ದಾಂಡೇಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈದೇಶವಾಸಿಗಳ ಎಲ್ಲ ಸ್ಥರದ ಜನರಿಗೂ ನ್ಯಾಯ ಕೊಡಿಸುವ ಗುರಿಯನ್ನಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರ ಪಲಿತಾಂಶಳನ್ನೂ ಕೂಡಾ ನಾವು ಇಂದು ಕಾಣುತ್ತಿದ್ದೇವೆ. ಈ ದೇಶದ ಜನರೂ ಸಹ ಅವರ ಆಡಳಿತಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಸುನೀಲ ಹೆಗಡೆ ತಿಳಿಸಿದರು.
ಚಿಕ್ಕ ಸಮುದಾಯವನ್ನು ಗುರತಿಸಿ ಅವರಿಗೆ ಸ್ಥಾನ ಮಾನ ನೀಡುವ ಕೆಲಸವನ್ನು ಹಿಂದೆ ಆಳಿದವರ್ಯಾರೂ ಮಾಡಿರಲಿಲ್ಲ. ಈ ಹಿಂದೆ ಪದ್ಮಶ್ರೀ ಪ್ರಶಸ್ತಿ ನೀಡುವ ಸಂದರ್ಭ ಇರಬಹುದು. ಈಗ ರಾಜ್ಯ ಸಭಾ ಸದಸ್ಯರನ್ನಾಗಿ ಮಾಡುವ ಸಂದರ್ಭ ಇರಬಹುದು ಇವೆಲ್ಲವೂ ಪ್ರಧಾನ ಮಂತ್ರಿಗಳ ಕೆಳಸ್ಥರದ ಸಮಾಜವನ್ನು ಗುರುತಿಸಿ ಮೇಲೆತ್ತುವ ಕಾರ್ಯವಾಗಿದೆ. ಸವಿತಾ ಸಮಾಜದ ಅಶೋಕ ಗಸ್ತಿ ಹಾಗೂ ಈರಣ್ಣ ಕರಾಡಿಯವರಂತಹ ತಳ ಹಂತದ ಪಕ್ಷದÀ ಕಾರ್ಯಕರ್ತರನ್ನು ಗುರುಸಿ ಟಿಕೆಟ್ ನೀಡಿರುವುದೂ ಕೂಡಾ ಇದೊಂದು ಉತ್ತಮ ನಿದರ್ಶನವಾಗಿದೆ. ಇದು ಪಕ್ಷದ ಕಾರ್ಯಕರ್ತರಿಗೂ ಒಂದು ಸಂದೇಶವಾಗಿದೆ. ಪಕ್ಷಕ್ಕೆ ದುಡಿದವರನ್ನು ಪಕ್ಷ ಗುರುತಿಸುತ್ತದೆ ಎಂಬುದನ್ನು ತೋರಿಸಿದೆ.
ಪ್ರಧಾನಮಂತ್ರಿಯವರ ಎರಡನೇ ಅವಧಿಯ ಆಡಳಿತಕ್ಕೆ ಒಂದು ವರ್ಷ ತುಂಬಿದೆ. ಇಲ್ಲಿಯವರೆಗೂ ನರೇಂದ್ರ ಮೋದಿಯವರು ಹಲವಾರು ಜನಪರ ಯೋಜನೆಗಳನ್ನು ಜನರಿಗೆ ತಂದಿದ್ದಾರೆ. ಎ.ಪಿ.ಎಮ್.ಸಿ ಕಾಯಿದೆಯ ತಿದ್ದುಪಡಿಯ ಮೂಲಕ ರೈತರಿಗೆ ಅನುಕೂಲವಾಗಿದೆ. ಸ್ತ್ರೀ ಶಕ್ತಿ ಸಂಘದವರ ಸಾಲ 10 ಲಕ್ಷದಿಂದ 20 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಅಸಂಘಟಿತ ಕಾರ್ಮಿಕರಿಗೂ ಸಹಾಯ ಆಗಿದೆ. ಮೇಕ್ ಇನ್ ಇಂಡಿಯಾ ಯೋಜನೆಯ ಮೂಲಕ ನಮ್ಮ ದೇಶದ ಜನರಿಗೆ ನಮ್ಮ ದೇಶದಲ್ಲಿಯೇ ಕೆಲಸ ನೀಡಿ ದೇಶವನ್ನು ಇನ್ನೂ ಸದೃಡವಾಗಿ ಕಟ್ಟುವ ಕೆಲಸವಾಗುತ್ತಿದೆ.
ಕೊರೊನಾ ಸಂಕಷ್ಠದ ಕಾಲದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಧಾನ ಮಂತ್ರಿಗಳು 20 ಲಕ್ಷ ಕೋಟಿ ರೂ.ಗಳನ್ನು ದೇಶದ ಹಲವು ಯೋಜನೆಗಳಿಗೆ ನೀಡುವ ಮೂಲಕ ದೇಶವನ್ನು ಸದೃಢವಾಗಿ ಕಟ್ಟುವ ಯೋಜನೆ ರೂಪಿಸಿದ್ದಾರೆ. ದಾಡೇಲಿಯಲ್ಲಿಯೂ ಸಹ ಈ ಯೋಜನೆಯ ಸಮಗ್ರ ಚಿತ್ರಣ ನೀಡಲು ಕೇಂದ್ರ ಸ್ಥಾಪಿಸಲಾಗುತ್ತದೆ.
ಪ್ರಧಾನಮಂತ್ರಿಗಳ ಎರಡನೆ ಅವಧಿಯ ಒಂದು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಕಾರ್ಯ ಚಟುವಟಿಕೆಗಳ ಕರಪತ್ರವನ್ನು ಪ್ರತೀ ಬೂತ್‍ಗಳ ಪ್ರತೀ ಮನೆಗಳಿಗೂ ಕೂಡಾ ಸಂಪರ್ಕ ಅಭಿಯಾನದ ಮೂಲಕ ವಿತರಿಸಲಾಗುತ್ತದೆ. ರಾಜ್ಯದಲ್ಲಿಯೂ ಸಹ ಯಡಿಯೂರಪ್ಪನವರಿಂದ ಉತ್ತಮ ಜನಪರ ಕಾರ್ಯಗಳಾಗುತ್ತಿದೆ. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದಾಮಯ್ಯನವರು ವಿನಾಕಾರಣ ಉಪೇಕ್ಷೆ ಮಾಡುತ್ತಾರೆ. ಅವರು ಪ್ರತೀ ಮನೆಗೆ ಹಣ ನೀಡುವ ಮಾತನಾಡುತ್ತಾರೆ. ಆದರೆ ಭಾ.ಜ.ಪ ಪ್ರತೀ ಮನೆಯವರಿಗೆ ದುಡಿಯುವ ಯೋಜನೆ ಹೇಳೀಕೊಡುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಭಾ.ಜ.ಪ ದಾಂಡೇಲಿ ಅಧ್ಯಕ್ಷ ಚಂದ್ರಕಾಂತ ಕ್ಷೀರಸಾಗರ, ಹಳಿಯಾಳ ಅಧ್ಯಕ್ಷ ಗಣಪತಿ ಕರಂಜೇಕರ, ಜೋಯಿಡಾ ಅಧ್ಯಕ್ಷ ಸಂತೋಷ್ ರೇಡ್ಕರ, ಜಿಲ್ಲಾ ಕಾರ್ಯದರ್ಶಿ ಬಸವರಾಜ ಕಲಶೆಟ್ಟಿ, ಜೋಯಿಡಾ ಮಾಜಿ ಅಧ್ಯಕ್ಷ ತುಕಾರಾಮ ಮಾಂಜರೇಕರ, ಹಳಿಯಾಳ ಮಾಜಿ ಅಧ್ಯಕ್ಷ ಶಿವಾಜಿ ನರಸಾನಿ, ಪ್ರಮುಖರಾದ ವಾಸುದೇವ ಪ್ರಭು, ಅಶೋಕ ಪಾಟೀಲ, ಶಾರದಾ ಪರಶುರಾಮ, ಎಮ್.ಎಸ್. ನಾಯ್ಕ, ರಿಯಾಜ ಖಾನ್ , ನಗರಸಭಾ ಸದಸ್ಯರು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು. ಪಕ್ಷದ ಕಾರ್ಯದರ್ಶಿ ಗುರು ಮಠಪತಿ ಸ್ವಾಗತಿಸಿ, ನಿರೂಪಿಸಿದರು.
Be the first to comment