್ರಮ ನಡಯಿತು.
ಡಾ. ಬಿ.ಆರ್. ಅಂಬೇಡ್ಕರ ಯುವಕ ಸಂಘ ಹಾಗೂ ಮಹಿಳಾ ಮಂಡಳದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಾಂಡೇಲಿ ಗ್ರಾಮೀಣ ಠಾಣೆಯ ಎ.ಎಸ್.ಐ ಮಹಾವೀರ ಕಾಂಬಳೆಯವರು ಶಾಹು ಮಹಾರಾಜರ ಬಾಭಾಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ಸಂವಿದಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರವರನ್ನು ಈ ದೇಶಕ್ಕೆ ಮೊಟ್ಟ ಮೊದಲು ಪರಿಚಯಸಿದ ವೆಯಕ್ತಿಯೆಂದರೆ ಶಾಹುಮಹಾರಾಜರು. ಅವರ ಬದುಕು ಅನಕರಣೀಯ. ಇಂದಿನ ಯುವ ಜನತೆ ರಾಷ್ಟ್ರ ಪುರುಷರ ಜೀವನ ಚರಿತ್ರೆಗಳ ಬಗ್ಗೆ ತಿಳಿದುಕೊಳಳಬೇಕು. ಸಮೃದ್ದ, ಸೌಹಾರ್ದ, ಸಮತೆಯ ರಾಷ್ಟ್ರ ಕಟ್ಟುವತ್ತ ಯುವ ಯುಜವನರು ಮುಂದೆ ಬರಬೇಕು ಎಂದರು.
ಈ ಸಂದರ್ಭದಲ್ಲಿ ಸಹದೇವ ಕಾಂಬಳೆ, ಚಂದ್ರಶೇಖರ ಮೈನಾಗೋಳ, ದಯಾನಂದ ಲೊಂಡೆ, ಅಣ್ಣಪ್ಪ ಕಾಂಬಳೆ, ವಿನೋದ ಮೈನಾಗೋಳ, ಕಲ್ಲವ್ವ ಕಾಂಬಳೆ, ಶ್ರೀದೇವಿ ಕಾಂಬಳೆ, ಅಯ್ಯಪ್ಪ ಹರಜನ, ಮುಂತಾವರಿದ್ದರು.
Be the first to comment