ದಾಂಡೇಲಿ: ದಾಂಡೇಲಿಯ ಒಂಬತ್ತು ವರ್ಷದ ಬಾಲಕಿಯೋರ್ವಳಿಗೆ ಕೋವಿಡ್ 19 , ಕೊರೊನಾ ಸೋಂಕು ದೃಡವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಶನಿವಾರದ ಬುಲೆಟಿನ್ ಇದನ್ನು ಕಚಿತಪಡಿಸಲಿದ್ದು, ಬಾಲಕಿ ಹಳಿಯಾಳ ರಸ್ತೆಯ ಅಲೈಡ್ ಏರಿಯಾದಲ್ಲಿ ಹೋಮ್ ಕ್ವಾರೆಂಟೈನ್‌ನಲ್ಲಿದ್ದ ಬಗ್ಗೆ ಮಾಹಿತಿಯಿದೆ. ಈಕೆ ಮುಂಬೈ ರಿಟರ್ನ ಎನ್ನಲಾಗುತ್ತಿದೆ.. ಈಗಾಗಲೇ ದಾಂಡೇಲಿಯಲ್ಲಿ ನಾಲ್ಕು ಸೋಂಕಿನ ಪ್ರಕರಣಗಳು ದಾಖಲಾಗಿದ್ದು ಅವರಲ್ಲಿ ಇಬ್ವಬರು ಗುಣಮುಖರಾಗಿ ಬಂದಿದ್ದಾರೆ. ಇದು ಐದನೆಯ ಪ್ರಕರಣವಾಗಿದೆ. ಒಂಬತ್ತು ವರ್ಷದ ಬಾಲಕಿಗೆ ಕೊರೊನಾ ಪಾಸಿಟಿವ್ ಎಂಬುದು ಇದೀಗ ನಗರದಲ್ಲಿ ಆತಂಕ ಹೆಚ್ಚಿಸಿದೆ.
ಇದರ ಜೊತೆಗೆ ಬುಧವಾರ ಜೋಯಿಡಾದಲ್ಲಿ ಒಂದು ಹಾಗೂ ಹಳಿಯಾಳದಲ್ಲಿ ಒಂದು ಕೊರೊನಾ ಪಾಸಿಟಿವ್ ಬಂದಿದ್ದು, ಒಟ್ಟೂ ಜಿಲ್ಲೆಯಲ್ಲಿ ಶನಿವಾರ ಆರು ಪಾಸಿಟಿವ್ ಬಂದರುವ ಬಗ್ಗೆ ಮಾಹಿತಿಯಿದೆ. ಮದ್ಯಾಹ್ನದ ಬುಲೆಟಿನ್ ಇದನ್ನು ಖಚಿತಪಡಿಸಬೇಕಿದೆ.
ಪತ್ರಿಕೆಯ ರೂಪರೇಶೆ ಚೆನ್ನಾಗಿದೆ.ಹೊಸತನ ಇದೆ
ಧನ್ಯವಾದಗಳು ಸರ್…
ಲೇಖನ… ಕವಿತೆ ಕಳಿಸಿ….