ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಯಲ್ಲಾಪುರದ ನಾರಾಯಣ ನಾಯಕ, ಹಿರೇಗುತ್ತಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶಿರಸಿ ಶೈಕ್ಷಣಕ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಮಿತಿಯ ಪದಾಧಿಕಾರಿಗಳಿಗಾಗಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ನಾರಾಯಣ ನಾಯಕ ಹಾಗೂ ಎಲ್ಲ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗೌರವಧ್ಯಕ್ಷರಾಗಿ ಜೋಯಿಡಾದ ಯಶವಂತ ನಾಯ್ಕ, ಪ್ರಧಾನ ಕಾರ್ಯದರ್ಶಿಯಾಗಿ ಶಿರಸಿಯ ಬಾಲಚಂದ್ರ ಎಚ್. ಪಟ್ಗಾರ, ಉಪಾಧ್ಯಕ್ಷರಾಗಿ ಹಳಿಯಾಳದ ಪ್ರಶಾಂತ ನಾಯಕ, ಮಹಿಳಾ ವಿಭಾಗದ ಉಪಾಧ್ಯ್ಷರಾಗಿ ಮುಂಡಗೋಡದ ಶೀಲಾ ರಾಠೋಡ್, ಖಜಾಂಚಿಯಾಗಿ ಹಳಿಯಾಳದ ಉದಯ ನಾಯಕ, ಸಂಘಟನಾ ಕಾರ್ಯದರ್ಶಗಳಾಗಿ ಮುಂಡಗೋಡದ ಮಂಜುಳಾದ ಮಟ್ಟೇರ್. ಸಹಕಾರ್ಯದರ್ಶಿಗಳಾಗಿ ಸಿದ್ದಾಪುರದ ಬಸವರಾಜ ಕಡಪಟ್ಟಿ, ಸಿದ್ದಾಪುರದ ಮಂಜುಳಾ ಪಟ್ಗಾರ, ಶಿರಸಿಯ ಶಾರದಾ ಎಮ್. ಕುಂದಾಪುರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಎಲ್ಲ ತಾಲೂಕು ಅಧ್ಯಕ್ಷರುಗಳು ಸದಸ್ಯರಾಗಿರುತ್ತಾರೆ.
ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ ದಿವಾಕರ ಶೆಟ್ಟಿ ಚುನಾವಣಾಧಿಕಾರಿಯಾಗಿ ಕಾರ್ಯನಿವಹಿಸಿದ್ದರು.
ನಾರಾಯಣ ನಾಯಕರ ಹೆಟ್ರಿಕ್ ಗೆಲುವು
ಯಲ್ಲಾಪುರ ತಾಲೂಕಿನ ಬೀರಗದ್ದೆಯ ಸರಕಾರಿ ಹಿರಿಯ ಪ್ರಾಥಮಕ ಶಾಲೆಯ ಶಿಕ್ಷಕರಾಗಿರುವ ನಾರಾಯಣ ನಾಯಕ, ಹಿರೇಗುತ್ತಿಯವರು ಶಿಕ್ಷಕರ ಸಂಘಕ್ಕೆ ಯಲ್ಲಾಪುರದಿಂದ ನಾಲ್ಕು ಬಾರಿ ಆಯ್ಕೆಯಾಗಿ, ಎರಡು ಅವಧಿಗೆ ಯಲ್ಲಾಪುರ ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು. ಶಿರಸಿ ಶೈಕ್ಷಣಿಕ ಜಿಲ್ಲೆ ಆದ ಆರಂಭದಿಂದ ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುತ್ತ ಬಂದಿರುವ ನಾರಾಯಣ ನಾಯಕರದ್ದು ಇದು ಮೂರನೆಯ ಅವಧಿಯ ಜಿಲ್ಲಾಧ್ಯಕ್ಷತೆಯಾಗಿದೆ. ಆ ಮೂಲಕ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಹೆಟ್ರಿಕ್ ಸಾಧನೆ ಮಾಡಿ ದಾಖಲೆ ನಿರ್ಮಸಿದ್ದಾರೆ.