ದಾಂಡೇಲಿ: ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರವರು ನಗರದ ಕಾಗದ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರಿಗೆ, ಭದ್ರತಾ ಸಿಬ್ಬಂದಿಗಳಿಗೆ ಮತ್ತು ನಗರದ ಬ್ಯೂಟಿಶಿಯನ್ಸ್‍ಗಳಿಗೆ ಹಾಗೂ ಬಡಾ ಕಾನಶಿರಡಾದ ಬಡ ರೈತರಿಗೆ ಆಹಾರ ಕಿಟ್‍ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಎಲ್.ಘೋಟ್ನೇಕರ ಅವರು ಕೊರೊನಾ ಸಂಕಷ್ಠದಿಂದ ನಮ್ಮ ಕ್ಷೇತ್ರದ ಜನರು ಸಹ ತತ್ತರಿಸಿದ್ದಾರೆ. ಲಾಕ್‍ಡೌನ್‍ಆರಂಭವಾದಗಿನಿಂದ ಹಳಿಯಾಳ, ದಾಂಡೇಲಿ ಮತ್ತು ಜೊಯಿಡಾ ತಾಲೂಕಿನೆಲ್ಲೆಡೆ ಬಡವರಿಗೆ, ಕೂಲಿ ಕಾರ್ಮಿಕರಿಗೆ ಮತ್ತು ರೈತಾಪಿ ಜನರಿಗೆ ಅವಶ್ಯಆಹಾರ ವಸ್ತುಗಳನ್ನು, ತರಕಾರಿಗಳನ್ನು ಮತ್ತು ಮಾಸ್ಕಗಳನ್ನು ವಿತರಿಸುವ ಕಾರ್ಯ ಮಾಡುತ್ತಿದ್ದೇವೆ. ಕ್ಷೇತ್ರದಲ್ಲಿಒಟ್ಟು 10 ಸಾವಿರ ಆಹಾರ ಕಿಟ್‍ಗಳನ್ನು ವಿತರಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಹಳಿಯಾಳ ಎ.ಪಿ.ಎಂ.ಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ, ಜಿ.ಪಂ ಮಾಜಿ ಸದಸ್ಯ ವಾಮನ ಮಿರಾಶಿ, ದಾಂಡೇಲಪ್ಪ ಬ್ಯಾಂಕ್‌ನ ಮುಖ್ಯ ಕಾರ್ಯ ನಿರ್ವಾಹಕ ಕೃಷ್ಣಾ ಪೂಜಾರಿ, ರವಿ ತೋರಣಗಟ್ಟಿ, ಮಾರುತಿ ಕಾಂಬ್ರೇಕರ, ಗಣಪತಿ ಬೇಕನಿ ,ದಾಂಡೇಲಿ ಮಜ್ದೂರು ಸಂಘದ ಪದಾಧಿಕಾರಿಗಳಾದ ಸರ್ಜಿತ್ ಸಿಂಗ್, ರೂಪೇಶ ಪವಾರ್, ಮಂಜುನಾಥ ಸುಂಕದ, ಪ್ರಾನ್ಸಿಸ್, ಕಿಶೋರ, ಕರಣ್ ಸಿಂಗ್, ದೇವಾನಂದ ಸಡೇಕರ, ಶ್ರೀಕಾಂತ ಗವಸ, ರೂಪೇಶ ಸಾವಂತ, ಎನ್.ಎಚ್.ಪಾಟೀಲ್‍ಮುಂತಾದವರಿದ್ದರು,
Be the first to comment