ಕೊರೊನಾ ಸೋಂಕಿತ ಹಳಿಯಾಳ-ದಾಂಡೇಲಿಯ ಬಾಲಕ-ಬಾಲಕಿ ಕಾರವಾರ ಕಿಮ್ಸ್‌ಗೆ ಶಿಪ್ಟ್

ಕೊರೊನಾ ವರದಿ

ದಾಂಡೇಲಿ: ಕೋವಿಡ್‌ 19 ಸೋಂಕು ದೃಢವಾದ ದಾಂಡೇಲಿಯ ಒಂಬತ್ತು ವರ್ಷದ ಬಾಲಕಿ ಹಾಗೂ ಹಳಿಯಾಳದ 12 ವರ್ಷದ ಬಾಲಕನನ್ನು ಕಾರವಾರದ ಕಿಮ್ಸ್‌ನ ಕೊರೊನಾ ವಾರ್ಡಗೆ ಸ್ಥಳಾಂತರಿಸಲಾಗಿದೆ.

ದಾಂಡೇಲಿಯ ಸೋಂಕಿತ ಈ ಬಾಲಕಿ ಹಳಿಯಾಳ ರಸ್ತೆಯ ಅಲೈಡ್‌ ಏರಿಯಾದ ತನ್ನ ಅಜ್ಜಿ ಮನೆಯಲ್ಲಿ ಹೋಮ್‌ ಕ್ವಾರೆಂಟೈನ್‌ನಲ್ಲಿದ್ದಳು. ಶನಿವಾರ ಈಕೆಯ ಪರೀಕ್ಷಾ ವರದಿ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಈಕೆಗೆ ದಾಂಡೇಲಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಕಾರವಾರಕ್ಕೆ ಕರೆದೊಯ್ಯಲಾಗಿದೆ.

ಈ ಬಾಲಕಿ ತನ್ನ ಸಂಬಂಧಿಗಳ ಜೊತೆ ಕಳೆದ ಮೂರು ತಿಂಗಳ ಹಿಂದೆಯೇ ಮುಂಬೈಗೆ ಪ್ರವಾಸ ಹೋಗಿ ಜೂನ್‌ 7 ರಂದು ದಾಂಡೇಲಿಗೆ ಮರಳಿದ್ದಳು. 10 ವರ್ಷದ ಒಳಗಿನ ಮಕ್ಕಳನ್ನು ಸಾಂಸ್ಥಿಕ ಕ್ವಾರೆಂಟೈನ್‌ನಲ್ಲಿ ಇಡಬಾರದೆಂಬ ನಿಯಮವಿದ್ದುದರಿಂದ ಈಕೆಯನ್ನು ಹೋಮ್‌ ಕ್ವಾರೆಂಟೈನ್‌ ಮಾಡಲಾಗಿತ್ತು. ಈಕೆಯ ಜೊತೆ ಬಂದ ಸಂಬಂದಿಗಳನ್ನು ಸಾಂಸ್ಥಿಕ ಕ್ವಾರೆಂಟೈನ್ನಲ್ಲಿಡಲಾಗಿದೆ. ಇದೀಗ ಮನೆಯಲ್ಲಿದ್ದ ಜನರನ್ನು ಹಾಗೂ ಆಕೆಯ ಸಂಪರ್ಕಿತರನ್ನು ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ.

ಹಳಿಯಾಳದಲ್ಲಿಯೂ ಎರಡು ಪ್ರಕರಣಗಳು ಶನಿವಾರ ಧೃಡವಾಗಿದ್ದು ಅವರಲ್ಲಿ 12 ವರ್ಷದ ಬಾಲಕನಿದ್ದಾನೆ. ಮತ್ತೋರ್ವ ಆತನ ಅಜ್ಜ ನಾಗಿದ್ದಾನೆ. ಇದು ಕನ್ಯಾಕುಮಾರಿ ಸಂಪರ್ಕದಿಂದ ಬಂದ ಸೋಂಕಾಗಿದೆ. ಈ ಇಬ್ಬರೂ ಸೋಂಕಿತರೂ ಸಾಂಸ್ಥಕ ಕ್ವಾರೆಂಟೈನ್‌ನಲ್ಲಿದ್ದವರಾಗಿದ್ದಾರೆ.

ಜೋಯಿಡಾದಲ್ಲಿ ಶನಿವಾರ 25 ವರ್ಷದ ಓರ್ವ ಮಹಿಳೆಗೂ ಸಹ ಸೋಂಕು ದೃಢವಾಗಿದ್ದು ಈ ಕೆ ಕೂಡಾ ಮಹಾರಾಷ್ಟ್ರದಿಂದ ಬಂದವಳಾಗಿದ್ದಾಳೆ. ಈಕೆ ಸಾಂಸ್ಥಿಕ ಕ್ವಾರೆಂಟೈನಲ್ಲಿದ್ದಳು.

ಇಂದು ಬಿಡಗಡೆಯಾದ ಹೆಲ್ತ ಬುಲೆಟಿನ್‌ನಲ್ಲಿ ಜಿಲ್ಲೆಯಲ್ಲಿ ಶನಿವಾರ ಒಟ್ಟೂ ಐದು ಜನರಿಗೆ ಸೋಂಕು ದೃಢವಾಗಿರುವ ವರದಿಯಾಗಿದೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*