ಮುಂಬೈ: ಕೊರೋನಾದಿಂದಾಗಿ ಕ್ರಿಕೆಟಿಗರು ಮನೆಯಲ್ಲೇ ಲಾಕ್ ಡೌನ್ ಆಗಿ ತಿಂಗಳುಗಳೇ ಕಳೆದಿವೆ. ಹೀಗಾಗಿ ಮತ್ತೆ ಪಂದ್ಯಕ್ಕೆ ತಯಾರಾಗಬೇಕಾದರೆ ಕಠಿಣ ಅಭ್ಯಾಸ ಬೇಕೇ ಬೇಕು.ಪಂದ್ಯಕ್ಕೆ ತಯಾರಾಗಲು ಇನ್ನು ನಾಲ್ಕು ವಾರದ ತರಬೇತಿ ಅವಶ್ಯವಿದೆ ಎಂದು ಭಾರತೀಯಕ್ರಿಕೆಟಿಗ ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ದೇಹ ಈಗಾಗಲೇ ಕೆಲಸ ಮಾಡದೇ ಜಡವಾಗಿದೆ. ಮತ್ತೆ ಹಳಿಗೆ ಬರಬೇಕಾದರೆ ಕನಿಷ್ಠ ನಾಲ್ಕು ವಾರಗಳ ತರಬೇತಿ ಅಗತ್ಯ. ಅದೂ ಒಂದೇ ದಿನ ಕಠಿಣ ಅಭ್ಯಾಸ ನಡೆಸಲು ಸಾಧ‍್ಯವಿಲ್ಲ. ಮೊದಲು ನಿಧಾನವಾಗಿ ತೊಡಗಿಸಿಕೊಂಡು ನಂತರ ಕಠಿಣ ಅಭ್ಯಾಸಕ್ಕೆ ದೇಹ ಒಗ್ಗಿಸಿಕೊಳ್ಳಬೇಕು ಎಂದು ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.
Be the first to comment