ಸ್ಮಶಾನ…
ನಾನು ನಾನು ಎನ್ನುವನು
ಮಣ್ಣಾದ ಜಾಗ
ಸತ್ಯ ಗೊತ್ತಿದ್ದರೂ ಸಾಯದೆ ಇರುವವರಿಗಾಗಿ ಕಾಯುತ್ತಿರುವ
ಜಾಗ..
ಕೋಪ…
ಬಡವನ ಕೋಪ ದವಡೆಗೆ
ಮೂಲ
ಬುದ್ಧಿಗೆ ಬಂದ ವ್ಯಾಧಿ
ಮೂಲವ್ಯಾಧಿ
ಒಂದು ಅರ್ನಥಕ್ಕೆ
ಇನ್ನೊಂದು ಸ್ವಾರ್ಥಕ್ಕಾಗಿ..
ಬೆಳೆ…
ರೈತನ
ಬೇವರು ಮತ್ತು ಶ್ರಮದ ಕೂಲಿ
ಕಂಡಕಂಡವರು ಬೆಲೆ ಕಟ್ಟುವ ಅಗ್ಗದ ವಸ್ತು…
ರಸ್ತೆ…
ಬಡವ ಶ್ರಮದಿಂದ ನಿರ್ಮಿಸಿದ್ದು
ಶ್ರೀಮಂತ ಅರಾಮವಾಗಿ ಬಳಸುತ್ತಿರುವುದು
ಬಡವರ ಬೆನ್ನು ಉರಿ
ದೇಶದ ನರನಾಡಿ…
ಹೋಟೆಲ್…
ಹಸಿದವರ ಕೈ ಕರಾಮತ್ತು
ರುಚ್ಚಿಯ ಗಮ್ಮತ್ತು
ಹೊಟ್ಟೆ ತುಂಬಿದವರ
ಕೈ ಕಸ ಉತ್ಪಾದನೆಯ ಜಾಗ.
ದೇವಸ್ಥಾನ…
ತನ್ನ ಪೂಜೆ ಅರ್ಚನೆಯ
ರೇಟ್ ಬೋರ್ಡ್ ನೋಡದವನು
ಇರುವ ಸ್ಥಳ
ಶಾಂತಿ ನೆಮ್ಮದಿ
ಎಂದಿಗೂ ಸಿಗದಿರುವ
ಪುಣ್ಯ ಕ್ಷೇತ್ರ..
ಕೋರ್ಟ_ಕಛೇರಿ…
ನ್ಯಾಯ ನೀತಿ ಸತ್ಯ
ಮಾರಾಟಕ್ಕಿಟ್ಟ ದುಡ್ಡಿನ
ಖಜಾನೆ
ಬಡವ ಎಂದಿಗೂ ಕೊಳ್ಳುಲು
ಆಗದ
ಕನ್ನಡಿ ಒಳಗಿನ ಗಂಟು..
ಹಸಿವು…
ಬಡವರಿಗೆ ಬಿಡದೆ ಕಾಡುವುದು
ಶ್ರೀಮಂತರಿಗೆ ಆಗಿದೆ ಇರುವುದು
ಬಡವರಿಗೆ ಬದುಕಿನ ಮೂಲ
ಶ್ರೀಮಂತರಿಗೆ ಪ್ರತಿಷ್ಟೆಯ ಮೂಲ..
ಚಿಂತೆ….
ಚಿತೆ
ನಡುವೆ ಇರುವುದು
ಸೊನ್ನೆ
ಸಂಸಾರದಲ್ಲಿ ನಡುವೆ ಇರುವುದು
ಸೊನ್ನೆ..
ಒಂದು ಕಾಣುವಂತೆ ಸುಡುವುದು
ಇನ್ನೊಂದು ಕಾಣದೆ ಸುಡುವುದು…