Site icon ಒಡನಾಡಿ

ನಮ್ ಕಥೆ…. ನಮ್ ವ್ಯಥೆ… ಹೊಳೆಗದ್ದೆ ಪಿ.ಆರ್. ನಾಯ್ಕರ ಲೇಖನ ಮಾಲೆ -೧೭

ಆಲ್ವಾ ಮಾರಾಯ, ಈ ಕೊರೋನಾ ಬಂದ್ಮೇಲೆ ಸಾಲಿ ಕಾಥಿ ಮುಗ್ದೊಗಾದೆ. ಇವ್ರೆಲ್ಲಾ ಹಿಂಗೆ ಹೆಕ್ಕಂತೆ ದಿನ ಕಳೂದೆ.ಆಲ್ವ ವೆಂಕ್ಟ ನಿಂಗಿರುದು ಒಬ್ನೆ ಪೊರ.ಆವ್ನ ಸಾಕೂಕೆ ಹಿಂಗ್ಮಾಡ್ತೆ. ನಾನ್ನಾಂಗೆ ಮೂರ್ಮುರು ಮಕ್ಳಾದ್ರೆ ನೀ ಇಟ್ದಿನ್ಕೆ ಸತ್ತೆ ಹೊಗ್ತಿದ್ದೆ. ಆದ್ರೆ ಏನ್ಮಾಡುದು. ನಮ್ಮನಿ ಕಾಥಿ ಕೇಳ್ದ್ರೆ ದ್ಯಾವ್ರೆ ಬಲ್ಲ.

ಆಲ್ವಾ ಮಾರಾಯಾ, ಈ ಸಾಲಿ ಬಂದಾದ ಯಾಪಾರ್ದಾಗೆ ನಾ ಸತ್ತಿ ಹೆಣಾಗೊದೆ.ಬೆಳ್ಗಾಗೆ ಮೊಬೈಲ್ಗೆ ಕರೆನ್ಸಿ ಹಾಕ್ಬೇಕು. ಸಂಜಿಕೆ ಝೆರಾಕ್ಸ್ ಅoಗ್ಡಿಗೆ ದುಡ್ಡು ಕಟ್ಬೇಕು.ನಮ್ಗೆ ದುಡ್ದ್ರೆ ಆದೆ.ಇಲ್ಲಾಂದ್ರೆ ಉಪಾಸಾನೆ ಗತಿ.ಆಂತದ್ರಾಗೆ ಇದೆಲ್ಲಾ ಬೇಕಾನಮ್ಗೆ.

ಸೂರುನಾಗೆ ಮೊಬೈಲ್ ಬೇಕು ಹೇಳಿ ಈ ಮಕ್ಳು ಗೆಂಟ್ಬಿದ್ರು.ಆ ಮೊಬೈಲ್ ಸಾಲ ಇನ್ನೂ ತಿರಲಿಲ್ಲ. ಈಗಂತೂ ಕರೆನ್ಸಿ ಝೆರಾಕ್ಸು, ಕರೆನ್ಸಿ ಝೆರಾಕ್ಸು, ನಾಂಗಂತು ಸಾಕ್ ಸಾಕಾಗ್ ಹೋಗದೆ. ಎಲ್ಲಿ ದುಡ್ಡು ತರೂದು. ಹೊಟ್ಟಿ ಹೊರ್ಕಂತ್ನ , ಇಲ್ಲಾ ಝೆರಾಕ್ಸ್ ಅಂಗ್ಡಿಗೆ ದುಡ್ಡು ಕೊಡ್ತ್ನಾ.ಇಗಿತ್ಲಾಗೆ ಒಂದ್ಮಿನ ಜೊಬ್ಬು ತರೂಕು ಕಾಷ್ಟನೆ ಆಗಾದೆ. ನಾಂವು ಯಾರ್ಕೆಲಿ ಹೇಳುದು. ಆ ಸಣ್ಣಮಕ್ಳ್ಗೆ ಇನ್ನೂ ಸಾಲಿನೆ ಸುರು ಆಗ್ಲಿಲ್ಲ. ಅವ್ರಗೆ ತಿಂಬೂಕೆ ತಾಕಂಡಿಹೊಗ್ಬೇಕು. ಈ ಕಾಟ ಯಾರ್ಗೂ ಬ್ಯಾಡಾ. ಆ ಆಕ್ಕೊರ್ಗೆ ವಾರ್ವಾರ ಬಂರ್ಕಂಡೊಗಿ ತೊರ್ಸಬೇಕಂತೆ.

ನೋಡ್ ದೇವು, ಇಲ್ಲಿವರಿಗೆ ಏನೋ ಆಯ್ತು. ಇನ್ಮುಂದೆ ನಾಂಕೆಲೆನೂ ಕೂಡ. ನಾಂವ ಗಂಡ-ಹೆಂಡ್ತಿ ದುಡ್ದದ್ದು ನಮ್ಮ ಸಂಸಾರ್ಗೆ ಸರಿ ಆಗ್ತದೆ. ಇನ್ನೆ ಈ ಝೆರಾಕ್ಸ್ ಗೆ, ಕರೆನ್ಸಿಗೆ ಕೊಡುಕೆ ಸಾಧ್ಯನೇ ಇಲ್ಲ. ಈ ಮೊಬೈಲ್ ನಲ್ಲಿ ಸಾಲಿ ಕಲ್ತದ್ದು ಸಾಕು, ನಮ್ಮಕ್ಳು ಉದ್ದಾರಾದದ್ದು ಸಾಕು. ಇವತ್ತೆ ಸಾಲಿಗೊಗಿ ಆಕ್ಕೊರ್ಕೆಲಿ, ಇನ್ಮುಂದೆ ನಮ್ಮಕ್ಳ ಮೊಬೈಲ್ಗೆ ಕರೆನ್ಸಿನೂ ಹಾಕುದಿಲ್ಲ, ಝೆರಾಕ್ಸು ತಂದ್ಕೊಡುದಿಲ್ಲ. ವರ್ಸಗಟ್ಲಿ ಆಯ್ತು. ಸಾಕು ನಿಮ್ಮ ಮೊಬೈಲ್ ಸಾಲಿ. ನಮ್ಮ ಮಕ್ಳ ಇನ್ಮುಂದೆ ಕಳ್ಸುದಿಲ್ಲ ಅಂದೇಳಿ ಬತ್ತೆ, ಟುಗಲ್ ಕುಡಿಕಂಡಿ ಹೆಗ್ಲಮ್ಯಾಲೆ ಹಾಕಂಡಿ ಸಾಲಿ ಮೊಕದಾಗೆ ಹೊಂಟೆ ಬಿಟ್ಟ.

ಆಪ್ಪ ಸಾಲಿ ಬದಿಕೆ ಹೊಗುದ್ನೊಡಿ ಮಕ್ಳೆಲ್ಲಾ ಓಡೊಡಿ ಬಂದ್ರು.ಆಪ್ಪಾ..ಆಪ್ಪಾ…ನಾಳಿಕೆ ಎಲ್ಲರ್ಗೂ ಸಾಲಿ ಸುರುವಂತೆ. ಬಿಸಿ ಊಟನೂ ಆದ್ಯಂತೆ… ಎಂದ ಕೂಗದ್ದೆ ತಡ. ಆಪ್ನೂ ಹೋ ಹಾಕಂತಿ ಮಕ್ಳ ಸಂತಿಗೆ ಮಾನಿಕಾಡಿಗೆ ಹೆಜ್ಜಿ ಹಾಕ್ದಾ…….

– ಪಿ.ಆರ್. ನಾಯ್ಕ, ಹೊಳೆಗದ್ದೆ



ಇದು ಕೊರೊನಾ ಕಾಲಘಟ್ಟದಲ್ಲಿ ಶಿಕ್ಷಕ, ಸಾಹಿತಿ ಪಿ.ಆರ್. ನಾಯ್ಕರು ವಿಶೇಷವಾಗಿ ಮಕ್ಜಳಿಗಾಗಿಯೇ ಆರಂಭಿಸಿರುವ ಬರಹ ಮಾಲಿಕೆ… ಪ್ರತೀ ರವಿವಾರ ಪ್ರಕಟವಾಗಲಿದೆ…
ಕುಮಟಾ ತಾಲೂಕಿನ ಹೊಳೆಗದ್ದೆಯ ಪಿ.ಆರ್. ನಾಯ್ಕರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಒಬ್ಬ ಪ್ರಬುದ್ಧ ಬರಹಗಾರರು. ಸಕಾಲಿಕ ಚಿಂತನೆಗಳನ್ನು ಅಕ್ಷರ ರೂಪದಲ್ಲಿಳಿಸಿ ಜಾಗೃತಿ ಮೂಡಿಸಬಲ್ಲಂತಹ ಲೇಖಕರು. ಹಲವು ಕೃತಿಗಳನ್ನು ಪ್ರಕಟಿಸಿರುವ ಅವರು ಇದೀಗ ಒಬ್ಬ ಶಿಕ್ಷಕರಾಗಿ ಕೊರೊನಾ ಕಾಲದಲ್ಲಿ ತಾವೂ ಮಕ್ಕಳನ್ನು ಕಂಡಂತೆ… ಅವರೊಳಗಿನ ಭಾವನೆಗಳನ್ನ ಅರ್ಥ ಮಾಡಿಕೊಂಡಂತೆ… ಪಾಲಕರ ಮನಸ್ಥಿತಿಯನ್ನು ತಿಳಿದುಕೊಂಡಂತೆ… ಇವೆಲ್ಲವನ್ನೂ ಬರಹ ಹಾಗೂ ಕಾವ್ಯದ ಮೂಲಕ ಪ್ರಸ್ತುತ ಪಡಿಸಿ… ಆ ಮೂಲಕ ಮಕ್ಕಳಿಗಾಗಿಯೇ ಹೊಸ ಪ್ರಯೋಗಕ್ಕಿಳಿದಿದ್ದಾರೆ… (ಸಂ)
Exit mobile version