Site icon ಒಡನಾಡಿ

ಪರಮೇಶ್ವರ ಕುದರಿಯವರ ಹತ್ತು ಹನಿಗವಿತೆಗಳು

ಮಕರಂದ*
******
ನನ್ನವಳು
ಘಮ ಘಮಿಸುವ
ಶ್ರೀಗಂಧ
ನಾನವಳ
ಸವಿ ಸವಿ
ಮಕರಂದ!!
###

*ಆಸೆ*
*****
ಅವಳ
ಕೊರಳ
ಸರದಿ
ಮುತ್ತಾಗುವ
ಆಸೆ
ನನಗೆ!!
###

*ಸಂಗಮ*
********
ನನ್ನ ಅವಳ
ಸಂಗಮ
ಎರಡು
ಹೃದಯಗಳ
ಮಧುರ ಸಂಗಮ
ಅದು
ಹೃದಯಂಗಮ!
###

*ಜಾಲಿ*
******
ನಮ್ಮ ಸುತ್ತ
ಇರದೇ
ಇದ್ದರೆ
ಯಾವುದೇ
ಬೇಲಿ,
ಲೈಫ್ ಪೂರ್ತಿ
ಜಾಲಿಯೋ
ಜಾಲಿ!!
###

*ಶಾಶ್ವತ*
******
ಇಲ್ಲಿ
ಪ್ರೀತಿಯೊಂದೇ
ಶಾಶ್ವತ!
ನಾವು
ಯಾರೂ
ಅಲ್ಲ!!
  ###

*ಸಾಧು*
*******
ನನ್ನ
ಹೆಂಡತಿ
ಮಕ್ಕಳ
ಎದುರು
ನಾನು
ತುಂಬಾ
ಸಾಧು!
###

*ಪ್ರೇಕ್ಷಕ*
*******
ಏನೇ
ಮನಮೋಹಕ
ಇದ್ದರೂ
ಚಪ್ಪಾಳೆ
ತಟ್ಟಿ
ಪ್ರೋತ್ಸಾಹ
ನೀಡುತ್ತಾನೆ
ಪ್ರೇಕ್ಷಕ!!
  ###

*ದುಡಿಮೆ*
*******
ಅವಕಾಶ
ಸಿಗುವುದು
ತುಂಬಾ
ಕಡಿಮೆ!
ಸಿಕ್ಕಾಗಲೇ
ಮಾಡಿಕೊಳ್ಳಬೇಕು
ಸಾಕಷ್ಟು
ದುಡಿಮೆ!!
###

*ಸ್ನಾನ*
*****
ಮಾಡದಿದ್ದರೂ
ನಡೆದೀತು
ಧ್ಯಾನ!
ನಿತ್ಯವೂ
ಮಾಡಲೇಬೇಕು
ಸ್ನಾನ!!
###

*ಚುಟುಕು*
*********
ಹಕ್ಕಿ ತನ್ನ
ಮರಿಗೆ
ಕೊಟ್ಟಂತೆ
ಗುಟುಕು
ಇರಬೇಕು
ಓದುವ
ಚುಟುಕು!

*ಪರಮೇಶ್ವರಪ್ಪ ಕುದರಿ*
       ಚಿತ್ರದುರ್ಗ

Exit mobile version