Site icon ಒಡನಾಡಿ

ಇನ್ನು ಮುಂದೆ ಕಸಾಪ ಸದಸ್ಯತ್ವ ಆ್ಯಪ್ ನಲ್ಲಿ…
ಕನ್ನಡ ಸಾಹಿತ್ಯ ಪರಿಷತ್ತಿನ ಆ್ಯಪ್ ಲೋಕಾರ್ಪಣೆ

ಕನ್ನಡ ಸಾಹಿತ್ಯ ಪರಿಷತ್ತಿನ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ ಮೊಬೈಲ್ ಅಪ್ಲಿಕೇನ್ (ಕಸಾಪ ಆ್ಯಪ್ ) ಅಸ್ತಿತ್ವಕ್ಕೆ ಬಂದಿದ್ದು ಇನ್ನು ಮುಂದೆ ಕನ್ನಡ ಸಾಹಿತ್ಯ ಪರಿಷತ್ ನ ಸಮಗ್ರ ಮಾಹಿತಿಗಳ ಜೊತೆಗೆ, ಇನ್ನುಮುಂದೆ ಹೊಸದಾಗಿ ಅಜೀವ ಸದಸ್ಯರಾಗ ಬಯಸುವವರು ಕೂಡ ಇದೇ ಆ್ಯಪ್ ನಲ್ಲಿ ಸದಸ್ಯರಾಗುವ ಅವಕಾಶವನ್ನು ಕೂಡ ನೀಡಲಾಗಿದೆ.

ಸದಸ್ಯರಾಗ ಬಯಸುವವರು ಈ ಕೆಳಗಿನ 👇 ಲಿಂಕ್ ಡೌನ್ ಲೋಡ ಮಾಡಿಕೊಳ್ಳಿ…


https://play.google.com/store/apps/details?id=com.knobly.kasapa

ಅಥವಾ ಪ್ಲೇ ಸ್ಟೋರ್ ನಲ್ಲಿ ಕೂಡಾ ಕಸಾಪ ಆ್ಯಪ್ ಲಭ್ಯವಿದೆ.

ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹೊಸದಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ ಮೊಬೈಲ್ ಅಪ್ಲಿಕೇಶನ್ (ಆ್ಯಪ್) ಅಸ್ತಿತ್ವಕ್ಕೆ ಬಂದಿದ್ದು, ಇನ್ನು ಮುಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಅವಶ್ಯ ಮಾಹಿತಿ ಇದರಲ್ಲಿ ದೊರೆಯುವ ಜೊತೆಗೆ ಆಜೀವ ಸದಸ್ಯತ್ವವನ್ನೂ ಕೂಡಾ ಇದರ ಮೂಲಕವೇ ಮಾಡಿಕೊಳ್ಳಬಹುದಾಗಿದೆ ಎಂದು ಉತ್ತರ ಕನ್ನಡ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಕಸಾಪ ರಾಜ್ಯಾದ್ಯಕ್ಷ ನಾಡೋಜ ಮಹೇಶ ಜೋಷಿಯವರು ಒಂದು ಕೋಟಿ ಕಸಾಪ ಆಜೀವ ಸದಸ್ಯತ್ವ ಮಾಡುವ ಮಹತ್ವಾಕಾಂಕ್ಷೆಯ ಗುರಿಯಿಟ್ಟಿಕೊಂಡಿದ್ದಾರೆ. ಅದಕ್ಕಾಗಿಯೇ ಈ (ಆ್ಯಪ್) ಮಾಡಲಾಗಿದೆ. ಇದರಲ್ಲಿ ಕಸಾಪದ ಅವಶ್ಯ ಮಾಹಿತಿಗಳು ಸಿಗಲಿವೆ. ಹಾಗೂ ಹೊಸದಾಗಿ ಕಸಾಪ ಆಜೀವ ಸದಸ್ಯರಾಗುವವರೂ ಕೂಡಾ ಈ (ಆ್ಯಪ್) ಡೌನ್‌ಲೋಡ್ ಮಾಡಿಕೊಂಡು ಆಮೂಲಕವೇ ಅವಶ್ಯ ಮಾಹಿತಿ ಭರ್ತಿ ಮಾಡಿ ಸದಸ್ಯರಾಗಬಹುದಾದ ವ್ಯವಸ್ಥೆಯಿದೆ. ಈ ಮೊದಲು ಸದಸ್ಯರಾಗಿದ್ದವರೂ ಕೂಡಾ ತಮ್ಮ ಹೆಸರಿನ ತಿದ್ದುಪಡಿ, ವಿಳಾಸ ಬದಾಲವಣೆಗಳಿದ್ದರೂ ಮಾಡಿಕೊಳ್ಳಬಹುದಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಕೂಡಾ ಕಸಾಪ ಆಜೀವ ಸದಸ್ಯರ ಸಂಖ್ಯೆ ಇನ್ನೂ ಹೆಚ್ಚಾಗಬೇಕಾದ ಅವಶ್ಯಕತೆಯಿದೆ. ಹಾಗಾಗಿ ಈ (ಆ್ಯಪ್) https://play.google.com/store/apps/details?id=com.knobly.kasapa ಬಳಸಿಕೊಂಡು ಉತ್ತರ ಕನ್ನಡ ಜಿಲ್ಲೆಯ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾಗುವಂತಾಗಬೇಕು. ಜಿಲ್ಲೆಯಲ್ಲಿ ಪರಿಷತ್ತಿನ ಶಕ್ತಿಯನ್ನು ಸಂಘಟನಾತ್ಮಕವಾಗಿ ಉನ್ನೂ ಗಟ್ಟಿಗೊಳಿಸುವಂತಾಗಬೇಕು ಎಂದು ಮನವಿ ಮಾಡಿರುವ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆಯವರು ಇದಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ತಮ್ಮನ್ನು (೯೪೮೦೦೪೩೪೫೦) ಸಂಪರ್ಕಿಸುವಂತೆ ತಿಳಿಸಿದ್ದಾರೆ.

ಹಲವಾರು ಹೊಸತನಗಳನ್ನಿಟ್ಟುಕೊಂಡು ಅಸ್ತಿತ್ವಕ್ಕೆ ಬಂದಿರುವ ಈ ಕಸಾಪ ಆ್ಯಪನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಗುರುವಾರ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕನ್ನಡ ಸಾಹಿತ್ಯ ಪರಿಷತ್ತು ಹೊಸ ರೂಪ ಪಡೆಯುತ್ತಿದೆ. ಕನ್ನಡಿಗರ ಹೆಮ್ಮೆಯ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಸರಕಾರ ಜೊತೆಯಾಗಿ ಕನ್ನಡ ಕಟ್ಟುವ ಕಾರ್ಯವನ್ನು ನಡೆಸಲಿದೆ. ಸಾಹಿತ್ಯದ ಒಡನಾಟ ಇಲ್ಲದವರಿಗೂ ಸಾಹಿತ್ಯದಲ್ಲಿ ಆಸಕ್ತಿ ಮೂಡಿಸುವ ಕಾರ್ಯ ಪರಿಷತ್ತು ಮಾಡಬೇಕಿದೆ ಎಂದರು.

 ಸಾಹಿತ್ಯ ಪರಿಷತ್ತಿನೊಂದಿಗೆ ಯಾವುದೇ ಪ್ರತಿಷ್ಟೆ ಇಲ್ಲದೆ ಕನ್ನಡ ಕಟ್ಟುವಲ್ಲಿ ರಾಜ್ಯ ಸರಕಾರ ಜೊತೆಯಾಗಿ ಇರಲಿದೆ. ಹಾವೇರಿಯಲ್ಲಿ ಹಮ್ಮಿಕೊಂಡ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನ ಭೂತೋ ನ ಭವಿಶಃತಿ ಎನ್ನುವಂತೆ ನಡೆಸಲಾಗುವುದು ಅದೇ ಕಾರಣಕ್ಕೆ ಇದೇ ಮೋದಲ ಬಾರಿಗೆ ಕನ್ನಡ ಸಾಹಿತ್ಯ ಪರಿಷತ್ತಿ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನ ಮಾನ ನೀಡಿ ಸರಕಾರ ಗೌರವಿಸಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು. 

 ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಮಾತನಾಡಿ  "ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸುವ" ನಿಟ್ಟಿನಲ್ಲಿ ಪರಿಷತ್ತನ್ನು ಮುನ್ನಡೆಸಲಾಗುತ್ತಿದೆ. ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿಯ ಮೂಲ ಧ್ಯೇಯೋದ್ದೇಶಗಳೊಂದಿಗೆ ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆ ಕಾಪಾಡುವ ಹಾಗೂ ಅಭಿವೃದ್ಧಿ ಪಡಿಸುವ ಜವಾಬ್ದಾರಿಯನ್ನು ಹೊತ್ತು, ಪರಿಷತ್ತಿನ ನಿಯಮ-ನಿಬಂಧನೆಗಳಿಗೆ ಅಮೂಲಾಗ್ರ ಬದಲಾವಣೆ ತರುವ ಮೂಲಕ ಕ್ರಾಂತಿಕಾರಿ ಹೆಜ್ಜೆಯನ್ನು ಇರಿಸಲಾಗಿದೆ.
ವಿಶ್ವದ್ಯಾಂತ ಕನ್ನಡವನ್ನು ಒಗ್ಗೂಡಿಸಲು ಹೊರರಾಜ್ಯ, ಕೇಂದ್ರಾಡಳಿತ ಪ್ರದೇಶ ಮತ್ತು ಹೊರದೇಶ ಘಟಕಗಳನ್ನು ಸ್ಥಾಪಿಸುವ ದೃಷ್ಟಿಯಿಂದಲೂ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಪರಿಷತ್ತಿಗೆ ಪ್ರಸ್ತುತ ಮುಂದಿನ ಐದು ವರ್ಷಗಳ ಈ ಅವಧಿಯಲ್ಲಿ ಒಂದು ಕೋಟಿ ಸದಸ್ಯತ್ವವನ್ನು ಹೊಂದುವ ದೃಷ್ಟಿಯಿಂದ ಶ್ರೀಸಾಮಾನ್ಯನೂ ಸಹ ಸದಸ್ಯತ್ವ ಪಡೆಯಲು ಅನುಕೂಲವಾಗುವಂತೆ ರೂ.೫೦೦-೦೦ ಗಳಿದ್ದ ಸದಸ್ಯತ್ವ ಶುಲ್ಕವನ್ನು ರೂ. ೨೫೦-೦೦ ಗಳಿಗೆ ಇಳಿಸಲಾಗಿದೆ .. ಇನ್ನು ಮುಂದೆ https://play.google.com/store/apps/details?id=com.knobly.kasapa ವಿಳಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಪ್ಲಿಕೇನ್ನ ಸಾರ್ವಜನಿಕರಿಗೆ ಸಿಗಲಿದೆ ಎಂದರು.

ಈ ಸಂದರ್ಭದಲ್ಲಿ ಸಚಿವರಾದ ಶಿವರಾಮ ಹೆಬ್ಬಾರ, ಡಾ. ಸಿ. ಎನ್. ಅಶ್ವತ್ಥ ನಾರಾಯಣ, ವಿ.ಸೋಮಣ್ಣ, ಶಾಸಕರಾದ ನೆಹರೂ ಓಲೆಕಾರ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಕಾರ್ಯದರ್ಶಿಗಳಾದ ಎಂ. ಎಸ್. ಶ್ರೀಕರ್, ಜಯರಾಮ ಮತ್ತು ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ್ ಪಾಂಡು, ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗಶೆಟ್ಟಿ ಹಾಗೂ ಪರಿಷತ್ತಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.

Exit mobile version