ಹುಬ್ಬಳ್ಳಿ: ವಿಶ್ವ ರಕ್ತ ಧಾನಿಗಳ ದಿನದ ಅಂಗವಾಗಿ ರಾಷ್ಟ್ರೋತ್ಥಾನ ರಕ್ತ ನಿಧಿಯವರು ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕಾಯಕ್ರಮದಲ್ಲಿ ದಾಂಡೇಲಿಯ ರಕ್ತದಾನ ಶಿಬಿರಗಳ ಸಂಘಟಕ, ರಕ್ತದಾನಿ ಸುಧೀರ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮನಗುಂಡಿ ಬಸವನಾಂದ ಮಹಾ ಮನೆ ಸ್ವಾಮಿಗಳು ಹಾಗೂ ಸಂಘದ ಪ್ರಮುಖರಾದ ಶ್ರೀಧರ ನಾಡಿಗೇರ, ದತ್ತ ಮೂರ್ತಿ ಕುಲಕರ್ಣಿ ಮುಂತಾದವರಿದ್ದರು.
ಈ ಕಾರ್ಯಕ್ರಮದಲ್ಲಿ ರಕ್ತ ಧಾನ ಮಾಡುವವರನ್ನು ಗುರುತಿಸಿ ಸನ್ಮಾನ ಮಾಡಿದ್ದು ವಿಶೇಷವಾಗಿತ್ತು. ದಾಂಡೇಲಿಯ ಸುಧೀರ ಶೆಟ್ಟಿಯವರು ಕಳೆದ ಹತ್ತು ವರ್ಷಗಳಿಂದ ದಾಂಡೇಲಿಯಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಿಕೊಂಡು ಬಂದವರು ಜೊತೆಗೆ ಸ್ವತಹ 22 ಬಾರಿ ರಕ್ತದಾನ ಮಾಡಿದವರೂ ಆಗಿದ್ದಾರೆ.
Be the first to comment