Site icon ಒಡನಾಡಿ

ಹೋಗು ಮನಸೇ ಹೋಗು… ಈ ಪ್ರೀತಿಯ ಹೇಳಿಬಾ ಹೋಗು…!!

ಯಾರೋ ಮುಸುಕು ಎಳೆದಂತಾಗಿ ಪುನಃ ಹೋದಿಕೆ ಎಳೆ ದು ಮುದ್ದೆಯಾಗಿ ಮಲಗಿದೆ. ಕಣ್ಣು ತೆಗೆಯಲಾಗದಷ್ಟು ನಿದ್ದೆ ಕಂಗಳ ತುಂಬ ಹೊದ್ದು ಮಲಗಿರುವಾಗ ಎಳುವ ಮಾತೆಲ್ಲಿ.? ಆದರೆ ಮನದೊಳಗೊಂದು ಅಳುಕು,ಯ್ಯಾರಿಗೂ ಹೇಳಲಾರದ ಆತಂಕ, ಎನೋ ಬಿದ್ದಂತಾಗಿ ಹೆದರಿ ಎದ್ದು ಕೂತೆ. ಹಾಳಾದ ಕಳ್ಳ ಬೆಕ್ಕು.. ಇಲಿಯ ಬೇಟೆಗೆ ಅತ್ತಿಂದಿತ್ತ ಹೊಂಚು ಹಾಕಿ ನೆಗೆಯುತ್ತಿತ್ತು. ನಿದ್ದೆ ಮಾತ್ರ ಎಳೆದು ಮಲಗಿಸಲು ಪ್ರಯತ್ನಸುತ್ತಿತ್ತು….ಮನಸ್ಸು ಮಾತ್ರ ಅವನ ತುಂಟಾಟದತ್ತ ಮಗ್ನವಾಗಿತ್ತು.

ʼಏಳೆ ಸೊಂಬೇರಿ…….ಎಷ್ಟು ನಿದ್ದೆ ಮಾಡತಿಯಾ? ಒಂದ ಕಪ್ ಚಹಾ ಮಾಡ ಕೊಡೆʼ ಎಂದು ಕಾಡಿಸುವ ನಲ್ಲ ನೆನಪಾಗಿದ್ದು ಆಶ್ಚರ್ಯ..! ʼನಿದ್ದೆ ಕಣೋ ಕಾಡಬೇಡ….ಆ ಮೇಲೆ ಮಾಡಕೊಡತಿನಿʼ ಅಂತ ಇದ್ದಬಿದ್ದ ಹೊದಿಕೆಯಲ್ಲಾ ಸುತ್ತಿಕೊಂಡು ಮುದ್ದೆಯಾಗಿದ್ದೆ ತಡ…ಮೆಲ್ಲನೆ ಹೊದಿಕೆಯೋಳು ನುಸುಳಿ ಬಿಸಿಯಪ್ಪುಗೆ ಯಲಿ ಬಿಗಿದಾಗ ಎನೋ ಸೆಳೆತದ ಸೆಖೆ ಹೆಚ್ಚಾಗಿ ಹೊದಿಕೆಯೆಲ್ಲ ಬಿಸಾಕಿ ಪ್ಯಾನಿಗೆ ಮೈ ಒಡ್ಡಿದೆ, ಅವನೆದೆಯ ಬಡಿತ ನನ್ನೆದೆಯನ್ನು ಸುರುಳಿಸುತ್ತಿದಾಂಗಾಗಿ,ತೊಳತೆಕ್ಕೆಯ ಲಿ ಕರಗಿದಾ ಕ್ಷಣವ ಕೊಸರಿ…ಚಾ ಮಾಡುವೆ ತಡಿಯೋ ಅಂದರೂ ಬಿಡದೇ ಹೊದಿಕೆಯೋಳು ಜಾರಿಸಿದವನ ದೂರ ತಳ್ಳಲಿ ಹೇಗೆ???.

ಎಂಗೇಜ್ ಮೆಂಟ್ ಆಗಿದ್ದೇ ಆಗಿದ್ದು ನಾನವನ ಸೊತ್ತಾಗಿ, ಅವನೋ ಹಗಲಿರುಳು ಕಾವಲು, ತುಟಿಯ ಲೇಪನಕೊಂದು ದೀರ್ಘ ಚುಂಬನದ ಮುದ್ರೆ. ನಿನ್ನ ಕಾಟ ಹೆಚ್ಚಾಯಿತೆಂದರೆ ಸಾಕು ಸೊಂಟದ ಸುತ್ತ ಸ್ಪರ್ಶದಾ ಕಾವಲು. ಒಂದಿಂಚು ಅಲುಗದಾ ನಿಗಾ…ಮುಂಗುರುಳ ಚಲನೆಯು ಬಳುಕಲು ಅವನ ಕೇಳುವಂತಿತ್ತು. ಕಂಗಳ ಕಾಡಿಗೆ ಅವ ತೀಡಿದಾ ಗ ನೀಟಾಗುತ್ತಿತ್ತು. ಸೀರೆಯ ನೀರಿಗೆಗಳು ಅವನ ಸ್ಪರ್ಶಕ್ಕಾಗಿ ಕಾದು ಕುಳಿತಂತಿತ್ತು. ಇದೊಳ್ಳೆ ಕತೆಯಾಯಿತಲ್ಲ. ನನ್ನ ಸುಕೋಮಲ ಮನ ನನ್ನ ಮಾತನ್ನು ಕೇಳದೆ ಅವನ ಅಪ್ಪ ಣೆಯಂತೆ ನಡೆಯಲು ಶಪತ ಮಾಡಿದ್ದು ವಿಚಿತ್ರ. ನಿನ್ನೆ ಮೊ ನ್ನೆ ಬಂದವಗೆ ಇಷ್ಟೊಂದು ಶರಣಾಗುವುದು ಎಷ್ಟರ ಮಟ್ಟಿ ಗೆ ಸರಿ..? ಎಂದು ಸಿಟ್ಟಾಗಿ ಹೆರಳ ಬಾಚುವಾಗ ಮುಂಗುರುಳ ತೀಡಲು ಅವಬೇಕೆಂದು ಮನ ಹಂಬಲಿಸಿ, ಕೆನ್ನೆ ಕೆಂಪಾಗಿದ್ದನ್ನು ಕನ್ನಡಿ ನೋಡಿ ನಕ್ಕಂತಾಯಿತು.

ಮದುವೆಯ ದಿನ ಹತ್ತಿರವಾದಂತೆ ನಾನು ನಾನಾಗಿರದೆ ಅವನ ಸೊತ್ತಾಗಿ ಪರಿವರ್ತನೆಯಾಗುತ್ತಿರುವುದು ಹಿತವಾದ ಅನುಭವ ತರುತ್ತಿತ್ತು. ಕುಂತಲ್ಲಿ, ನಿಂತಲ್ಲಿಅವನೇ… ಯಾರಿಗೂ ಕಾಣದಂತೆ ನಡು ರಾತ್ರಿ ಮೆಲ್ಲಗೆ ಬಳಿ ಬಂದು ಮುತ್ತಿನ ಹೊಳೆಯಾ ಹರಿಸುವವನು. ಗೋಡಗೊರಗಿ ಎದೆಯಾಲಿಂಗನದ ಸುಖವ ನೀಡುವವನ ದೂರ ನೂಕಲು ಹೃದಯ ಒಪ್ಪುತ್ತಿಲ್ಲ…ಕಳ್ಳ ಬೆಕ್ಕಿನಂತೆ ಕದ್ದು ಹಾಲ ಕುಡಿವ ಜಾಣ ಬೆಕ್ಕು..ಮಂಪರು ಹತ್ತಿದವರ ನಿದ್ದೆಗೆಡಿಸುವ ರೀತಿ ಪ್ರೇಮಾಲಾಪ….. ಬೆಕ್ಕು ಬಂತೆನೇ..ಬಾಗಿಲು ತಗಿಯೇ ಎಂದು ಅಕ್ಕ ಕೂಗಿದರೂ… ಎಳಲು ಬಿಡಬೇಕಲ್ಲ… ನನ್ನ ಬೆಕ್ಕು…… ಉಸಿರಾಡುತ, ಕೆಮ್ಮುತ ಇಲ್ಲಾ…ಹೋಯಿತು ಅಂದಾಗ ಬಾಗಿಲ ಬಡಿತ ಸ್ತಬ್ಧ. ಅಲ್ಲ.. ಕಣೋ ಹೀಗೆ ಬಂದ್ರೆ ನನ್ನ ಸ್ಥಿತಿಯೇನು? ಅನ್ನೊಕೆ ಬಿಟ್ಟರಲ್ಲ ಮದುವೆ ಯಾದ ಮೇಲೆ ಈ ರೀತಿ ಅನುಭವ ಆಗಲ್ಲ ಕಣೇ.. ಪೆದ್ದಿ.. ಆಗ ಪ್ರೀತಿಸುವ ಪರಿಯೇ ಬೇರೆ…! ಎಂದೆಲ್ಲಾ ಕಾಡುವವ.

ಮಾತಾಡ ಬೇಡ ಎನ್ನುತ್ತಾ ಬಾಯಿಗೆ ಚುಂಬನದ ಮುದ್ರೆ. ಆದರೂ ಮದುವೆಗೆ ಮುಂಚೆ ಇದೆಲ್ಲಾ ಬೇಕಾ..? ಎಂದು ಉಸಿರು ಬಿಡುತ್ತ ಮೆಲ್ಲಗೆ ಉಸುರಿದೆ. ನೋಡು ನನಗೆ ಬೇಕು. ನಿನ್ನ ಮನಸ್ಸಾರೆ ಪ್ರೀತಿಸಿ ಮನ ತುಂಬಿ ಕೊಳ್ಳಬೇಕು ಯಾಂತ್ರಿಕ ಜೀವನ, ಜಂಜಾಟ ಶುರುವಾದ ಮೇಲೆ ಸಮಯವಿರಲ್ಲ. ಅವನ ಬಿಗಿತದ ಬಂಧನಕ್ಕೆ ನಾ ಮೈಮರೆತಿದ್ದೆ. ದೇವರಲ್ಲಿ ಬೇಡಿದ್ದು ನಿಜ.. ನನ್ನ ಪ್ರೀತಿಸುವ ನಲ್ಲನ ನೀಡೆಂದು, ಅಡ್ವಾನ್ಸಾಗಿಯೇ ಇಷ್ಟಪಡುವವನ ಜೊತೆ ಮಾಡಿರುವುದನ್ನೆನು ನೆನೆದರೆ ಎನೋ ಹಿತ. ಒಲ್ಲೆಯೆಂದರೆ ನೊಂದು ಕೊಳ್ಳುವ ಅವನ ಮುಗ್ದ ಮುಖ ಮುದ್ದಿಸಿದಷ್ಟು ಕಡಿಮೆಯೇ…..ನೆನೆದಷ್ಟು ಪುಳಕ.

ಸಪ್ತಪದಿತುಳಿದು ಹನಿಮೂನ ಮುಗಿಸಿದರೂ ಕರಗದಾ ಮೂನು,ಮೂಡು ಅದರ ಬೆನ್ನಿಗೆ ಆಷಾಡದ ಗಾಳಿ ಸೋಕಿದಾಗ ಅನಿವಾರ್ಯವಾಗಿ ಒಂದು ತಿಂಗಳು ತವರು ಮನೆಯಂಗಳದಿ ಬಂದು ನಿಂತ ಗಳಿಗೆ. ಎನೋ ಉಲ್ಲಾಸ, ಸಂತಸ ಅದು ಕ್ಷಣ ಹೊತ್ತು ಮಾತ್ರವೆನಿಸಿದ್ದು. ಸಂಜೆಯಾದಂತೆ…ಇರುಳ ಬೆಳಕು ಅಣಕಿಸಿದಂತೆ ಹೊದಿಕೆ ಭಾರವಾದಂತೆ… ಮೈಮನಗಳಿಗೆ ಅವನ ಸ್ಪರ್ಶವಿರದ ವಿರಹ ಕಿತ್ತು ತಿನ್ನುತ್ತಿದ್ದಂತೆ.. ಹೊಸ ‌ಒಡಂಬಡಿಕೆ ನನ್ನೊಳಗೆ,.. ಹರೆಯ ಮರ್ದಿಸಲು ಅನುವಾದ ಕಾಲವ ಜತನದಿಂದ ಅಪ್ಪಿರುವಾಗ, ವಿರಹವು ಚಳಿ ಗುಂಟ ಬಂದು ನಡುಕ ಹುಟ್ಟಿಸಿದ್ದಂತು ದಿಟ. ಕಂಗಳು ಮುಚ್ಚಿದರೆ ಸಾಕು ಎದುರಿಗೆ ನಗುವ ಅವನ ಬಿಂಬ ಇನ್ನಷ್ಟು ದೇಹ ಕಂಪಿಸಲು ಕಾರಣವಾಗಿ ಮನಸು ಚಡಪಡಿಸುತಿದೆ ಅವನ ಕಾಣಲು. ಏಕಿಂತು ಕಾಡುವೆಯೆಂದು ದೋಷಿಸಲು ಕಂಗಳು ಹಗಲುಗನಸ ಬಡಿದೆ ಎಚ್ಚರಿಸಿದೆ…ಎಂಗೇಜ್ ಮೆಂಟ್,ಮದುವೆ,ಸಪ್ತಪದಿ ಎಲ್ಲಯೂ ಮುಗಿದಿದ್ದಂತೂ ಸತ್ಯ….! ಅವನಾರೆಂದು ಹುಡುಕುತಿದೆ ಮನಸು….ದಿಕ್ಕ ತಪ್ಪಿಸಿದವನ…..ಹೃದಯ ಕದ್ದ ಚೋರನು.. ಗಾಳಿಯಲ್ಲಿರುವನೋ, ಬೆಕ್ಕಾಗಿರುವನೋ, ಏನಾಗಿರುವನೋ… ಪತ್ತೆ ಹಚ್ವಲು….ಕಳಿಸಿರುವೆ.

“ಹೋಗು ಮನಸೇ ಹೋಗು ನನ್ನವನ ಬಳಿ ಹೋಗು…. ಮುದ್ದು ಮನಸೇ ಹೋಗು.. ಅವನಿರುವಲ್ಲಿ”…..ವೇದನೆ ತುಂಬಿದ ಹೃದಯ ಮಿಡಿದಿದ್ದೆ ತಡ…..ಕಳ್ಳ ಬೆಕ್ಕಿನಂತೆ ಅಡಗಿ ಕಾಡುವ ವಿರಹದಾ ತಂಗಾಳಿಯ ಸುಳಿಗೆ ಸಿಲುಕಿದಂತೆಲ್ಲಾ..,ಅವನಂದ ಮಾತು ಆಶರೀರವಾಣಿಯಂತೆ ಕಿವಿಯಲಿ ಗುಂಯ್ ಗುಟ್ಟುತ್ತಿದೆ…ಎಷ್ಟು ಸತ್ಯ… ಸುಳ್ಳಲ್ಲ ಈ ಪ್ರೀತಿ ಹೇಳಿ ಬಾ ಹೋಗು….ಎನುತಿದೆ.

–ಶಿವಲೀಲಾ ಹುಣಸಗಿ, ಯಲ್ಲಾಪುರ

Exit mobile version