‘ಆಲ್ವಾ ದೇವು , ಮೊದ್ಲೇ ಎಲ್ಲಾದ್ರೂ ಕೆಲ್ಸಕ್ಕೆ ಹೊಗ್ತಿದ್ದೆ. ದುಡ್ಡು ಸಿಕ್ದಕೂಡ್ಲೆ ಕುಡ್ಕಬಂದ್ಕಂಡಿ ಮಾನಿಲಿ ಮನಿಕಂತಿದ್ದೆ. ಯಾರೂ ಕೇಳ್ವರು, ಹೇಳ್ವರು ಇಲ್ಲಾಗಿತ್ತು. ಇಗೆನಾಗಾದೆ ಬಾಲ್ಯಾ ಆ ಸುಡ್ಗಾಡ ಕೊರೋನಾ ಯಾಪಾರ್ದಾಗೆ ಮಕ್ಳೆಲ್ಲಾ ಮಾನಿಲಿರ್ತು. ನಿಂಗೆ ಅದೇ ದೊಡ್ಡ ತಾಲಿಬಿಸಿ ಆಗ್ಬಿಟ್ಟದೆ. ನಿಂಗೆ ಸಾರಾಯಿ ಕುಡ್ಕ ಬಂದ್ಮ್ಯಾಲೆ ಗಾನಾಕೆ ಉಂಬುಕ್ಬೇಕು. ನೀ ಬರುದ್ರೊಳ್ಗೆ ಆ ಮಾಕ್ಳು ಉಂಡ್ಬಿಡ್ತ್ರು. ಎಲ್ಲಾ ಖಾಲಿ ಆಗ್ಬಿಡ್ತದೆ. ಹಾಂಗಾಗಿ ನಿಂಗೆ ಆ ಮಕ್ಳಮ್ಯಾಲೆ ಜೋರು ಸಿಟ್ಬರ್ತದೆ ಆಲ್ವಾ ಹೇಳು.’
‘ನನ್ನ ಸರಿ ಆಥ೯ಮಾಡ್ಕಂಡವ ಅಂದ್ರೆ ನೀ ಒಬ್ಬನೆ. ಹೌದಾ, ನೀ ಹೇಳ್ದು ದ್ಯಾವ್ರಾಣಿಗೂ ಸರಿ ಆದೆ. ಆಲ್ವಾ ನಾ ಮಾನೀಗೆ ಬರುದ್ರೊಳ್ಗೆ ಆ ಹಲ್ಕಟ್ಟ ಮಕ್ಳು ತಾಪ್ಲಿಲಿ ಇದ್ದದ್ದೇಲ್ಲ ಬರ್ಗಹಾಕಂಡಿ ತಿನ್ಕಂಡಿ ಇಡೀ ಊರ್ತುಂಬಾ ಹೆಕ್ಕಂತಿ ಇರ್ತ್ರು. ನಾಮ್ಗೆ ಹುಟ್ದ ಮಕ್ಳೇ ನಾಮ್ಗೆ ಹೀಂಗ ಮಾಡ್ದ್ರೆ ಯಾರ್ಗೆ ಸಿಟ್ಬರುದಿಲ್ಲಾ ಹೇಳು. ಆಲ್ಲಾ ನಾಯೇನು ಅವರ್ಗೇ ತಂದಾಕುದೂ ಬೀಳ್ಲಿಲ್ಲ. ಆಲ್ವಾ ಮಾರು, ಈ ಮಕ್ಳು ಸಾಲಿಗೆ ಹೊದ್ರೆ ಅಲ್ಲೇ ಹಾಲ್ಕುಡ್ಕಂಡಿ,ಮಾಜ್ಜಾನ್ಮ್ಯಾಲೆ ಅಲ್ಲೆ ಉಂಡ್ಕಂಡಿ, ಸಂಜಿಕೆ ಮಾನಿಗೆ ಬರ್ತಿದ್ರು. ಆಲ್ವಾ ಹೇಳು, ನೀನು ಸರಿ ಹೇಳ್ದೆ. ನಾ ಹಾಂಗೆ ಮಾಡ್ತಿದ್ದೆ ಹನಿ ಹಾಕ ಬಂದ್ಕಂಡಿ ಹಾಂಗೆ ಮನಿಕಂತಿದ್ದೆ.ಈಗ ಹಾಂಗೆಲ್ಲ ಮಾಡುಕೆ ಆಗುದಿಲ್ಲ. ಆದ್ರು ಒಂದೊಂದ್ಸಲ ಮನಿಕಂಡ್ರೆ ಈ ಕೆಟ್ಟ ಮಕ್ಳು ಬಂದಿ ಗೌಜಿ ಕೊಟ್ಟಿ ಎಳ್ಸಾಕ್ತ್ರು. ಮೊನ್ನಾಗೆ ಎಂತಾ ಮಾಡಿರು ಗೊತ್ಯದ್ಯ, ನಾ ಹನಿ ಹಾಕಬಂದದ್ದು ಜಾಸ್ತಿ ಆಗಿತ್ತು. ತಾಲಿ ಎತ್ತುಕೆ ಕೂಡ. ಹಾಂಗೆ ಹಾಕ್ಕಿ ಜಗ್ಲಿ ಮ್ಯಾಲೆ ಮನಿಕಂಡಿದೆ. ಆ ಕೆಟ್ಮಕ್ಳು ಬಂದ್ಕಂಡಿ ನಾನ್ನ ಕೇಮಿಗೆ ಕಡ್ಡಿ ಹಾಕದ್ರು. ನಂಗೆ ಕಣ್ಣು ಒಡೂಕೆ ಬ್ಯಾಡ. ಎಂತದೊ ಹರ್ದಾಂಗೆ ಆಯ್ತದೆ ಹೇಳಿ ಕೈ ತಾಕಂಡಿ ಹೊಡ್ಕಂಡೆ. ಎಷ್ಟ ಸಲಾ ಹಾಂಗೆ ಮಾಡ್ದ್ರು ಗೊತ್ತಾದ್ಯ. ನಾಂಗೆ ಕಣ್ಯೆಂವೆ ಮುಚ್ಚೂಕೆ ಕೊಡ್ಲಿಲ್ಲ. ಒಂದ್ನೂರ ಸಲಾ ಹಾಂಗೆ ಮಾಡ್ಕಂಡಿ ನೆಗ್ಗಿ ಆಡ್ದ್ರಂತೆ. ಗಾನಾಕೆ ಮಾಜ ತಾಕಂಡ್ರಂತೆ.’
‘ದೇವು, ನಿಂಕೇಲಿ ಹೆಳ್ದೆ ಎನಾಲ್ಲಾ. ಒಂದ್ಸತಿಗೆ ಹನಿ ಕುಡ್ದುದ್ದು ಜಾಸ್ತಿ ಆಗಿ ಹೊಟ್ಟಿ ತುಂಬೊಗಿತ್ತು.ಉಚ್ಚಿ ಹೊಯ್ಯುಕೆ ಹೊಗ್ವಾ ಅಂದ್ರೆ ಏಳುಕೆ ಆಗ್ಲಿಲ್ಲ. ಕಾಡಿಗೆ ನಾಂಗುತ್ತಿಲ್ದೆ ಅಲ್ಲೆ ಉಚ್ಚಿ ಹೊಯ್ಕಂಡ್ನಂತೆ. ನಾನ್ನ ಹೆಂಡ್ತಿ ಬಯ್ಕಂತೆ ಹಾಸ್ಗಿ ತೊಳ್ದಾಕ್ತು. ಆದ್ರೆ ಈ ಕೆಟ್ಟ ಪೊರಾ ಆಪ್ಪ ಹಾಸ್ಗಿಲಿ ಉಚ್ಚಿ ಹೊಯ್ಕಂಡ …..ಆಪ್ಪ ಹಾಸ್ಗಿಲೀ ಉಚ್ಚಿ ಹೊಯ್ಕಂಡ ಅಂದೇಳಿ ಇಡೀ ಊರ್ತುಂಬ ಡೆಂವ್ಟಿ ಹೊಡ್ದಿ ಹೇಳ್ದಂಗೆ ಮಾಡ್ದಾ. ಮೊನ್ನಾಗೆ ನಾನು ಅಂಗ್ಡಿಗೆ ಹೊಗ್ಬೇಕು ಹೇಳಿ ನನ್ನಷ್ಟಕ್ಕೆ ನಾನು ಹೋಗ್ತಾ ಇದ್ದೆ. ಒಂದಿಷ್ಟು ಗೊಲಿ ಸೆರ್ಕಂಡಿ ಹಾಸ್ಗಿಲಿ ಉಚ್ಚಿ ಹೊಯ್ಕಂಡವ ಬಂದ…….ಹಾಸ್ಗಿಲಿ ಉಚ್ಚಿ ಹೊಯ್ಕಂಡವ ಬಂದ…. ಅಂತೆಳ್ತಿದ್ರು. ಅಲ್ಲಿ ನಾಮ್ಮಾನಿ ಗುಲಾಮ್ನು ಇದ್ದ. ನಾ ಸುಮ್ನೆ ಮೊಕತಾಕಂಡಿ ಹೋದೆ. ಎಂತಕಂದ್ರೆ ಹನಿನೂ ಹಾಕಂಡಿಲ್ಲಾಗಿತ್ತು. ಹಾಕಂಡಿದ್ರೆ ಒಬ್ಬೊಬ್ರ ಚೊರ್ಮ ಸೊಲ್ದ್ಬಿಡ್ತಿದ್ದೆ. ಎಂತ ಹೇಳೂದು ಎಲ್ಲಾ ಕೊರೋನಾ ಬಂದಿ ಹಾಳ್ಮಾಡ್ಬಿಡ್ತು. ನೊಡ್ವಾ ಒಂದ್ಸಲ ಸಾಲಿ ಸುರು ಆಗ್ಲಿ…….’