Site icon ಒಡನಾಡಿ

ರಾಜ್ಯದಲ್ಲಿ 11000ಕ್ಕೇರಿದ ಕೊರೊನಾ ಸೋಂಕಿತರು… ಶುಕ್ರವಾರ 10 ಬಲಿ…, 450 ಜನರಿಗೆ ಪಾಸಿಟಿವ್…

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತ ಸಂಖ್ಯೆ 11000ಕ್ಕೇರಿದ್ದು, ಶುಕ್ರವಾರ 10 ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 180 ಕ್ಕೆ ಏರಿಕೆಯಾದಂತಾಗಿದೆ.

ಕೊರೋನಾ ವೈರಸ್ ನಿಂದಾಗಿ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ ಮೂವರು ಸೇರಿದಂತೆ ಒಟ್ಟು 10 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೂ ಬೆಂಗಳೂರಿನಲ್ಲಿ ಅತಿ ಹೆಚ್ಚು ಎಂಬಂತೆ 81 ಜನ ಮೃತಪಟ್ಟಿದ್ದರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಉತ್ತರ ಕನ್ನಡದಲ್ಲಿ ಆರು ಪಾಸಿಟಿವ್‌ ಸೇರಿದಂತೆ ರಾಜ್ಯದಲ್ಲಿ ಹೊಸದಾಗಿ 445 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 11005ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಶುಕ್ರವಾರ 246 ಮಂದಿ ಗುಣಮುಖರಾಗಿದ್ದಾರೆ. ಇದರಿಂದ ಚೇತರಿಕೆ ಕಂಡವರ ಸಂಖ್ಯೆ 6916ಕ್ಕೇರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 3905 ಸಕ್ರಿಯ ಪ್ರಕರಣಗಳಿದ್ದು, 178 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಸದಾಗಿ ಪತ್ತೆಯಾದ 445 ಸೋಂಕಿತರ ಪೈಕಿ 21 ಮಂದಿ ಅಂತರಾಷ್ಟ್ರೀಯ ಪ್ರಯಾಣ ಹಿನ್ನೆಲೆ ಹಾಗೂ 65 ಮಂದಿ ಹೊರರಾಜ್ಯ ಪ್ರಯಾಣದ ಇತಿಹಾಸ ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಬೆಂಗಳೂರು ನಗರದಲ್ಲಿ 144, ಬಳ್ಳಾರಿಯಲ್ಲಿ 47, ಕಲಬುರಗಿಯಲ್ಲಿ 42, ಕೊಪ್ಪಳದಲ್ಲಿ 36, ದಕ್ಷಿಣಕನ್ನಡದಲ್ಲಿ 33, ಧಾರವಾಡದಲ್ಲಿ 30, ರಾಯಚೂರಿನಲ್ಲಿ 14, ಗದಗದಲ್ಲಿ 12, ಚಾಮರಾಜನಗರದಲ್ಲಿ 11, ಉಡುಪಿಯಲ್ಲಿ 9, ಯಾದಗಿರಿಯಲ್ಲಿ 7, ಮಂಡ್ಯ, ಉತ್ತರಕನ್ನಡ, ಬಾಗಲಕೋಟೆ, ಶಿವಮೊಗ್ಗ, ಕೋಲಾರದಲ್ಲಿ ತಲಾ 6, ಮೈಸೂರಿನಲ್ಲಿ 5, ಚಿಕ್ಕಮಗಳೂರು, ಕೊಡುಗಿನಲ್ಲಿ ತಲಾ 4, ಬೆಂಗಳೂರು ಗ್ರಾಮಾಂತರ, ಹಾಸನದಲ್ಲಿ ತಲಾ3, ವಿಜಯಪುರ, ತುಮಕೂರು, ಹಾವೇರಿಯಲ್ಲಿ ತಲಾ 2, ಬೀದರ್‌,ಬೆಳಗಾವಿ, ದಾವಣಗೆರೆ, ರಾಮನಗರ, ಚಿತ್ರದುರ್ಗದಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ. 

ಕೋಲಾರದಲ್ಲಿ 43 ವರ್ಷದ ಮಹಿಳೆ, ಧಾರವಾಡದ 42 ವರ್ಷದ ಮಹಿಳೆ, ಶಿವಮೊಗ್ಗದ 75 ವರ್ಷದ ಮಹಿಳೆ, ಬಾಗಲಕೋಟೆಯಲ್ಲಿ 57 ವರ್ಷದ ವ್ಯಕ್ತಿ, ಬೀದರ್‌ನಲ್ಲಿ 71 ವರ್ಷದ ವ್ಯಕ್ತಿ, ಕಲಬುರಗಿಯಲ್ಲಿ 55 ವರ್ಷದ ವ್ಯಕ್ತಿ, ಬಳ್ಳಾರಿಯಲ್ಲಿ 65 ವರ್ಷದ ಮಹಿಳೆ, ಬೆಂಗಳೂರು ನಗರದಲ್ಲಿ 45 ವರ್ಷದ ವ್ಯಕ್ತಿ, 63, 66 ವರ್ಷದ ವ್ಯಕ್ತಿಗಳು ಸೋಂಕಿನಿಂದ ಮೃತಪಟ್ಟಿದ್ದಾರೆ.

Exit mobile version