ಇತ್ತೀಚಿನ ವರ್ಷಗಳಲ್ಲಿ ಅದೆಷ್ಟೋ ಮೊಬೈಲ್ ಸೇವೆಗಳು, ಸಂಚಾರಿ ಸೌಲಭ್ಯಗಳು ಬರುವ ಮೂಲಕ ಜನರ ಕೆಲಸಗಳು ಕಡಿಮೆಯಾಗುತ್ತಿವೆ. ಸರಕಾರ ಕೂಡಾ ಈ ಸಂಚಾರಿ ಸೇವೆಗಳಿಗೆ ಆದ್ಯತೆ ನೀಡುತ್ತಿದ್ದು, ಅದರ ಭಾಗವಾಗಿಯೇ ಎಂಬಂತೆ ಇದೀಗ ಡೀಸೆಲ್ ಪಂಪ್ ಕೂಡಾ ಜನರಿದ್ದಲ್ಲಿಗೆ ಹೋಗುಬಂತಹ ವ್ಯವಸ್ಥೆಯೊಂದು ಬಂದಿರುವುದು ಬಹಳ ವೈಶಿಷ್ಠ್ಯವೆನಿಸುವಂತದ್ದಾಗಿದೆ. ಇದು ಜಿಲ್ಲೆಯಲ್ಲಿಯೇ ಮೊದಲೆಂಬಂತೆ ದಾಂಡೇಲಿಯಲ್ಲಿ ಆರಂಭವಾಗಿದೆ.
ಇದರ ಹೆಸರು ‘ಡೋರ್ ಸ್ಟೆಪ್ ಡಿಸೈಲ್ ಡೆಲವರಿ’ ಎಂದು. ನೋಡುವಾಗ ಈ ವಾಹನ ಪೆಟ್ರೋಲ್ ಟ್ಯಾಂಕರ್ ಅಥವಾ ಆಯಿಲ್ ಟ್ಯಾಂಕರ್‍ನಂತಹ ಗೂಡ್ಸ್‍ವಾಹನವಾಗಿದೆ. ಟ್ಯಾಂಕ್ ಒಳಗೊಂಡ ಈ ಗೂಡ್ಸ್ ವಾಹನದಲ್ಲಿ ಒಂದು ಪೆಟ್ರೋಲ್ ಅಥವಾ ಡಿಸೈಲ್ ಪಂಪ್‍ನಲ್ಲಿ ಇರಬೇಕಾದ ಎಲ್ಲ ಸವಲತ್ತುಗಳಿವೆ. ಪೆಟ್ರೋಲ್ ತುಂಬುವ ಪೈಪ್‍ನಿಂದ ಹಿಡಿದು ಡಿಜಿಟಲ್ ಅಂಕೆಗಳು, ಹಾಗೂ ಡಿಜಿಟಲ್ ಬಿಲ್‍ಗಳವರೆಗೆ ಇದರಲ್ಲಿ ಸೌಲಭ್ಯ್ಯಗಳಿವೆ. ಒಂದು ಡಿಸೈಲ್ (ಪೆಟ್ರೋಲ್) ಪಂಪ್‍ನಲ್ಲಿರಬೇಕಾದ ಎಲ್ಲ ತಂತ್ರಜ್ಞಾನವನ್ನೂ ಈ ವಾಹನದೊಳಗೆ ಅಳವಡಿಸಲಾಗಿದೆ. ಹಳ್ಳಿಗಳಿಗೆ ಹಾಗೂ ಗ್ರಾಮಂತರ ಭಾಗದಲ್ಲಿ ಅಥವಾ ಡಿಸೈಲ್ ಪಂಪ್ ದೂರವಿರವ ನಗರ ಪ್ರದೇಶಗಳಲ್ಲಿ ಡಿಸಲ್‍ನ ಅವಶ್ಯಕತೆಯಿದ್ದಲ್ಲಿ ಈ ವಾಹನ ಹೋಗಿ ಡಿಸೈಲ್‍ನ್ನು ನೀಡಿ ಬರುತ್ತದೆ. ನಿಜಕ್ಕೂ ಇದನ್ನು ಸಂಚಾರಿ ಡಿಸೈಲ್ ಪಂಪ್ ಎಂದೇ ಕರೆಯಬಹುದಾಗಿದೆ.
ಇದು ಕೇಂದ್ರ ಸರಕಾರದ ಯೋಜನೆಯಡಿಯಲ್ಲಿ ಬರುವಂತದ್ದಾಗಿದ್ದು, ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿಯೇ ಇದನ್ನು ಜಾರಿ ಮಾಡಲಾಗಿದೆ. ಸರಿ ಸುಮಾರು 6 ಸಾವಿರ ಲೀಟರ್ ಡಿಸೈಲ್ ಇಟ್ಟುಕೊಳ್ಳಬಹುದಾಗಿರುವಂತಹ ಟೆಂಕ್ ಇದಾಗಿದ್ದು, ಈ ಇಡೀ ವಾಹನಕ್ಕೆ ಸರಿ ಸಮಾರು 35 ಲಕ್ಷರು ವೆಚ್ಚವಾಗಿದೆ. ಇಂಡಿಯನ್ ಆಯಿಲ್ ಜೊತೆ ಡಿಸೈಲ್ ಸಂಪರ್ಕ ಹೊಂದಿರುವ ಈ ವಾಹನಕ್ಕೆ ಅವಶ್ಯವಿರುವ ಡಿಸೈಲನ್ನು ಹುಬ್ಬಳ್ಳಿಯಿಂದ ತುಂಬಿಸಿಕೊಂಡು ಬರಲಾಗುತ್ತದೆ. ಒಮ್ಮೆ 6 ಸಾವಿರ ಲೀಟರ್ ಡಿಸೈಲ್ ತುಂಬಿ ಬಂದರೆ ಅದು ಖರ್ಚಾಗುವವರೆಗೂ ಸರಬರಾಜು ಮಾಡಬಹುದಾಗಿದೆ. ಇದು ಹೆಚ್ಚಿನದಾಗಿ ಜೆ.ಸಿ.ಬಿ. ಹಾಗೂ ಹಿಟಾಚಿ ಸೇರಿದಂತೆ ಭಾರೀ ವಾಹನದ ಕೆಲಸ ಮಾಡಿಸುವವರಿಗೆ ಹಾಗೂ ದಾರಿ ಮದ್ಯದಲ್ಲಿ ಇಂಧನ ಖಾಲಿಯಾಗಿ ನಿಂತ ವಾಹನಗಳಿಗೆ ಬಹಳ ಉಪಯುಕ್ತವಾಗಲಿದೆ.
ಇಲ್ಲಿಯ ಡಿಸೈಲ್‍ಗಳಿಗೂ ಬೇರೆ ಡಿಸೇಲ್ ಪಂಪ್‍ಗಳಲ್ಲಿ ಸಿಗುವ ಡಿಸೈಲ್‍ಗಳಿಗೂ ದರದಲ್ಲಿ ಯಾವ ಏರಿಳಿತವಿಲ್ಲ. ಎಲ್ಲಡೆಯಿರುವಂತೆಯೇ ಈ ವಾಹನದಲ್ಲಿರುವ ಡಿಸೇಲ್ ಬೆಲೆಯಿರುತ್ತದೆ. ಜೊತೆಗೆ ಡಿಸೈಲ್ ಹಾಕಿಸಿಕೊಳ್ಳುವ ವಾಹನದ ನಂಬರ್ ಸಹಿತ ಡಿಜಿಟಲ್ ಬಿಲ್ ನೀಡಲಾಗುತ್ತದೆ. ಇದು ಈ ಭಾಗದಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ನಡೆಯುವ ದೊಡ್ಡ ದೊಡ್ಡ ಕೆಲಸಗಳಿಗೆ, ಹಾಗೂ ಗುತ್ತಿಗೆದಾರರಿಗೆ ಬಹಳಷ್ಟು ಪ್ರಯೋಜನವಾಗಲಿದೆ ಎಂದೇ ಹೇಳಲಾಗುತ್ತಿದೆ. ಕನಿಷ್ಠ 100 ಲೀಟರ್ ಡಿಸೈಲ್‍ನ ಅವಶ್ಯಕತೆಯಿದ್ದಲ್ಲಿ, ಕರೆ ಮಾಡಿದರೆ ಯಾವುದೇ ಹೆಚ್ಚಿನ ದರ ಪಡೆಯದೇ ಡಿಸೈಲ್ ನೀಡಿ ಬರಲಾಗುವುದು, ಅದಕ್ಕಿಂತ ಕಡಿಮೆಯಿದ್ದಲ್ಲಿ ಸಾರಿಗೆ ವೆಚ್ಚ ಪಡೆಯಲಾಗುತ್ತದೆ ಎನ್ನುತ್ತಾರೆ ಈ ವಾಹನದ ಮಾಲಕ, ಇಂಡಿಯನ್ ಆಯಿಲ್ ಡೀಲರ್ ಸಂಜಯ್ ನಂದ್ಯಾಳಕರವರು. ಒಟ್ಟಿನಲ್ಲಿ ಈ ವಾಹನ ದಾಂಡೇಲಿಯಲ್ಲಿ ಈಗಾಗಲೇ ತನ್ನ ಸೇವೆ ಆರಂಭಿಸಿದ್ದು, ಈ ವಾಹನದ ಸೇವೆಯ ಬಗ್ಗೆ ಜನರಲ್ಲಿಯೂ ಸಹಜ ಕುತುಹಲಗಳಿವೆ.
ದಾಂಡೇಲಿಯಲ್ಲಿ ಬಂದಿರುವ ‘ಡೋರ್‍ಸ್ಟೆಪ್ ಡಿಸೈಲ್ ಡೆಲವರಿ’ ವಾಹನ ಇದು ಜಿಲ್ಲೆಯಲ್ಲಿಯೇ ಮೊಟ್ಟ ಮೊದಲನೆಯದ್ದಾಗಿದ್ದು, ಇದಕ್ಕೆ ರಾಜ್ಯದ ಯಾವುದೇ ಸ್ಥಳಗಳಿಗೆ ಹೋಗಿ ಸೇವೆ ನೀಡಬಹುದಾದ ಪರವಾನಿಗೆಯಿದೆ. ಇದರ ಅವಶ್ಯಕತೆಯಿದ್ದವರು 7734027734 ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ನಿಗದಿತ ಅವಧಿಯಲ್ಲಿ ಈ ವಾಹನ ಅಲ್ಲಿ ಇರುತ್ತದೆ, ಅವಶ್ಯ ಡಿಸೈಲ್ ಒದಗಿಸುತ್ತದೆ.
ಈ ಬಗ್ಗೆ ಮುಂಜಾವು ಡಿಜಿಟಲ್ ಜೊತೆ ಮಾತನಾಡಿರುವ ಇಂಡಿಯನ್ ಆಯಿಲ್ ಡೀಲರ್ ಹಾಗೂ ವಾಹನದ ಮಾಲಕ ಸಂಜಯ್ ನಂದ್ಯಾಳಕರವರು ಕೇಂದ್ರ ಸರಕಾರದ ಯೋಜನೆಯಡಿಯಲ್ಲಿ ಈ ಡೋರ್ ಸ್ಟೆಪ್ ಡಿಸೈಲ್ ಡೆಲವರಿ ವಾಹನವನ್ನು ಅಗತ್ಯ ದಾಖಲೆ ನೀಡಿ ಪಡೆಯಲಾಗಿದೆ. ಇದರಲ್ಲಿ ಚಾಲಕ ಸೇರಿದಂತೆ ಸಿಬ್ಬಂದಿಗಳಿರುತ್ತಿದ್ದು, ಡಿಸೈಲ್ ಅವಶ್ಯಕತೆಯಿದದವರು ಕರೆ ಮಾಡಿದರೆ ನಾವು ತ್ವರಿತ ಗತಿಯಲ್ಲಿ ಹೋಗಿ ಸೇವೆ ನೀಡುತ್ತವೆ. ಎಲ್ಲಡೆ ಡಿಸೈಲ್‍ಗೆ ಇರುವ ದರವೇ ನಮ್ಮಲ್ಲಿ ಇರುತ್ತದೆ. ದರ ಹಗೂ ಗುಣಮಟ್ಟದಲ್ಲಿ ಯಾವ ವ್ಯತ್ಯಾಸವೂ ಇರುವುದಿಲ್ಲ. ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದಿದ್ದಾರೆ.
ವಿಡಿಯೋ ನೋಡಿ…