ದಾಂಡೇಲಿ: ದೆಹಲಿಯಿಂದ ದಾಂಡೇಲಿಗೆ ಮರಳಿದ್ದ ಕೇಂದ್ರ ಮೀಸಲು ಶಸಸ್ತ್ರ ಪಡೇಯ ಸಿಬ್ಬಂದಿಯೋರ್ವನಿಗೆ ಕೊರೊನಾ ಪಾಸಿಟಿವ್ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಬುಧವಾರ ರಾತ್ರಿ ಈ ವರದಿ ಬಂದಿದ್ದು, ಸೋಂಕಿತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈತ ದೆಹಲಿಯಲ್ಲಿ ಸಿ.ಆರ್.ಪಿ.ಎಪ್. ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ರಜಾ ಮೇಲೆ ದಾಂಡೇಲಿಗೆ ಮರಳಿದ್ದ. ನಿಯಮದಂತೆ ಒಂದು ವಾರ ಲಾಡ್ಜ್ ಕ್ವಾರೆಂಟೈನ್ ಉಳಿದು ಮನೆಗೆ ಮರಳಿದ್ದ. ಮರುದಿನವೇ ಈತನ ಗಂಟಲು ದ್ರವದ ವರದಿ ಪಾಸಿಟಿವ್ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈದೀಗ ಆತನ ಸಂಪರ್ಕದಲ್ಲಿದ್ದ ಮನೆಯವರು ಹಾಗೂ ಇತರರನ್ನು ಕ್ವಾರೆಂಟೆನ್ ಗೆ ಒಳಪಡಿಸಲಾಗಿದೆ. ದಾಂಡೇಲಿಯಲ್ಲಿ ಇದು ಆರನೆಯ ಕೊರೊನಾ ಪ್ರಕರಣವಾಗಿದೆ.7
Be the first to comment