ದಾಂಡೇಲಿ: ಕೋವಿಡ್ 19 ಸೋಂಕು ಹರಡುವ ಭಯದಲ್ಲಿಯೇ ಜನರು ಬದುಕು ನಡೆಸುತ್ತಿರುವ ಸಂದರ್ಭದಲ್ಲಿಯೇ ದಾಂಡೇಲಿಯಲ್ಲಿ ಕಾಮಾಲೆ ಕಾಯಿಲೆ (ಜಾಯಿಂಡೀಸ್) ವ್ಯಾಪಕವಾಗಿ ಪಸರಿಸುತ್ತಿದ್ದು, ಇದು ನಾಗರಿಕರ ನಿದ್ದೆಗೆಡಿಸವಂತೆ ಮಾಡಿದೆ.
ದಾಂಡೇಲಿ ಅಷ್ಟೇ ಅಲ್ಲ, ಕೊರೊನಾ ವೈರಸ್ ಇಡೀ ವಿಶ್ವವನ್ನು ಭಯಬೀತಗೊಲೀಸಿದೆ. ಅದರ ಆಘತದಿಂದಲೇ ಜನರಿಗೆ ಇನ್ನೂ ಹೊರಬರಲಾಗುತ್ತಿಲ್ಲ. ರೋಗದ ಭಯದಲ್ಲಿ ಬಹಳಷ್ಟು ಜನ ಮನೆಯಿಂದ ಹೊರಗಡೆಯೇ ಬರುತ್ತಿಲ್ಲ. ಆದ್ದಾಗ್ಯೂ ಇದರ ನಡುವೆಯೇ ಸಾಂರ್ಖಋಅಮಿಕ ರೋಗಗಳು ವಕ್ಕರಿಸಿದರೆ ಜನರ ಜೀವನವೇ ಅಸ್ಥವ್ಯಸ್ಥವಾಗುವ ಸಾದ್ಯತೆಯಿದೆ.
ಕರಾವಳಿ ಮುಂಜಾವುಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ದಾಂಡೇಲಿಯಲ್ಲಿ ಈಗಾಗಲೇ ನೂರಾರು ಜನರು ಜಾಯಿಂಡಿಸ್ (ಕಾಮಾಲೆ) ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೆಚ್ಚಿನದಾಗಿ ಮಕ್ಕಳು ಈ ರೋಗಕ್ಕೆ ತುತ್ತಾಗುತ್ತಿದ್ದು, ಬಹಳಷ್ಟು ಜನ ಈಗಾಗಲೇ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕೊರೊನಾ ಕಾಣದಿಂದಾಗಿ ಸರಕಾರಿ ಆಪತ್ರೆಯಲ್ಲಿ ಇದರ ದಾಖಲೆ ಕಡಿಮೆಯಿದ್ದರೂ ಖಾಸಗಿ ಆಸ್ಪತ್ರೆಗಳಲ್ಲಿ ದಿನಕ್ಕೆ 10 ರಿಂದ 15 ಜನರು ಈ ರೋಗದ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೂ ಹೋಗಿ ಚಿಕಿತ್ಸೆ ಪಡೆದು ಬಂದಿದ್ದಾರೆ. ಇದರನ್ನು ಹೆಸರು ಹೇಳಲಿಚ್ಚಿಸದ ಖಾಸಗಿ ವೈದ್ಯರೂ ಸಹ ದ್ರಢ ಪಡಿಸಿದ್ದಾರೆ.
ಸಾಂಕ್ರಾಮಿಕ ರೋಗ: ಜಾಯಿಂಡೀಸ್ ಇದು ಕೂಡಾ ಸಾಂಕ್ರಾಮಿಕ ರೋಗ. ಜಾಯಿಂಡಿಸ್ ಆದವನ ಮಲದ ಮೂಲಕ (ಅದರ ಅಂಶ ನೀರಲ್ಲಿ ಬೆರೆತರೆ) ಈ ವೈರಸ್ ಬೇರೆಡೆ ಹರಡುವ ಸಾದ್ಯತೆಯಿದೆ. ಜೊತೆಗೆ ಅಶುದ್ದ ಕುಡಿಯುವ ನೀರಿನಿಂದಲೂ ಜಾಯಿಂಡಿಸ್ ಹರಡುತ್ತದೆ. ಹಾಗಾಗಿ ಕುದಿಸಿ ಆರಿಸಿದ ನೀರನ್ನೇ ಬಳಸಬೇಕು ಎಂದು ವೈದ್ಯರು ಹೇಳುತ್ತಾರೆ.
ನಗರ ಸ್ವಚ್ಚತೆ ಕಾದುಕೊಳ್ಳಬೇಕು: ಮಳೆಗಾಲ ಪ್ರಾರಂಭವಾಗಿದ್ದು, ನಗರದ ಅಲ್ಲಲ್ಲಿ ರಸ್ತೆಗಳಲ್ಲಿ ಕೊಳಚೆ ರಾಡಿಗಳು ತುಂಬಿಕೊಂಡಿವೆ. ಕೆಲ ನಾಲಾಗಳಲ್ಲಿ ಗಬ್ಬು ನಾರುತ್ತಿದೆ. ಸೊಳ್ಳೆಗಳು ಹುಟ್ಟಿಕೊಳ್ಳುತ್ತಿವೆ. ನೀರಿನ ಸ್ವಚ್ಚತೆಯ ಬಗ್ಗೆ ಜಾಗೃತೆ ವಹಿಸಬೇಕಿದೆ. ಸೊಳ್ಳೆ ನಿವಾರಕ ಔಷಧಿಗಳನ್ನು ಸಿಂಪಡಿಸುವಲ್ಲಿ ನಗರಸಭೆಯವರು ಮುಂದಾಗಬೇಕಿದೆ. ನಿರ್ಲಕ್ಷ ವಹಿಸಿದರೆ ನಗರವನ್ನು ಕಾಮಾಲೆ ಸೇರಿದಂತೆ ಸಾಂಕ್ರಾಮಿಕ ರೋಗಗಳು ಆವರಿಸಿಕೊಳ್ಳುವ ಸಾದ್ಯತೆಗಳಿವೆ, ಹಾಗಾಗಿ ನಗರಾಡಳಿತ ನಗರಸ್ವಚ್ಚತೆ ಕಾದುಕೊಳ್ಳಬೇಕು ಎನ್ನುತ್ತಾರೆ ದಾಂಡೇಲಿಯ ನಾಗರಿಕರು.
ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ
ಈಬಗ್ಗೆ ಆರೋಗ್ಯ ಇಲಾಖೆ ನಮಗೆ ಮಾಹಿತಿ ನೀಡಿದೆ. ಕಾರಣ ನಗರದ ಕುಡಿಯುವ ನೀರನ್ನು ಈಗಾಗಲೇ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ಕುಡಿಯುವ ನೀರಿನ ಶುದ್ದತೆಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಕಾಮಾಲೆ ರೋಗ ಹರಡದಂತೆ ಅವಶ್ಯವಿರುವ ಎಲ್ಲಾ ರೀತಿಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗುವುದು.
-ಡಾ. ಸಯ್ಯದ್ ಜಾಹೇದ್ ಅಲಿ, ಪೌರಾಯುಕ್ತರು
ಕುದಿಸಿ ಆರಿಸಿದ ನೀರನ್ನೇ ಬಳಸಿ
ಕಾಮಾಲೆ ಕಾಯಿಲೆಯಿದ್ದವರು ಒಂದಿಬ್ಬರಷ್ಟೇ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹೊರಗಡೆ ಇದರ ಸಂಖ್ಯೆ ಹೆಚ್ಚಿದ್ದರೆ ಇದರ ಬಗ್ಗೆ ಮುಂಜಾಗ್ರತೆ ಅವಶ್ಯ. ಎಲ್ಲರೂ ಕುದಿಸಿ ಆರಿಸಿದ ನೀರನ್ನೇ ಬಳಸಬೇಕು. ಜೊತೆಗೆ ಅದರ ರೋಗ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು.
-ಡಾ. ರಾಜೇಶ ಪ್ರಸಾದ, ವೈದ್ಯಾಧಿಕಾರಿಗಳು, ಸರಕಾರಿ ಆಸ್ಪತ್ರೆ,
Be the first to comment