ಸಮ ಸಮಾಜ ನಿರ್ಮಾಣದ ಕನಸುಗಾರ, ಯುವ ಜನರ ಪಾಲಿನ ಹೋರಾಟಗಾರ, ವಿದ್ಯಾರ್ಥಿಗಳ ವಲಯದ ನಲುಮೆಯ ಗುರು, ಸಾಹಿತ್ಯಿಕ ಸಾಂಸ್ಕೃತಿಕ ವಲಯದ ಕೊಂಡಿ, ಜೀವಪರ ಚಿಂತಕ, ಪ್ರೀತಿ ಪದಗಳ ಪಯಣಿಗ ಡಾ. ವಿಠ್ಠಲ ಭಂಡಾರಿಯವರ ನೆನಪಲ್ಲಿ ಆರಂಭಗೊಳ್ಳಲಿರುವ ‘ಪ್ರೀತಿ ಪದ’ (ಡಾ. ವಿಠ್ಠಲ ಭಂಡಾರಿ ನೆನಪಿನ ಸಮಾಜ ವಿಜ್ಞಾನ ಅಧ್ಯಯನ ಕೇಂದ್ರ ) ದ ಉದ್ಘಾಟನೆ ಹಾಗೂ ಸಾಹಿತ್ಯ ಸಂವಾದ, ಶ್ರಮಜೀವಿ ಸೌಹಾರ್ದ ಸಾಂಸ್ಕೃತಿಕ ಅಭಿವ್ಯಕ್ತಿ ಸಮಾರಂಭ ಜುಲೈ ೧೭ ರಂದು ರವಿವಾರ ಮುಂಜಾನೆ ೧೦ ಗಂಟೆಗೆ ಕಾರವಾರದ ಕನ್ನಡ ಭವನದಲ್ಲಿ ನಡೆಯಲಿದೆ.
ಕಾರವಾರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ಪ್ರೀತಿ ಪದ (ವಿಠ್ಠಲ ಭಂಡಾರಿ ನೆನಪಿನ ಸಮಾಜ ವಿಜ್ಞಾನ ಅಧ್ಯಯನ ಕೇಂದ್ರ ) ದ ಸಂಘಟನೆಯಲ್ಲಿ ಸಹಯಾನ, ಎಸ್ಸಿ. ಎಸ್ಟಿ. ನೌಕರರ ಸಂಘ, ಸಮುದಾಯ ಕರ್ನಾಟಕ, ಚಿಗುರುಗಳು, ಚಿಂತನ ಉತ್ತರ ಕನ್ನಡ ಮುಂತಾದ ಸಂಘಟನೆಗಳ ಸಹಕಾರದೊಂದಿಗೆ ನಡೆಯುವ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತರಾದ ಗಂಗಾಧರ ಹಿರೇಗುತ್ತಿ ಉದ್ಘಾಟಿಸಲಿದ್ದಾರೆ . ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಎನ್. ವಾಸರೆಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಭಿವೃದ್ಧಿ ಚಿಂತಕ ಡಾ. ಎಂ. ಚಂದ್ರ ಪೂಜಾರಿ, ಪ್ರಾಧ್ಯಾಪಕ ಡಾ. ಕಿರಣ್ ಗಾಜನೂರು, ಸಂಸ್ಕೃತಿ ಚಿಂತಕಿ ಕೆ.ಎಸ್. ವಿಮಲಾ ಮುಖ್ಯ ಅತಿಥಿಗಳಾಗಿರಲಿದ್ದಾರೆ.
ಚಿಂತನ ಉತ್ತರ ಕನ್ನಡದ ಡಾ. ಎಮ್.ಜಿ. ಹೆಗಡೆ, ಸಹಯಾನ ಕೆರೆಕೋಣದ ಡಾ. ಮಾಧವಿ ಭಂಡಾರಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್, ಕಲ್ಲೂರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಇಬ್ರಾಹಿಂ ಕಲ್ಲೂರ್, ರೈತ ಕಾರ್ಮಿಕ ಮುಖಂಡ ಶಾಂತಾರಾಮ ನಾಯಕ ಉಪಸ್ಥಿತರಿರುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿ ಕಿರಿಯ ಸಾಹಿತಿಗಳು, ಬರಹಗಾರರು, ಸಾಮಾಜಿಕ ಕಾರ್ಯಕರ್ತರು, ಚಿಂತಕರು, ಹೋರಾಟಗಾರರು ಭಾಗವಹಿಸಲಿದ್ದಾರೆ .
ಕಾರ್ಯಕ್ರಮದಲ್ಲಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಕಾರವಾರ ತಾಲೂಕು ಘಟಕದ ಅಧ್ಯಕ್ಷ ರಾಮಾ ನಾಯ್ಕ, ಪ್ರೀತಿ ಪದಗಳ ಯಮುನಾ ಗಾಂವ್ಕರ್, ಬಾಬು ಶೇಖ್, ಗಣೇಶ ಬಿಷ್ಟಣ್ಣವರ, ಎನ್.ಜಿ. ನಾಯ್ಕ, ಜಿ.ಡಿ. ಮನೋಜೆ, ಎಂ. ಎ. ಖತೀಬ್, ಗಣೇಶ್ ರಾಠೋಡ್, ಅಲ್ತಾಫ್ ಶೇಖ್ ಮುಂತಾದವರು ಮನವಿ ಮಾಡಿದ್ದಾರೆ.
ಹಿರಿಯ ಸಾಹಿತಿಗಳಾದ ವಿಷ್ಣು ನಾಯ್ಕ, ಶಾಂತಾರಾಮ ನಾಯಕ ಹಿಚ್ಕಡ, ಮೋಹನ್ ಹಬ್ಬು, ಕೃಷ್ಣ ನಾಯಕ, ಡಾ. ಮಹೇಶ ಗೋಳಿಕಟ್ಟೆ, ಕೃಷ್ಣಾನಂದ ಬಾಂದೇಕರ್, ಪಿ ಆರ್ ನಾಯ್ಕ, ಹೊಳೆಗದ್ದೆ, ಮುರ್ತುಜಾ ಹುಸೇನ್, ಸುಬ್ರಾಯ ಮತ್ತಿಹಳ್ಳಿ, ಶ್ರೀಧರ ನಾಯಕ. ಡಿ. ಸ್ಯಾಮ್ಸನ್ , ಸಿ. ಆರ್. ಶಾನಭಾಗ್, ಶಿವಾನಂದ ನಾಯಕ, ಕಿರಣ್ ಭಟ್, ಲಲಿತಾ ಹೆಗಡೆ, ಮುನೀರ್ ಕಾಟಿಪಳ್ಳ, ನವೀನ ಕುಮಾರ್ ಹಾಸನ, ಮುಂತಾದವರು ಜೊತೆಯಾಗಲಿದ್ದಾರೆ.
.