ನೀನೆ ಜಗತ್ತೆಂದಿರಲ್ಲ
ನೀನೆ ಸಂಪತ್ತೆಂದಿರಲ್ಲ
ಅವೆಲ್ಲವೂ
ಬಿರುಗಾಳಿಯ ಅಬ್ಬರಕೆ
ಮಾನ, ಪ್ರಾಣಗುಂಟ
ಹಾರಿಹೋದವಲ್ಲ
ನಾಲಿಗೆ ಸೀಳಿ ನರವ ಕಿತ್ತು
ಬೆನ್ನ ತಿರುಚಿ ಸುಟ್ಟಿರಲ್ಲ
ಹಾಡುಹಗಲೇ ಅಟ್ಟಹಾಸದ ಕುತ್ತು
ಭಾರತಾಂಬೆ ಬಂಜೆಯಾದ ಹೊತ್ತು
ಅಬಲೆ ಎನ್ನಲೇ, ಸಬಲೆ ಎನ್ನಲೇ
ಹೆಣ್ಣಾದ ತಪ್ಪಿಗೆ ನೇಣಿಗೇರಲೇ
ಜಗದ ಸರ್ವಸ್ವವೆಂಬ ಭ್ರಮೆಯಲ್ಲಿ ಬಾಳಲೇ….
ಎಂಬ ಯಕ್ಷ ಪ್ರಶ್ನೆ..!
ಆತ್ಮ ಸ್ಥೈರ್ಯ ಜಾಗೃತವಾಗಲು ಕಾಲ ಚಕ್ರದ ಚಲನೆ ತೀವ್ರಗೊಳ್ಳಬೇಕಿದೆ. ಮನದ ಸುಳಿಗಾಳಿಯು ಸೂಚಿಸುವ ಹಾಗೆ ಕಲಿಯುಗ ಪ್ರಾರಂಭವಾಗಿದೆ. ಹಿರಿಯರು ಆಗಾಗ ನುಡಿದು,ಕೇಡುಗಾಲದ ಪರಮಾವಧಿ ಎನ್ನುತ್ತಲೇ ಮರೆ ಯಾಗುತ್ತಿರುವುದು ವಿಧಿಯ ನಿಯಮ.ಸಮಯ ಎಷ್ಟು ಬದಲಾದರೂ ನಾವು ನಮ್ಮ ಅನುಕೂಲಕ್ಕಾಗಿ ಮಾಡಿ ಕೊಂಡ ನಿಯಮಗಳು ಸ್ಥಳ,ಸನ್ನಿವೇಶ,ಬಲಾಡ್ಯ,ಹಿತಾಸ ಕ್ತಿಗಳಿಗೆ ಅನುಗುಣವಾಗಿಯೇ ತನ್ನ ಅಸ್ಥಿತ್ವವನ್ನು ಕಳೆದು ಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಯುಗಗಳು ಉರುಳಿದರೂ,ವ್ಯಕ್ತಿಗಳು,ವ್ಯವಸ್ಥೆಗಳು ಬದ ಲಾದರೂ ಬದಲಾಗದ ಸಂಗತಿ ಮೂರೇ ಮೂರು ಹೆಣ್ಣು, ಹೊನ್ನು, ಮಣ್ಣು ಈ ಸಂಗತಿಗಳು ಸರ್ವಕಾಲಕ್ಕೂ ಮುಂ ದುವರಿಯುವ ಫಿಕ್ಸ ಮುದ್ರೆಗಳು. ಇವನ್ನು ಹೊರತು ಪಡಿಸಿ ಚಿಂತಿಸುವ ಮನೋಭಾವ ಯಾವ ಯುಗದಲ್ಲೂ ನಡೆದಿಲ್ಲ. ಮುಂದೆಯು ನಡೆಯುವುದಿಲ್ಲ.
ಶ್ರೀರಾಮ ಮರ್ಯಾದಾ ಪುರೋಷತ್ತಮ ಸೀತಾರಾಮ. ಅಮಾಯಕ ಸೀತೆಯನ್ನು ರಾವಣ ಮಾರುವೇಷದಿಂದ ಅಪಹರಿಸಿದ. ಮಾರೀಚನ ಸ್ವರ್ಣ ಜಿಂಕೆಯಾಗಿ ಸಹಕರಿಸಿದ. ರಾಮ,ರಾವಣರ ಯುದ್ಧ.ಕೊನೆಗೆ ಸೀತೆ ಅಗ್ನಿ ಪ್ರವೇಶ ಕ್ಲೀನ್ ಚಿಟ್ ಅಗ್ನಿ ದೇವನ ಪ್ರಮಾಣಪತ್ರ. ಅಗಸನ ಮಾತಿಗೆ ಪುನಃ ಸೀತೆ ಕಾನನಕೆ. ಲವಕುಶ ಜನನ. ಪುನರ್ ಬೇಟಿಯಾದರೂ ಸೀತೆ ಭೂವಿಯೊಡಲ ಸೇರುವುದು. ಎಷ್ಟೊಂದು ಪರೀಕ್ಷೆಗಳು.ನೋವುಗಳು,ಅಸ್ಥಿತ್ವದ ಹೋರಾ ಟ ಕೊನೆಗೂ ಫಲಿತಾಂಶ ಶೂನ್ಯ.ದೈವತ್ವದ ಸ್ಥಾನಕ್ಕಿಂತ ಮಾನವೀಯ ಸ್ಥಾನ ಬಹುಮುಖ್ಯವೆಂದೆನಿಸದಿರಲಿಲ್ಲ ಸೀತೆಗೆ.
ದ್ರೌಪದಿಯು ಅಗ್ನಿ ಪುತ್ರಿಯಾದರೂ ಸ್ವಯಂವರದಲ್ಲಿ ಅರ್ಜುನನು ವಿವಾಹ, ಕುಂತಿಯ ಅಚಾತುರ್ಯದಿಂದ ಐವರ ಪತ್ನಿಯಾಗಿ ಪಾಂಚಾಲಿಯಾದುದು.ಅಲ್ಲದೆ ಜೂಜಿ ನಲ್ಲಿ ಪತ್ನಿಯನ್ನು ಅಡ ಇಟ್ಟು ಸೋತ ಕ್ಷಣ ದುಶ್ಯಾಸನ ಮಾಡಲೇತ್ನಿಸಿದ ವಸ್ರ್ತಾಪಹರಣ ಇವು ಇಂದಿನ ಕೊಡು ಗೆಗಳಾಗಿ ಪರಿವರ್ತನೆಯಾಗಿರುವುದು ದುರಂತ.ಕೃಷ್ಣನಂತೆ ವಸ್ತ್ರ ನೀಡಿ ಕಾಪಾಡುವವರು ಬೆರಳೆಣಿಕೆಯಷ್ಟು.
ಜಮದಗ್ನಿಯ ಪತ್ನಿ ರೇಣುಕಾ…ಪತಿಯ ಕಠೋರ ಶಿಕ್ಷೆಗೆ ಗುರಿಯಾಗಿ ಮಗ ಪರಶುರಾಮನಿಂದ ಶಿರಚ್ಛೇದನ ಗೊಂ ಡು ಪುನಃ ಮಗನಿಂದಲೇ ಮರುಜನ್ಮ ಪಡೆವ ಸಮಯ, ಅಹಲ್ಯೆಯು ಕಲ್ಲಾದ ಘಟನೆ, ಋಷಿಮುನಿಗಳ ತಪಸ್ಸು ಭಂಗ ಪಡಿಸಲು ಅಪ್ಸರೆಯರ ಬಳಕೆ,ಕೆರೆಗೆ ಹಾರವಾದಂತಹ ಬಲಿದಾನ,ಮನೆಯ ಮಾನ ಮರ್ಯಾದೆಯ ಮೂಲ ಸ್ತ್ರೀ…. ಸಂಸ್ಕಾರದ ತಳಹದಿ.. ಸ್ರ್ತೀ. “ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ” ಎಷ್ಟೊಂದು ಅರ್ಥ ಪೂರ್ಣ ಮಂತ್ರ ಅನ್ನಿಸದಿರದು.
ಯುಗಗಳಿಂದಲೂ ಮಹಿಳೆಯರಿಗೆ ಈ ಸ್ಥಾನ ಕೊಟ್ಟಿರುವುದಕ್ಕೆ ಪ್ರತಿಯೊಬ್ವರ ಮನೆಯಲ್ಲೂ ದೇವರ ಜಗಲಿಯಲ್ಲಿ ವಿವಿಧ ರೂಪಧರಿಸಿ ಪ್ರತಿನಿತ್ಯ ಪೂಜೆಗೊಳ್ಳುತ್ತಿರುವುದು ಸಾಮಾನ್ಯವಾ? ಇಂಥ ದೊಡ್ಡ ಸ್ಥಾನ ಕೊಟ್ಟ ಮೇಲೆ ಬೇರೆ ನೂ ಕೊಡಲು ಸಾಧ್ಯವಿಲ್ಲವೆಂದು ತೀರ್ಮಾನಕ್ಕೆ ಬರಲಾಗಿ ದೆ.ಅಲ್ಲಲ್ಲಿ ಧ್ವನಿಯೆತ್ತುವರನ್ನು ಶಾಶ್ವತವಾಗಿ ಧ್ವನಿಯಿಲ್ಲದಂತೆ ಮಾಡುವ ಸ್ಥಿತಿ ಕಣ್ಣಿಗೆ ಕಂಡರು ಕಂಡಿಲ್ಲ ಎಂದು ಹೇಳುವ ಜಾಣ ಕುರುಡರ ಮಸ್ತಕದಲ್ಲಿದೆ.
ಹೆಣ್ಣು ಹೆಮ್ಮೆಯೆಂಬುದು ಕೇವಲ ಬಾಯಿಮಾತಲ್ಲಿ. ಆಗಾಗ ಬೆಳಕಿಗೆ ಬರುವ ಪ್ರಕರಣಗಳು, ಜೋರಾಗಿ ಉರಿ ದು ನಂದಿಹೋಗುವ ಕರ್ಪೂರದ ಜ್ವಾಲೆಯಂತೆ. ಅಲ್ಪಾವಧಿಯ ಹೋರಾಟಗಳು. ಮೊದಲಿದ್ದ ಹುಮ್ಮಸ್ಸು ದಿನಗಳೆದಂತೆ ಹೊಸ ತಿರುವು ಪಡೆದು ನಡೆದಿದ್ದು ಸತ್ಯವಾ ದರೂ ಸುಳ್ಳಾಗಲು ಸಮಯಬೇಕಿಲ್ಲ.ಅದೇ ಉತ್ಸಾಹ ಇರ ದಿರುವುದು ಅನೇಕ ಕಾರಣಗಳಿಂದ. ಒಮ್ಮೆ ಮುಕ್ತಿ ಪಡೆದ ರೆ ಸಾಕೆಂದು ಹಿಂದೆ ಸರಿಯುವುದುಂಟು.
ದೌರ್ಜನ್ಯದ ಜ್ವಾಲೆ.. ನಮ್ಮೊಡಲ ಸುಟ್ಟಾಗಲೇ ಅದರ ಸಂಕಟ ಅರಿವಾಗುವುದು.ಉಳ್ಳಬರುವವರು ಕಂತೆ ಕಂತೆ ಗಳಲಿ ಸುರಿದು ಕರಗುವರು. ಇಲ್ಲದವರು, ಇದ್ದುದೆಲ್ಲವ ಕಳೆ ದುಕೊಳ್ಳುವರು.ಇನ್ನೂ ಗಟ್ಟಿನಿಲ್ಲುವವರಾರು?ಎಲ್ಲವೂ ಮಣ್ಣು ಪಾಲಾದರೆ? ನ್ಯಾಯ ಕೊಡಿಸಲು ಮುಂದಾಗುವ ವರ ಬಗ್ಗೆ ಯೋಚಿಸಿದಷ್ಟು ನಾಲಿಗೆ ಹಂತ ಹಂತವಾಗಿ ಕಿರಿದಾಗುತ್ತಿರುವುದು ದುರಂತಕ್ಕೆ ಮುನ್ನುಡಿ ಬರೆದಂತೆ.
ನಿರ್ಭಯಾ ಪ್ರಕರಣ, ದಾನಮ್ಮ, ಪ್ರೀಯಾಂಕ ರೆಡ್ಡಿ, ಹೀಗೆ ನೂರಾರು ಮುಗ್ದ ಜೀವಗಳು ಅಮಾನುಷವಾಗಿ ಬಲಿಯಾ ದುದು ಸಮಾಜದ ಇನ್ನೊಂದು ಮುಖದ ಅನಾವರಣ. ಕ್ಷಮಿಸು ಮಗಳೇ.. ಮೊನ್ನೆಯ ಘಟನೆ ಇಡೀ ದೇಶ ಬೆಚ್ಚಿ ಬಿಳಿಸುವಂತಾಗಿದ್ದು, ಮನಿಷಾ ವಾಲ್ಮೀಕಿ ದಲಿತ ಅನ್ನುವ ಹಣೆಪಟ್ಟಿಯನ್ನು ಹೊತ್ತ ಕುಟುಂಬದ ಕುವರಿ. ಹೆಣ್ಣು ಹೆತ್ತವರ ಹೊಟ್ಟೆ ಬಂಜೆಯಾದಂತೆ. ಇನ್ನೆಂದು ಹೆಣ್ಣು ಕೂಸು ಹೆರಲಾರೆ ಎಂಬ ಪ್ರತಿಜ್ಞೆ ಮಾಡುವ ಸ್ಥಿತಿ. ಸತ್ಯ ಹೊರ ಬರದಿರಲು ನಾಲಿಗೆ ಕತ್ತರಿಸಿ ಮೌನವಾಗಿರಿಸಿದರು. ನಾವು ಇದ್ದು ಮೌನವಾದೆವು ನಮ್ಮೊಳಗೆ.ಅಷ್ಟಕ್ಕೂ ಸಾಕಾ ಗದೇ ಬದುಕಿದ್ದು ಸತ್ತ ಹೆಣವಾಗಿಸಿ ಸಾವು ಬರಲೆಂದೇ ಕೈಗೊಂಡ ಕಾರ್ಯನೆನೆದರೆ ಮೈಯಲ್ಲ ಬೆಂಕಿಹೊತ್ತಿ ಕೊಂಡು ಉರಿದಂತೆ. ಮಗಳ ಮುಖವನ್ನು ನೋಡಲು ಕೊಡದೆ ಕಾನೂನು ಸ್ವತಃ ಸುಟ್ಟು ಹಾಕಿದ ಘಟನೆ.ಇಂತಹ ಪ್ರಕರಣ ಗಳು ಸರ್ವೇಸಾಮಾನ್ಯವೆಂದೆನಿಸಿ ಬಿಡುತ್ತದೆ. ಪ್ರತಿ ದಿನ ಹೇಳ ಹೆಸರಿಲ್ಲದ ಎಷ್ಟೋ ಮುಗ್ದ ಹೆಣ್ಣು ಮಕ್ಕಳು ‘ಅತ್ಯಾಚಾರ’ವೆಂಬ ಪೆಡಂಭೂತದ ಕ್ರೂರ ಹಿಂಸೆಗೆ ನಲುಗುತ್ತಿರುವುದಕ್ಕೆ ಅಂಕಿ ಸಂಖ್ಯೆಗಳನ್ನು ಗೌಪ್ಯವಾಗಿ ಇಡಲಾಗಿದೆ.ಪ್ರತಿರೋಧಿ ಸಬೇಕಾಗಿದ್ದುದು ಅನಿವಾರ್ಯ ವಾಗಿದೆ. ವಶಪಡಿಸಿಕೊಂಡ ಅಪರಾಧಿಗಳು ಅಪರಾಧಿಗಳೇ ಅಥವಾ ಇನ್ನೊಬ್ಬರಿಗೆ ತಲೆ ದಂಡವಾಗಿ ಬಂದವರಾ? ಗೂಂಡಾಗಿರಿಯು ಅಬಲೆಯರ ‘ಆಬ್ರೂ’ವನ್ನೂ ನೆಲಸಮ ಮಾಡುತ್ತಿರುವುದನ್ನು ಸಹಿಸಲು ಸಾಧ್ಯವಾ?
ರಾಜ್ಯ ಯಾವುದಾದರೇನು? ಉಸಿರಾಡುವ ಜೀವದ ಬೆಲೆ ಅರಿಯದಿದ್ದರೆ ಮನುಷ್ಯನಾಗಿ ಬದುಕಿದ್ದು ವ್ಯರ್ಥವೇ ಸರಿ ಹೆಣ್ಣು ಪೂಜ್ಯನೀಯ ಸ್ಥಾನ ನೀಡಿದ್ದು ಶಾಪವಾಗಿ ಪರಿಣ ಮಿಸಿದರೆ ಜಗತ್ತಿನ ಎಲ್ಲ ಹೆಣ್ಣುಕುಲವು ಕಲ್ಲಾಗಿ, ಜಡತ್ವದ ಮೂಲವಾಗಿ ಪರಿವರ್ತನೆ ಹೊಂದಿದರೆ ಮಾತ್ರ ಕಳೆದು ಕೊಂಡವರ ನೋವು ಹೃದಯ ತಲುಪುತ್ತದೆ.ಭ್ರೂಣ ಹತ್ಯೆ ಯಂತಹ ಅಸಹನೀಯ ಸನ್ನವೇಶ ಒಂದೆಡೆಯಾದರೆ, ವಯಸ್ಸಿಗೆ ಬಂದ ಹೆಣ್ಣು ಮಕ್ಕಳು,ಮನೆಯಿಂದ ಹೊರ ಬಂದು ಭಯದಲ್ಲಿ ಬದುಕುವ ವಾತಾವರಣ ನಿರ್ಮಾಣ ವಾಗುತ್ತಿರುವುದು ಶುಭ ಸೂಚನೆಯಲ್ಲ. ಅಲ್ಲದೇ ಹೆಣ್ಣಿಗೆ ನಿರ್ಬಂಧನದ ಬೇಡಿ ಹಾಕಿ ಹತ್ತಿಕ್ಕುವ ಹನ್ನಾರ ನಮಗರಿ ವಿಲ್ಲದೆಯೇ ನಡೆಯುತ್ತಿರುವುದು ಆಶ್ಚರ್ಯವಾದರೂ ಸತ್ಯ.ಇತಿಹಾಸ ಪುನಃ ಮರುಕಳಿಸುತ್ತಿದೆಯೆಂಬಂತೆ ಆಭಾ ಸವಾಗುತ್ತಿದೆ.ಮೊಗಲರ ಆಳ್ವಿಕೆಯ ಕಾಲದಲ್ಲಿ ಮಹಿಳೆಯ ರು ಅನುಭವಿಸಿದ ಶೋಷಣೆಯನ್ನು,ಹಿಡಿತವನ್ನು, ನಡೆಸಿ ಕೊಂಡ ರೀತಿಯು ದೌರ್ಜನ್ಯದ ಮೆಟ್ಟಿಲು. ಅದನ್ನೇ ಬುನಾ ದಿಯಾಗಿ ಪರಿವರ್ತಿಸಿ,ಮುಂದುವರೆಸಿಕೊಂಡು ಬರುತ್ತಿರುವುದು ದುರಂತ.ಪುರುಷ-ಮಹಿಳೆ ಪ್ರಕೃತಿಯಲ್ಲಿ ಸಮಾ ನರೆಂಬ ಸತ್ಯ ಒಪ್ಪಿಕೊಳ್ಳದೆ,ಸಿಕ್ಕ ಸ್ವಾತಂತ್ರ್ಯ ಮಹಿಳೆಯರಿಗಿಲ್ಲ. ನಾಲ್ಕು ಗೋಡೆಗಳಲಿ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಸಮಾಜ ವ್ಯವಸ್ಥೆ ಪರ್ಯಾಯವಾಗಿ ಯಥೇಚ್ಛವಾಗಿ ತೆರೆ ಮರೆಯಲ್ಲಿ ಪುಷ್ಟಿಕರಿಸುತ್ತಿದೆ.
ಸಮಾನತೆಯ ಹೆಸರಲ್ಲಿ ನಯವಂಚರ ಹೆಡಮುರಿಕಟ್ಟಲು ಮಹಿಳೆಯರು ಕಂಕಣಬದ್ದರಾಗಬೇಕಿದೆ. ಯಾವ ಜಾತಿ, ಧರ್ಮವಾದರೂ ಹೆಣ್ಣು.. ಹೆಣ್ಣೇ.ಎಂಬ ಸತ್ಯ ಮನಗಾಣು ವುದು ಬಹುಮುಖ್ಯ.ಶ್ರೀಮಂತರ ಪ್ರಕರಣಕ್ಕೆ ಪುಷ್ಟಿ,ಅಷ್ಟೇ ಬೇಗ ಎನ್ಕೌಂಟರ್. ಬಡವರ, ಜಾತಿ ಧರ್ಮ ಬೆಂಬಲದ ಆಧಾರದ ಮೇಲೆ ನಿರ್ಣಯ.ಇದರಿಂದ ಮುಕ್ತಿಯಾವಾಗ? ಅತ್ಯಾಚಾರಗಳು,ಬರ್ಬರ ಹತ್ಯೆಗಳು, ಮೂಕವೇದನೆಗಳ ನ್ನು ಕೊಂಡುಕೊಳ್ಳುವವರಿದ್ದಾರೆ. ಅಲ್ಲಿಗೆ ಎಲ್ಲವೂ ಮುಗಿದಂತೆ . ಎನ್ಕೌಂಟರ್ ಆಗುತ್ತಿರುವುದು ಅಬಲೆಯರೆಂಬುದು ಮರೆಯುವಂತಿಲ್ಲ.ಅಪರಾಧಿಯನ್ನು ಸಾರ್ವಜನಿಕವಾಗಿ ಶಿಕ್ಷಿಸಲು ಕಾನೂನು ಕ್ರಮ ಕೈಗೊಳ್ಳಬೇಕು.ಆತ್ಮಸ್ಥೈರ್ಯ, ಆತ್ಮನಿರ್ಭರದ ದಿಟ್ಟ ಹೆಜ್ಜೆ ಇಡುವಲ್ಲಿ ಪಾಲಕರು, ಕುಟುಂ ಬ,ಸಮಾಜದ ವ್ಯವಸ್ಥೆ ಭದ್ರಪಡಿಸುವುದು ಅನಿವಾರ್ಯ. ಯಾವುದೇ ಮನೆಯ ನಂದಾದೀಪಗಳು ಆರಿಹೋಗದಿರ ಲಿ ಮಧ್ಯಂತರದಲ್ಲಿ.ಅವು ದೇಶದ ಸಂಸ್ಕೃತಿಯ ಆಧಾರ ವಾಗಿ ಸಮಾನತೆಯ ಹೆಮ್ಮೆಯಾಗಿ,ಹೆಮ್ಮರವಾಗಿ ಬೆಳೆಸ ಲು ಪ್ರಕೃತಿಗಿಂತ ಉದಾಹರಣೆ ಬೇರೆ ಇಲ್ಲ.ಹೆಣ್ಣು ಜಗದ ಕಣ್ಣು ಅನ್ಯಾಯದ ವಿರುದ್ಧ ಧ್ವನಿಯೆತ್ತಿ ಕಿಂಚಿತ್ತಾದರೂ ಮಾನವೀಯ ಮೌಲ್ಯವ ಎತ್ತಿ ಹಿಡಿಯೋಣ…..
— ಶಿವಲೀಲಾ ಹುಣಸಗಿ ಯಲ್ಲಾಪುರ.