Site icon ಒಡನಾಡಿ

ಪರಮೇಶ್ವರಪ್ಪ ಕುದರಿಯವರ ಕನ್ನಡ ಶಾಯಿರಿಗಳು

ನಾನು ಸತ್ತ ಮ್ಯಾಲೆ ನನ್ನ ಸಮಾಧಿ ಹತ್ರ
ದಯವಿಟ್ಟು ತಪ್ಪದೇ ವೈ ಫೈ ಕನೆಕ್ಟ್ ಮಾಡ್ರಿ!
ನನ್ನ ಗೆಳ್ಯಾರು ಕಂಜೂಸ್ ಅದಾರ ವೈ ಫೈ ಬಳಸಾಕಾದ್ರೂ ನನ್ನ ಸಮಾಧಿ ಹತ್ರ ಬರ್ತಾರ!!


ಎದಿ ಹಿಡಕೊಂಡ ನರಳಾಕ ಹತ್ತಿದ್ದವನ ಹತ್ರ
ಹೋಗಿ ಏನಾತೋ ಅಂತ ಕೇಳಿದೆ!
ಅಕೀನ ಲವ್ ಮಾಡ್ತೀನಿ ಅಂತ ಹೇಳಾಕ್ಕಾಗದ
ಎದಿಯಾಗಿಟಗೊಂಡ ತಿರಗಾಕ ಹತ್ತೇನಿ ಅದಕ್ಕ
ಎದಿ ಭಾರ ಆಗಿ ನೋವಾಕ ಹತ್ತೇತಿ ಅಂದ!!


ಗ್ವಾಡಿ ಮೇಲೆ ಯಾರ ಚಿತ್ರ ಬೇಕಾದರೂ ಹಾಕಿ
ಎಷ್ಟ ಬೇಕಾದಷ್ಟ ಖುಷಿ ಪಡಬಹುದು , ಆದರ
ಮನಸನ್ನೂ ಕನ್ನಡ್ಯಾಗ ಯಾರ ಚಿತ್ರ ಇರತೈತೋ
ಅವರು ಮಾತ್ರ ಪ್ರೀತಿ ಪಡೆಯಲು ಯೋಗ್ಯರು!


ದಾರ್ಯಾಗ ನಡಕೊಂಡ ಹೊಂಟಿದ್ದೆ ಅಕಿ ಸಿಕ್ಕಳು
ನನ್ನ ನೋಡಿ ನಾಚಿಗೊಂಡು ನಸು ನಕ್ಕಳು !
ಮನಸನ್ಯಾಂದು ಹೇಳಿ ಬಿಡು ಅಂತು ನನ್ನ ಮನಸು
ಆದ್ರ ಧೈರ್ಯ ಎಲ್ಲಿಂದ ಬರಬೇಕ ಹೇಡಿ ಹೃದಯಕ್ಕ!!

  #ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಲೇಖಕರ ಪರಿಚಯ:
ಪರಮೇಶ್ವರ ಕುದರಿಯವರು ಮೂಲತಃ ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಗ್ರಾಮದವರು. ಪ್ರಸ್ತುತ ಚಿತ್ರದುರ್ಗ ನಿವಾಸಿ. ನಿವೃತ್ತ ಪ್ರೌಢಶಾಲಾ ಶಿಕ್ಷಕರು. ಕತೆ,ಕವನ,ಶಾಯಿರಿ ಬರೆಯುವುದು, ಗಣ್ಯರ ಸಂದರ್ಶನ ಮಾಡುವುದು.ಮಿಮಿಕ್ರಿ, ಕರೋಕೆ ಗಾಯನ ಇವರ ಹವ್ಯಾಸಗಳು. ಈ ವರೆಗೆ ಒಂಬತ್ತು ಕೃತಿಗಳು ಪ್ರಕಟವಾಗಿವೆ. ಉದಯ, ಸುವರ್ಣ, ಝೀ ಕನ್ನಡ, ಟಿವಿ 9 ದಲ್ಲಿ ಹಾಸ್ಯ ಕಾರ್ಯಕ್ರಮ, ಚಂದನ ದಲ್ಲಿ ಬೆಳಗು, ಥಟ್ ಅಂತ ಹೇಳಿ ಕಾರ್ಯಕ್ರಮ ಪ್ರಸಾರವಾಗಿವೆ.ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ, ಗೌರವ ಡಾಕ್ಟರೇಟ್ ಪಡೆದಿದ್ದಾರೆ.
Exit mobile version