Site icon ಒಡನಾಡಿ

ನಮ್ ಕಥೆ…. ನಮ್ ವ್ಯಥೆ… ಹೊಳೆಗದ್ದೆ ಪಿ.ಆರ್. ನಾಯಕರ ಲೇಖನ ಮಾಲೆ – ೯

‘ಯೆಂಕ್ಟೇಶ, ನಮ್ಮನಿಲಿ ಆಪ್ಪ ಒಬ್ನೆ ಆವ್ನೆ. ನೀನು ಮಾನಿಗೆ ಹೋಗ್ಬೇಡ. ಇಲ್ಲೇ ಏಡಿ ಸಾರ್ ಮಾಡ್ಕಂಡಿ ಉಂಡ್ರಾಯ್ತು. ನೀನು ಹೆರ್ಗೆ ವಸ್ತೈರ ತೊಳು ಕಲ್ಮೇಲ ಕುತ್ಕಂಡಿ ಏಡಿ ಜೊಪ್ಕಂಡಿ ಓಡ ತೆಕ್ಕಂಡಿ ಬಾ, ಅಲ್ಲಿವರಿಗೆ ನಾನು ಒಲಿಗೆ ಬೆಂಕಿ ಹಿಡಿಸ್ತೆ. ನಮ್ಮಬ್ಬಿ ಬೆಳ್ಗಾಗೆ ಆನ್ನ ಮಾಡಿ ಒಲಿಮೇಲೆ ಬೆಚ್ಚವ್ಳೆ. ಏಡಿ ಬೆಯ್ಸಂಡಿ ಕಟ್ಗನ ನೀರ ಹಾಕಂಡಿ ಇಲ್ಲೆ ಉಂಬುವಾ’ ಎಂದಾಗ ಯೆಂಕ್ಟೇಶ ತಲೆ ಅಲ್ಲಾಡ್ಸತ ಏಡಿ ತಾಪ್ಲಿ ತಾಕಂಡಿ ಹೊರ್ಗೊದ.

ಮಗ, ಇದರ ಓಡ ತೆಗ್ದಿ, ಕೊಂಬು ಮುರ್ದಿ, ಹಾಲ್ಲಿ ಹಾಕಿ ಬೆಯ್ಸುವಾ. ಈಗ ಬರೂದು ಅಮಾಸೆ, ಕರ್ಗತ್ತಲೆ ಏಡಿಲಿ ಮೈಸ ರಾಸಿ ಇರ್ತದೆ. ಕಾಟ್ಗನ ನೀರ ಹಾಕಂಡಿ ಉಂಬುಕೆ ಕುಂತ್ರೆ ಅದ್ರ ಮಾಜನೆ ಬ್ಯಾರೆ. ಬಂದೆ ಮಗ… ಅಂಗ್ಡಿ ಬದಿಕೆ ಹೋಗ್ ಬರ್ತೆ’ ಎಂದವ್ನೆ ಅಂಗಿ ಹಾಕ್ಕಂಡಿ ಹೋಗೆ ಬಿಟ್ಟ.

‘ಯೆಂಕ್ಟೇಶ ನಮ್ಮಪ್ಪ ಅಂಗಿ ಹಾಕ್ಕಂಡಿ ಎಲ್ಗೇ ಹೋದ ಹೇಳು. ಎಲ್ಗೇನ ನಾಂಗೊತ್ತೀಲ್ಲ. ನಾಂಗೆ ಗೊತ್ತದೆ. ಹನಿ ಹೆಂಡ ಹಾಕ ಬರೂಕೆ ಹೋದ. ಆಂವ್ಗೆ ಮೀನು, ಕೋಳಿ, ಏಡಿ, ಹೊಂಟ ಕಾಂಡ್ಕೂಡ್ಲೆ,ಗೌಲ್ಸಾರು ಮಾಡ್ದಾ ಗೆಲ್ಲ ಸಾರಾಯಿ ಬೇಕೆ ಬೇಕು. ಅದು ಕಂಡ್ಕೂಡ್ಲೆ ತೊಡು ಬರ್ತದೆ…. ತೊಡು. ಇದ್ಕಾಗೆ ನಮ್ಮಬ್ಬಿ ಜಗ್ಳ ಆಡುದು. ಸಾಲಿ ಇದ್ರೆ ಲಾಯ್ಕ ಆಗ್ತದೆ.ಯಾವಾಗೆನ ಸಾಲಿ ಸುರು ಆಗುದು ಆಲಾ…’

ಯೆಂಕ್ಟೇಶ ಅಲ್ನೋಡು, ನಮ್ಮಪ್ಪ, ನಿಮ್ಮಪ್ಪ ಇಬ್ರೂ ತೂರಾಡ್ತ ಬತ್ತವ್ರೆ.ಬರ್ಲಿ…ಬರ್ಲಿ….ಎಂದೆಳ್ತಾ ಏಡಿ ತಾಪ್ಲಿ ಒಲಿ ಮ್ಯಾಲಿಟ್ರು.

ಇಬ್ರೂ ಬಂದವ್ರು ಹೆರ್ಗೆ ತೆಣಿ ಮ್ಯಾಲೆ ಕುತ್ಕಂಡಿ ಸುದ್ದಿ ಹೇಳುಕೆ ಸುರು ಮಾಡ್ಬೀಟ್ರು. ‘ನಮ್ಮ ಯೇಂಕ್ಟೇಶ ಗನ ಪೋರ.ಸಾಲಿ ಇಲ್ಲ ಅಂಬೂದು ಆಬ್ಬಿ ಸಂತಿಗೆ ಒಡ್ನ ಮಾನಿಗೆ ಹೊಯ್ತ. ಆಬ್ಬಿ ಅಂದ್ರೆ ಆಯ್ತು ಆವ್ನಿಗೆ. ನನ್ಮಾತು ಕೇಳುದೆ ಇಲ್ಲ’ ಎಂದಾಗ, ಒಳ್ಗಿದ್ದ ಯೆಂಕ್ಟೇಶ ಹೊರ್ಗೆ ಬಂದವ್ನೆ,’ ಆಪ್ಪ ನೀನು ಹೆಂಡ ಕುಡುದು ಬಿಟ್ರೆ,ನಾಳಿಕೆ ನೀಹೇಳ್ದ ಮಾತ ಕೇಳ್ತೆ. ಆಪ್ಪ ದಿನಾ ಹೆಂಡ ಕುಡ್ದರ್ರೆ ಹೊಟ್ಟಿ ಕಳ್ಳು ಸುಟ್ಟು ಹೊಗ್ತದ್ಯಂತೆ.ನೀವೀಬ್ರು ಕುಡಿಯೋದು ಬಿಟ್ಬೀಡಿ.’

ಮಾಗ, ನೀನು ಸಣ್ಕಿಂವೆ. ನಿಂಗೆ ಎಂತದು ಗೊತ್ತಾಗುದಿಲ್ಲ. ಏಡಿ ಬೇಯ್ಸಾಯ್ತಾ. ಆದ್ರೆ ಎಯ್ಡನ್ನ, ಹನಿ ಕಟ್ಗನ ನೀರು, ಒಂದೆಯ್ಡು ಹಾಲ್ಲಿ, ಒಂದ್ಕೊಂಬು ಹಾಕ್ಕಂಡಿ ಬಾ. ಬಾಗಿಲಿ ಹಸುಆದಾಂಗೆ ಆಯ್ತದೆ.’

‘ಮಾರು ನಮ್ಮಪ್ಗೆ, ನಿಮ್ಮಪ್ಗೆ ನಾಕ ನಾಕ ಆನ್ನ ಹಾಕು. ನಮ್ಗು ಹಾಕು ಎಲ್ರೂ ಉಂಬುವಾ’ ಎಂದಾಗ, ಮಾರು ತಾಟ್ಗೆ ಆನ್ನ ಹಾಕಿ ತಾಕಬಂದಿಟ್ಟ.ಇಬ್ರೂ ಮಕ್ಳನ್ನ ಹೊಗಳ್ತಾ ಉಂಬುಕೆ ಸುರು ಮಾಡ್ತ, ‘ಮಕ್ಳೇ, ಸಾಲಿಗೆಲ್ಲ ಎಂಥಾ ಹಿಡ್ದೋಯ್ತು. ಸಾಲಿ ಯಾವಾಗೆ ಸುರು ಆಗ್ತದ್ಯೇನೊ. ನೀವು ಸಾಲಿಗೋಗಿ ಉದ್ದಾರ ಮಾಡುದು ಅಷ್ಟೇ ಆದೆ. ದಿನಾ ಹಿಂಗೆ ಮಾಡ್ವಾ’ ಎಂದಾಗ ಮಾರು ನಮ್ಮಪ್ಪ ಗಾನಾಂವ ಎಂದು ಕುಣಿಯಲು ಸುರು ಮಾಡಿದ.


ಪಿ.ಆರ್. ನಾಯ್ಕ .ಹೊಳೆಗದ್ದೆ.

ಇದು ಕೊರೊನಾ ಕಾಲಘಟ್ಟದಲ್ಲಿ ಶಿಕ್ಷಕ, ಸಾಹಿತಿ ಪಿ.ಆರ್. ನಾಯ್ಕರು ವಿಶೇಷವಾಗಿ ಮಕ್ಜಳಿಗಾಗಿಯೇ ಆರಂಭಿಸಿರುವ ಬರಹ ಮಾಲಿಕೆ… ಪ್ರತೀ ರವಿವಾರ ಪ್ರಕಟವಾಗಲಿದೆ…
ಕುಮಟಾ ತಾಲೂಕಿನ ಹೊಳೆಗದ್ದೆಯ ಪಿ.ಆರ್. ನಾಯ್ಕರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಒಬ್ಬ ಪ್ರಬುದ್ಧ ಬರಹಗಾರರು. ಸಕಾಲಿಕ ಚಿಂತನೆಗಳನ್ನು ಅಕ್ಷರ ರೂಪದಲ್ಲಿಳಿಸಿ ಜಾಗೃತಿ ಮೂಡಿಸಬಲ್ಲಂತಹ ಲೇಖಕರು. ಹಲವು ಕೃತಿಗಳನ್ನು ಪ್ರಕಟಿಸಿರುವ ಅವರು ಇದೀಗ ಒಬ್ಬ ಶಿಕ್ಷಕರಾಗಿ ಕೊರೊನಾ ಕಾಲದಲ್ಲಿ ತಾವೂ ಮಕ್ಕಳನ್ನು ಕಂಡಂತೆ… ಅವರೊಳಗಿನ ಭಾವನೆಗಳನ್ನ ಅರ್ಥ ಮಾಡಿಕೊಂಡಂತೆ… ಪಾಲಕರ ಮನಸ್ಥಿತಿಯನ್ನು ತಿಳಿದುಕೊಂಡಂತೆ… ಇವೆಲ್ಲವನ್ನೂ ಬರಹ ಹಾಗೂ ಕಾವ್ಯದ ಮೂಲಕ ಪ್ರಸ್ತುತ ಪಡಿಸಿ… ಆ ಮೂಲಕ ಮಕ್ಕಳಿಗಾಗಿಯೇ ಹೊಸ ಪ್ರಯೋಗಕ್ಕಿಳಿದಿದ್ದಾರೆ… (ಸಂ)

Exit mobile version