ಹಳಿಯಾಳ-ದಾಂಡೇಲಿ-ಜೋಯಿಡಾ ತಾಲೂಕುಗಳನನೋಗೊಂಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎ.ಪಿ.ಎಮ್.ಸಿ.) ಯ ಅಧ್ಯಕ್ಷರಾಗಿ ಶ್ರೀನಿವಾಸ ಘೋಟ್ಕರವರು ಮರು ಆಯ್ಕೆಯಾಗಿದ್ದಾರೆ.
ಹಳಿಯಾಳದಲ್ಲಿ ಬುಧವಾರ ನಡೆದ ಈ ಚುನಾವಣೆ ಕುತುಹಲಕ್ಕೆಡೆಯಾಗಿತ್ತು. ಕಳೆದೆರಡು ದಿನಗಳಿಂದ ಕಾಂಗ್ರೆಸ್ ಹಾಗೂ ಭಾ.ಜ.ಪದ ತಲಾ ಓರ್ವ ಸದಸ್ಯರು ಕಾಣೆಯಾಗಿದ್ದರು. ಇದಕ್ಕೆ ಸಂಬಂದಿಸಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ಹಾಗೂ ಮಾಜಿ ಶಾಸಕ ಸುನೀಲ ಹೆಗಡೆಯವರು ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾದ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಮಾಡಿಕೊಂಡಿದ್ದರು. ಅವರ ಹೇಳಿಕೆಗಳ ವಿಡಿಯೋಗಳು ಎಲ್ಲೆಡೆ ಹರಿದಾಡಿತ್ತು. ಘೋಟ್ನೇಕರ್ ತಮ್ಮ ಸದಸ್ಯರನ್ನು ಕಿಡ್ಯಾಪ್ ಮಾಡಿಸಿದ್ದಾರೆಂದು ಸುನೀಲ ಹೆಗಡೆ ಆರೋಪ ಮಾಡಿದರೆ, ಸುನೀಲ ಹೆಗಡೆ ಆರೋಪವನ್ನು ಘೋಟ್ನೇಕರ ಅಲ್ಲಗಳೆದಿದ್ದರು.
ಬುಧವಾರ ನಡೆದ ಚುನಾವಣೆಯ ಸಂದರ್ಭದಲ್ಲಿ ಕಾಣೆಯಾಗಿದ್ದ ಈರ್ವರಲ್ಲಿ ಬಾ.ಜ.ಪದಿಂದ ಆಯ್ಕೆಯಾದ ಸದಸ್ಯ ನಾವಣಾ ಪ್ರಕ್ರಿಯೆಯಲ್ಲಿ ಹಾಜರಾಗಿ ಕಾಂಗ್ರೆಸ್ ಪರ ಮತ ಚಲಾಯಿಸಿದ್ದರು. ಇದರಿಂದಾಗಿ 16 ಸದಸ್ಯ ಬಲದ ಎ.ಪಿ.ಎಮ್.ಸಿಯಲ್ಲಿ 15 ಜನರು ಮಾತ್ರ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು 8 ಮತಗಳನ್ನು ಪಡೆದ ಎಸ್.ಎಲ್. ಘೋಟ್ನೇಕರ ಪುತ್ರ ಕಾಂಗ್ರೆಸ್‌ನ ಶ್ರೀನಿವಾಸ ಘೋಟ್ನೇಕರ ಎರಡನೆಯ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ಸಂಜು ಮಿರಾಶಿ ಆಯ್ಕೆಯಾಗಿದ್ದಾರೆ.
ಇನ್ನು ಕಾಣೆಯಾಗಿದ್ದ ಮತ್ತೋರ್ವ ಸದಸ್ಯ ಕಾಂಗ್ರೆಸ್ಸಿಗನಾಗಿದ್ದು, ಆತ ಚುನಾವಣಾ ಪ್ರಕ್ರಿಯೆಲ್ಲಿ ಪಾಲ್ಗೊಳ್ಳದೇ ಗೈರಾಗಿರುವುದು ಹಲವು ಪ್ರಶ್ನೆಗಳಿಗೆಡೆಯಾಗಿದೆ. ಹಳಿಯಾಳದ ಎ.ಪಿ.ಎಮ್.ಸಿ ಅಧ್ಯಕ್ಷರ ಆಯ್ಕೆ ಕೂಡಾ ಮಿನಿ ಸಮರದ ರೀತಿಯಲ್ಲಿ ನಡೆದು ರಾಜಕೀಯ ಬಲಾಬಲಗಳಿಗೆ ಕಾರಣವಾಗಿದ್ದು ಮಾತ್ರ ವಿಶೇಷವಾಗಿದೆ.
- ಒಡನಾಡಿ ವರದಿ
Be the first to comment