ಬೆಂಗಳೂರು: ಐ.ಎಂ.ಎ. ಜ್ಯುವೆಲರಿ ಪ್ರಕರಣದಲ್ಲಿ ಲಂಚ ಪಡೆದ ಆರೋಪ ಎದುರಿಸುತ್ತಿದ್ದ ಐ.ಎ.ಎಸ್. ಅಧಿಕಾರಿ ವಿಜಯಶಂಕರ ಅವರು ಮಂಗಳವಾರ ಜಯನಗರದಲ್ತಲಿರುವ ತಮ್ಮ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಹಿಂದೆ ಬೆಂಗಳೂರಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿವಹಿದಸಿದ್ದ ವಿಜಯಶಂಕರವರ ಮೇಲೆ ಐಎಂಎ ಜ್ಯವೆಲ್ಲರಿ ಪ್ರಕರಣದಲ್ಲಿ ಲಂಚ ಪಡೆದ ಆರೋಪ ಕೇಳೀ ಬಂದಿತ್ತು. ಐ.ಎಂ.ಎ. ಗೆ ಕ್ಲಿಯರೆನ್ಸ್ ಪ್ರಮಾಣ ಪತ್ರ ನೀಡಲು ಐಎಂಎ ಕಂಪನಿ ಮಾಲಕ ಮನ್ಸೂರ್ ಖಾನ್‌ನಿಂದ 1.5 ಕೋಟಿ ರೂ. ಹಣ ಪಡೆದಿದ್ದರು ಎಂಬ ಆರೋಪ ಇವರ ಮೇಲಿತ್ತು.
ಈ ಆರೋಪಕ್ಕೆ ಸಂಬಂದಿಸಿ ಜೈಲು ಅನುಭವಿಸಿ ಜಾಮೀನಿನ ಮೇಲೆ ಹೊರ ಬಂದಿದ್ದ ವಿಜಯಶಂಕರ ಮಾನಸಿಕವಾಗಿ ಬಹಳಷ್ಟು ನೊಂದಿದ್ದರು. ಖಿನ್ನರಾಗಿದ್ದರು ಎಂಬ ಮಾತು ಕೇಳಿ ಬರುತ್ತಿದ್ದು, ಇವರ ಆತ್ಮಹತ್ಯೆ ಇನ್ನೂ ಹಲವು ಪ್ರಶ್ನೆಗಳಿಗೆ ಅವಕಾಶ ಮಾಡಿಕೊಟ್ಟಿದೆ.
Be the first to comment