ಫೆಬ್ರುವರಿ 28 ರಂದು ಆಲೂರಿನಲ್ಲಿ ನಡೆಯಲಿರುವ ದಾಂಡೇಲಿ ತಾಲೂಕಾ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ತಾಲ್ಲೂಕಾಡಳಿತd ಕಚೇರಿಯಲ್ಲಿ ತಹಶೀಲ್ದಾರ ಶೈಲೇಶ ಪರಮಾನಂದ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು ಕನ್ನಡ ಸಾಹಿತ್ಯ ಸಮ್ಮೇಳನ ಈ ಬಾರಿ ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ. ಗ್ರಾಮೀಣ ಭಾಗದಲ್ಲಿ ಕನ್ನಡ ಭಾಷೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಸಮ್ಮೇಳನವು ನಡೆಯಲಿದೆ. ಇದರ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ಮತನಾಡಿ ದಾಂಡೇಲಿ ಹೊಸ ತಾಲ್ಲೂಕಾಗಿ ರಚನೆಯಾದ ನಂತರ ಇದು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ. ಅನುದಾನದ ಕೊರತೆಯ ನಡುವೆ ದಾಂಡೇಲಿ ಹಾಗೂ ಆಲೂರಿನ ಜನತೆ ಸಹಕಾರದಿಂದ ಸಮ್ಮೇಳನ ನಡೆಯುತ್ತಿದೆ. ತಾಲೂಕಿನ ಹಿರಿಮೆಯನ್ನು ಬಿಂಬಿಸುವ ರೀತಿಯಲ್ಲಿ ಲಾಂಛನ ನಿರ್ಮಿಸಲಾಗಿದೆ ಎಂದರು.
ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಣಾ ಅಧಿಕಾರಿ ಟಿ.ಸಿ. ಹಾದಿಮನಿ ಮಾತನಾಡಿ ಸಮ್ಮೇಳನವನ್ನು ಹಬ್ಬದ ರೀತಿಯಲ್ಲಿ ಆಚರಿಸೋಣ ಎಂದರು.
ಈ ಸಂದರ್ಭದಲ್ಲಿ ಆಲೂರು ಗ್ರಾಮ ಪಂಚಾಯತ ಅಧ್ಯಕ್ಷೆ ನೂರ ಜಹಾನ್ ನದಾಪ್ , ಪಿಎಸ್ಐ ಗಳಾದ ಅಮೀನ್ ಅತ್ತಾರ, ಕಿರಣ ಪಾಟೀಲ, ಕಸಾಪ ಜಿಲ್ಲಾ ಕೋಶಾಧ್ಯಕ್ಷ ಮುರ್ತುಜಾ ಹುಸೇನ, ಕಸಾಪ ದಾಂಡೇಲಿ ತಾಲೂಕು ಅಧ್ಯಕ್ಷ ನಾರಾಯಣ ನಾಯ್ಕ, ಆಲೂರು ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮಣ್ ಜಾಧವ್, ಲಕ್ಷ್ಮಿ ಹರಿಜನ, ಜಿ.ಪಂ. ಮಾಜಿ ಸದಸ್ಯ ವಾಮನ ಮಿರಾಶಿ, ತಾ.ಪಂ. ಮಾಜಿ ಸದಸ್ಯ ಗಿರೀಶ ಠೋಸೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ಬಿಜೆಪಿ ಅಧ್ಯಕ್ಷ ಬುದುವಂತ ಗೌಡ ಪಾಟೀಲ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ನಾಯಕ, ಕಸಾಪ ಕಾರ್ಯದರ್ಶಿ ಗುರುಶಾಂತ ಜಡೆಹಿರೇಮರಠ, ಪ್ರವೀಣ ನಾಯ್ಕ, ಕೋಶಾಧ್ಯಕ್ಷ ಶ್ರೀಮಂತ ಮದರಿ, ಪ್ರಮುಖರಾದ ರೋಷನ್ ನೇತ್ರಾವಳಿ, ಎಚ್.ಪಿ.ಪರಶುರಾಮ, ಹನುಮಂತ ಕಾರ್ಗಿ, ಭೀಮಶಂಕರ ಅಜನಾಳ, ನರೇಶ ನಾಯ್ಕ, ಗಣಪತಿ ಬೇಖನಿ, ರಾಮಪ್ಪ ಸಿದ್ದರ, ಸುರೇಶ ಕಾಮತ, ಕೃಷ್ಣಾ ಪಾಟೀಲ, ಸುರೇಶ ಪಾಲನಕರ, ಆಶಾ ದೇಶಭಂಡಾರಿ, ಕಲ್ಪನಾ ಪಾಟೀಲ, ರೇಷ್ಮಾ ಗುಡಿಮನಿ, ಗೋವಿಂದ ಮೇಲಗಿರಿ ಮುಂತಾದವರಿದ್ದರು.