ಈ ರಸ್ತೆಯ ಅಂಚಿಗೆ ಒಂದು ಹಳೆ ಮರವಿದೆ
ಎಲ್ಲರ ವಿಶ್ರಾಂತಿಗೆ ನೆರಳು ನೀಡಿದ ಹೆಗ್ಗಳಿಕೆ ಇದರದ್ದು
ಅದಕ್ಕೂ ಜೀವವಿದೆ ಎಂದು ಮೊನ್ನೆಯಷ್ಟೇ ತಿಳೀತು
ಅದು ಅಸುನೀಗಿವ ಮುಂಚೆ ಅದಕ್ಕೆ ಗಟ್ಟಿ ಆಯುಷು
ಗಟ್ಟಿ ಪಿಂಡ ಎಂತಹ ಬಾರಿ ಗಾಳಿಗೂ,ಬಾರಿ ಮಳೆಗೂ
ಬಾರಿ ಬಿಸಿಲಿಗೂ ಜಗ್ಗದ್ದು ,ಕುಗ್ಗಿದ್ದು ಯಾರು ನೋಡಿದಂತಿಲ್ಲ…!
ಅದರ ಪಕ್ಕದಲ್ಲಿ ವನಮಹೋತ್ಸವ ನೆಪದಲ್ಲಿ
ಪ್ರತಿ ವರ್ಷ ವನಪಾಲಕರು ತೋಡುವ ಗುಂಡಿಗೆ
ಗರಿಗರಿ ಶರ್ಟಿನ ರಾಜಕಾರಣಿ ಇಲ್ಲವೇ
ಉದ್ದೇಮಿ ಬಂದು ಗಿಡ ನೆಟ್ಟು ಹೋಗುತ್ತಾರೆ ಕೈ ಕೆಸರಾಗದಂತೆ
ಬಾರಿ ಭಾಷಣ ಮಾಡಿ ಚಪ್ಪಾಳೆ ತಟ್ಟಿಸಿಕೊಂಡು…!
ನೆಟ್ಟ ಗಿಡಕ್ಕೆ ಸರ್ಕಾರಿ ಲೆಕ್ಕದಲ್ಲಿ ಖಾಯಂ ಖಾತೆಯು ಸಿದ್ದ
ಸಂಜೆ ಅರಣ್ಯ ಪರಿವೀಕ್ಷಣಾ ಮಂದಿರದಲ್ಲಿ ಭೂರಿ ಭೋಜನ
ಅಲ್ಲಿ ರಾಶಿ ಪ್ಲಾಸ್ಟಿಕ್ ಬಳಕೆ ನೆಟ್ಟ ಗಿಡ ಉದ್ದಾರ ಆಗುತೋ
ಇಲ್ಲ ತಿಳಿದು ಪ್ಲಾಸ್ಟಿಕ್ ಕರಗಲು ಯುಗಗಳೇ ಬೇಕು..!
ಮಕ್ಕಳು ಎಂದಿಗೂ ಗಿಡ ಕಡೆದಿಲ್ಲ ನಿತ್ಯ ಸತ್ಯ
ದೊಡ್ಡವರು ಗಿಡ ಹಚ್ಚಿ ಬೆಳೆಸಿದ್ದು ಕಾಣುವುದಿಲ್ಲ
ಆದರೂ ಅವರಿಗೆ ಪರಿಸರದ ಭೋದನೆ ಪರಿಸರ ಉಳಿಸಿ ಬೆಳೆಸಿ ಎಂದು….!
ವೃಶ್ಚಿಕಮುನಿ ಪ್ರವೀಣಕುಮಾರ ಸುಲಾಖೆ, ದಾಂಡೇಲಿ