ಕಲಘಟಗಿ: ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ವೊಂದು ಮರಕ್ಕೆ ಡಿಕ್ಕಿ(Accident) ಹೊಡೆದಿದ್ದು, ಚಾಲಕನ ಒಂದು ಕಾಲು ಕಟ್ ಆಗಿ, ನಾಲ್ವರು ಪ್ರಯಾಣಿಕರ ಸ್ಥಿತಿ ಗಂಭೀರವಾದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ(Kalaghatagi) ತಾಲೂಕಿನ ರಾಮನಾಳ ಕ್ರಾಸ್ ಬಳಿ ನಡೆದಿದೆ.
ಅಪಘಾತಕ್ಕೊಳಕ್ಕಾದ ಬಸ್ಸು ಕುಮಟಾ ಸಾರಿಗೆ ಘಟಕಕ್ಕೆ ಸೇರಿದ್ದಾಗಿದ್ದು, ಬಸ್ ಚಾಲಕ ಕುಮಟಾ ಗ್ರಾಮದ ಹೆಗಡೆ ನಿವಾಸಿ ಕಂಚು ಗೊವಿಂದ ನಾಯ್ಕ ಎಂದು ತಿಳಿದು ಬಂದಿದೆ.
ಧಾರವಾಡ ಜಿಲ್ಲೆಯ ಕಲಘಟಗಿ(Kalaghatagi) ತಾಲೂಕಿನ ರಾಮನಾಳ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ವೊಂದು ಮರಕ್ಕೆ ಡಿಕ್ಕಿ(Accident) ಹೊಡೆದಿದ್ದು, ಚಾಲಕನ ಒಂದು ಕಾಲು ಕಟ್ ಆಗಿ, ನಾಲ್ವರು ಪ್ರಯಾಣಿಕರ ಸ್ಥಿತಿ ಗಂಭೀರವಾದ ಘಟನೆ ನಡೆದಿದೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಸ್ಸು ಹುಬ್ಬಳ್ಳಿಯಿಂದ ಕುಮಟಾಗೆ ಹೋಗುತ್ತಿದ್ದು, 30 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ಕುರಿತು ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.