Site icon ಒಡನಾಡಿ

ಜಲದಿಗ್ಬಂಧನ : ಗೋಪಾಲ ಭಾಶಿಯವರ ‘ತನಗ’ ಪ್ರಕಾರದ ಕವನ

( ಪ್ರತಿ ಸಾಲಿನಲ್ಲೂ 7+7+7+7=28 ಅಕ್ಷರಗಳು ಒಂದೊಂದು ಚರಣಕ್ಕೆ)

=============================

ಎಲ್ಲೆಡೆ ದಿಗ್ಬಂಧನ
ವರುಣಾರ್ಭಟ ಭಯ.
ಕಾರ್ಗತ್ತಲೆಯ ಮೋಡ
ಸುರಿಯುತ್ತಿದೆ ನೋಡ ||

ಮುಸುಕಿದ ಬಾನಲಿ
ಕಾಣೆಯಾಗಿದೆ ಭಾನು
ಬಿರುಗಾಳಿಯ ಭೀತಿ
ಕಡಲುಕ್ಕುವ ರೀತಿ||

ಬೆಟ್ಟಗಳೆ ಕುಸಿದು
ಊರುಕೇರಿ ನುಂಗಿವೆ.
ಕಾಣೆಯಾದ ಜೀವ್ಗಳೆ
ಹೊಳೆಯಲ್ಲಿ ತೇಲಿವೆ||

ಕೆರೆ ಕಟ್ಟೆಯೊಡೆದು
ಹೊಲ್ಗದ್ದೆ ತೋಟಗಳು
ನೀರುಂಡು ಮುಳುಗಿವೆ
ಹೊಳೆಹಳ್ಳ ಉಕ್ಕಿವೆ ||

ಕೃಷಿಕರ ಕಣ್ಣೀರು
ಬಡವರಾ ಸಂಕಷ್ಟ
ಮಳೆಯೆಲ್ಲ ನುಂಗಿದೆ
ಕರುಳು ಕಿತ್ತಂತಿದೆ||

ಹಾದಿ ಬೀದಿಯಲೆಲ್ಲ
ಪ್ರವಾಹದ್ದೇ ಪ್ರಳಯ
ಮನೆ ಮಾರು ಕೊಚ್ಚಿವೆ
ಗುಡಿ ಗೋಪ್ರ ನುಂಗಿವೆ||

ಮಳೆಯ ಹುಚ್ಚಾಟಕೆ
ಇಳೆಯಾಗಿದೆ ಬಲಿ.
ಬಿಡುಗಡೆ ಕಾದಿದೆ
ಹೂ ಬಿಸಿಲು ಬೇಡಿದೆ ||

Exit mobile version