Site icon ಒಡನಾಡಿ

ಕರ್ನಾಟಕ ಲೇಖಕಿಯರ ಸಂಘದ 2021 ಮತ್ತು 2022ನೇ ಸಾಲಿನ ದತ್ತಿ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಲೇಖಕಿಯರ ಸಂಘ 2021 ಮತ್ತು 2022ನೇ ಸಾಲಿನ ದತ್ತಿ ಪ್ರಶಸ್ತಿಗಳು ಪ್ರಕಟಿಸಿದ್ದು ಈ ಬಗ್ಗೆ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಎಚ್.ಎಲ್. ಪುಷ್ಪಾ ಪ್ರಕಟಣೆ ನೀಡಿದ್ದಾರೆ

ಸಮಗ್ರ ಸಾಧನೆಗಾಗಿ ಕೊಡುವ ಪ್ರಶಸ್ತಿಗಳು ಈ ಕೆಳಗಿನಂತಿವೆ.

2021 ನೇ ಸಾಲಿಗೆ ರೇಣುಕಾ ಕೋಡಗುಂಟಿಯವರ ‘ನಿಲುಗನ್ನಡಿ’ ಹಾಗೂ 2022 ನೇ ಸಾಲಿಗೆ ಶೋಭಾ ಗುನ್ನಾಪುರ ಅವರ ‘ಭೂಮಿಯ ಋಣ’ ಆಯ್ಕೆಯಾಗಿದೆ.

*. ಇಂದಿರಾ ವಾಣಿರಾವ್ (ನಾಟಕ) ಪ್ರಶಸ್ತಿಗೆ 2021 ನೇ ಸಾಲಿಗೆ ಜಯಶ್ರೀ ಸಿ. ಕಂಬಾರ ಅವರ ‘ಹೊಸದಾರಿ’ ನಾಟಕ, 2022 ನೇ ಸಾಲಿಗೆ ಬಿ.ಎಂ. ಭಾರತಿ ಹಾದಿಗೆ ಅವರ ನಿಂ’ಗವ್ವ ನಾಗತಿ ಮತ್ತು ಇತರ ನಾಟಕಗಳು’ ಆಯ್ಕೆಯಾಗಿವೆ.

ತ್ರಿವೇಣಿ ದತ್ತಿನಿಧಿ ( ಕಥೆ/ ಕಾದಂಬರಿ- ಪ್ರಥಮ, ದ್ವಿತೀಯ, ತೃತೀಯ) ಪ್ರಶಸ್ತಿಗೆ 2020 ನೇ ಸಾಲಿನಲ್ಲಿ ಶ್ರೀದೇವಿ ಕೆರೆಮನೆಯವರ ‘ಚಿತ್ತಚಿತ್ತಾರ’ (ಕಥಾ ಸಂಕಲನ), ಜಯಂತಿ ಚಂದ್ರಶೇಖರ ಅವರ ‘ವಸುಂಧರ’ (ಕಾದಂಬರಿ), ಮಮತಾ ವಾರನಹಳ್ಳಿಯವರ ‘ಕಾಡು ಮಲ್ಲಿಗೆ’ (ಕಾದಂಬರಿ),

2021 ನೇ ಸಾಲಿನಲ್ಲಿ ಆಶಾ ರಘು ಅವರ ‘ಮಾಯೆ’ ( ಕಾದಂಬರಿ) ಅಕ್ಷತಾ ಕೃಷ್ಣಮೂರ್ತಿ ಅವರ ‘ಅಬ್ಬೋಲಿ’ (ಕಥಾ ಸಂಕಲನ), ನೂರ್ ಜಹಾನ್ ಹೊಸಪೇಟೆ ಅವರ ‘ ಅನಾಥೆ’ (ಕಥಾಸಂಕಲನ),

2022 ನೇ ಸಾಲಿಗೆ ಮಾಲತಿ ಹೆಗಡೆಯವರ ‘ಅವನಿ’ (ಕಥಾ ಸಂಕಲನ), ಅರ್ಪಣ. ಎಚ್.ಎಸ್ ಅವರ ‘ಕೆಂಪು ಹಾಗೂ ಇತರ ಬಹುಮಾನಿತ ಕಥೆಗಳು’ ಮತ್ತು ಗಾಯತ್ರಿ ರಾಜ್ ಅವರ ‘ಟ್ರಾಯ್’ (ಕಾದಂಬರಿ). ಹೀಗೆ ಅನುಕ್ರಮವಾಗಿ ಮೂರೂ ವರ್ಷದ ಪ್ರಥಮ, ದ್ವಿತೀಯ, ತೃತೀಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

2022ರಲ್ಲಿ ಪ್ರಕಟವಾದ ಎಲ್.ಸಿ.‌ಸುಮಿತ್ರ ಅವರ ‘ಅಂಗೈ ಅಗಲದ ಆಕಾಶ’ ಆಯ್ಕೆಯಾಗಿದೆ.

ಸಮಗ್ರ ಸಾಧನೆಗಾಗಿ ಕೊಡುವ ಪ್ರಶಸ್ತಿಗಳು ಈ ಕೆಳಗಿನಂತಿವೆ.
ಕೆ.ಟಿ. ಬನಶಂಕರಮ್ಮ ಪ್ರಶಸ್ತಿಗೆ ಅನುಕ್ರಮವಾಗಿ 2020 ನೇ ಸಾಲಿಗೆ ಕೊಪ್ಪಳದ ಡಾ.ಮಮ್ತಾಜ್ ಬೇಗಂ,

2021 ನೇ ಸಾಲಿಗೆ ತುಮಕೂರಿನ ರಂಗಮ್ಮ ಹೊದೇಕಲ್ಲು ಹಾಗೂ 2022 ನೇ ಸಾಲಿಗೆ ಶಿರಸಿಯ ಮಾಧವಿ ಭಂಡಾರಿಯವರು ಆಯ್ಕೆಯಾಗಿದ್ದಾರೆ.

ಶ್ರೀಲೇಖಾ ( ಭಾಷಾಂತರ ಸಾಹಿತ್ಯ) 2021ನೇ ಸಾಲಿಗೆ ನಾಗರೇಖಾ ಗಾಂವ್ಕರ್ ಅವರ ‘ದಿ ಡೈರಿ ಆಫ್ ಎ ಯಂಗ್ ಗಲ್೯’ ಕೃತಿ, 2022 ನೇ ಸಾಲಿಗೆ ಮಾಲತಿ‌ ಮುದಕವಿಯವರ ‘ಫಾಸಿಗೆ ಸಾಕ್ಷಿ’ ಕೃತಿಗಳು ಆಯ್ಕೆಯಾಗಿವೆ.

ಪ್ರೇಮಾ ಭಟ್ ಮತ್ತು ಎ.ಎಸ್.ಭಟ್ ದತ್ತಿ (ಪ್ರಕಾಶಕಿ ಮತ್ತು ಲೇಖಕಿ) ಪ್ರಶಸ್ತಿಗೆ 2020ನೇ ಸಾಲಿಗೆ ಸಂಕ್ರಮಣ ಪ್ರಕಾಶನ ಸಂಸ್ಥೆಯ ನೀಲಾಪಾಟೀಲ, 2021ನೇ ಸಾಲಿಗೆ ಮಹಿಳಾ ಸಾಹಿತ್ಯಕ ಹುಬ್ಬಳ್ಳಿ ಪ್ರಕಾಶನದ ಹನುಮಾಕ್ಷಿ ಗೋಗಿ, 2022 ನೇ ಸಾಲಿಗೆ ಕವಿ ಪ್ರಕಾಶನದ ಡಾ.ಎಚ್.ಎಸ್.ಅನುಪಮಾ ಅವರು ಆಯ್ಕೆಯಾಗಿದ್ದಾರೆ.

ಸಂಘದಲ್ಲಿ ಇತ್ತೀಚೆಗೆ ನಡೆದ ಆಯ್ಕೆ ಸಮಿತಿಯಲ್ಲಿ ಈ ಮೇಲಿನ ಕೃತಿಗಳನ್ನು ಆಯ್ಕೆಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರೆಲ್ಲರಿಗೂ ಅಭಿನಂದನೆಗಳು.

ಆಯ್ಕೆ ಸಮಿತಿಯಲ್ಲಿ ಸಾಹಿತಿಗಳಾದ ಎಂ.ಎಸ್.ಆಶಾದೇವಿ, ಡಾ.ಬೈರಮಂಗಲ ರಾಮೇಗೌಡ ಹಾಗೂ ಚಂದ್ರಿಕಾ ಪುರಾಣಿಕ ಇವರುಗಳು ಇದ್ದರು.

ಪ್ರಶಸ್ತಿಯು ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ. ಸಮಾರಂಭವು ಇದೇ ತಿಂಗಳ 23 ರಂದು (23.07.2023) ನಯನ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರರು ಹಾಗೂ ಮಾಜಿ ಸಚಿವೆ ರಾಣಿ ಸತೀಶ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದರ ಜೊತೆಗೆ ಸಂಘದ 2020ನೇ ಸಾಲಿನಲ್ಲಿ ಪ್ರಶಸ್ತಿಗೆ ಆಯ್ಕೆಯಾದವರಿಗೂ ಇದೇ ವೇದಿಕೆಯಲ್ಲಿ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಎಚ್. ಎಲ್. ಪುಷ್ಪಾ ರವರು ಪ್ರಕಟಿಸಿದ್ದಾರೆ

Exit mobile version