ದಾಂಡೇಲಿ: ಫೆಬ್ರುವರಿ 28 ರಂದು ಆಲೂರಿನಲ್ಲಿ ನಡೆಯಲಿರುವ ದಾಂಡೇಲಿ ತಾಲೂಕಾ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಉಮಾಕಾಂತ ಪಾಟೀಲರನ್ನು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಗೌರವಿಸಿ ಆಮಂತ್ರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮ್ಮೇಳನಾಧ್ಯಕ್ಷ ಉಮಾಕಾಂತ ಪಾಟೀಲ್ ಇದು ನನ್ನ ಬದುಕಿನ ಭಾಗ್ಯದ ಕ್ಷಣ ಎಂದು ಭಾವಿಸಿದ್ದೇನೆ. ನನ್ನನ್ನು ಗುರುತಿಸಿ ಸಮ್ಮೇಳನಾಧ್ಯಕ್ಷತೆಯ ಗೌರವ ನೀಡಿದ ಕಸಾಪದ ಎಲ್ಲ ಪದಾಧಿಕಾರಿಗಳ ಪ್ರೀತಿಯನ್ನು ಸ್ವೀಕರಿಸುತ್ತಿದ್ದೇನೆ. ಸಮ್ಮೇಳನದ ಯಶಸ್ಸಿಗೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಮನವಿ ಮಾಡಿದರು. ಉಮಾಕಾಂತ ಪಾಟೀಲರ ಧರ್ಮಪತ್ನಿ ಲತಾ ಪಾಟೀಲ ಜೊತೆಗಿದ್ದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್ ವಾಸರೆ, ಜಿಲ್ಲಾ ಕೋಶಾಧ್ಯಕ್ಷ ಮುರ್ತುಜಾ ಹುಸೇನ, ಕಸಾಪ ದಾಂಡೇಲಿ ತಾಲೂಕು ಅಧ್ಯಕ್ಷ ನಾರಾಯಣ ನಾಯ್ಕ, ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಜಿ.ಪಂ. ಮಾಜಿ ಸದಸ್ಯ ವಾಮನ ಮಿರಾಶಿ, ತಾ.ಪಂ. ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ನಾಯಕ, ಕಸಾಪ ಕಾರ್ಯದರ್ಶಿ ಗುರುಶಾಂತ ಜಡೆಹಿರೇಮರಠ, ಪ್ರವೀಣ ನಾಯ್ಕ, ಕೋಶಾಧ್ಯಕ್ಷ ಶ್ರೀಮಂತ ಮದರಿ, ಪ್ರಮುಖರಾದ ರೋಷನ್ ನೇತ್ರಾವಳಿ, ಭೀಮಾಶಂಕರ ಅಜನಾಳ, ನರೇಶ ನಾಯ್ಕ, ಗಣಪತಿ ಬೇಖನಿ, ಕೃಷ್ಣಾ ಪಾಟೀಲ, ಸುರೇಶ ಪಾಲನಕರ, ಕಲ್ಪನಾ ಪಾಟೀಲ, ರೇಷ್ಮಾ ಗುಡಿಮನಿ ಮುಂತಾದವರಿದ್ದರು.