Site icon ಒಡನಾಡಿ

ಕೆ.ಡಿ.ಸಿ.ಸಿ. ಬ್ಯಾಂಕ್ : ಪ್ರಸಕ್ತ ವರ್ಷದ ಲಾಭವೆಷ್ಟು? ಶೇರು ಬಂಡವಾಳವೆಷ್ಟು?

ಉತ್ತರಕನ್ನಡ ಜಿಲ್ಲೆಯ ಪ್ರತಿಷ್ಠಿತ ಮಧ್ಯವರ್ತಿ ಬ್ಯಾಂಕ್ ಆಗಿರುವ ಕೆಡಿಸಿಸಿ‌ ಬ್ಯಾಂಕ್ 2025-26ನೇ ಸಾಲಿನಲ್ಲಿ 27.35 ಕೋಟಿ ನಿಕ್ಕಿ ಲಾಭ ಗಳಿಸಿದೆ ಎಂದು ‌ಕೆ.ಡಿ.ಸಿ.ಸಿ. ಬ್ಯಾಂಕ್‌ ಅಧ್ಯಕ್ಷ ಶಿವರಾಮ ಹೆಬ್ಬಾರ ತಿಳಿಸಿದ್ದಾರೆ.

ಶುಕ್ರವಾರ ಬ್ಯಾಂಕ್ ನ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಬ್ಯಾಂಕಿನ ಶೇರು ಭಂಡವಾಳವು 145.11ಕೋಟಿ
ರೂ ಗಳಿಂದ 156.85ಕೋಟಿ ರೂ ಗಳಿಗೆ ಏರಿಕೆಯಾಗಿದೆ. ನಿಧಿಗಳು 351.44ಕೋಟಿ ಗಳಿಂದ 382.37ಕೋಟಿ ರೂಗಳಾಗಿವೆ. ಠೇವುಗಳು‌ 3569.45ಕೋಟಿ ಗಳಿಂದ 4191.41ಕೋಟಿಗೆ ಏರಿಕೆಯಿಗಿದೆ. ಒಟ್ಟೂ ಆದಾಯ 411.27ಕೋಟಿ ರೂ ಗಳಾಗಿದೆ. ಸಾಲಬಾಕಿ 3384.85ಕೋಟಿ ರೂ. ಗಳಷ್ಟಿದ್ದು ದುಡಿಯುವ ಬಂಡವಾಳ 5269.46
ಕೋಟಿ ರೂ ತಲುಪಿದೆ ಎಂದರು. ಈ
ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಕೃಷ್ಣಾ ದೇಸಾಯಿ ಹಾಗೂ ನಿರ್ದೇಶಕರುಗಳು
ಇದ್ದರು.

Exit mobile version