ಚಿರತೆಯೊಂದು ಅರಣ್ಯದಿಂದ ಬಂದು ರಸ್ತೆ ದಾಟುತ್ತಿರುವ ವಿಡಿಯೋ ಕಳೆದ ಕೆಲ ದಿನಗಳಿಂದ ಪೇಸಬುಕ್, ವಾಟ್ಸೆಪ್‌ಗಳಲ್ಲಿ ಜೋರಾಗಿ ಹರಿದಾಡುತ್ತಿದೆ. ಆದರೆ ಇದು ಎಲ್ಲಿ ಕಂಡ ಚಿರತೆ ಯಾರಿಗೂ ಸ್ಪಷ್ಟತೆಯಿಲ್ಲ.
ಅರಣ್ಯವನ್ನು ನೋಡಿದರೆ ದುರ್ಗಮವೇ ಆಗಿದೆ. ಆದರೆ ಯಾವ ಅರಣ್ಯ ಪ್ರದೇಶ ತಿಳಿಯುತ್ತಿಲ್ಲ. ಯಾರೋ ಪ್ರಯಾಣಿಕರು ತಮ್ಮ ಪ್ರವಾಸದ ವೇಳೆ ಈ ವಿಡಿಯೋ ಮಾಡಿ ಹರಿ ಬಿಟ್ಟಿದ್ದಾರೆ. ಕೆಲವರು ಇದು ದಾಂಡೇಲಿಗೆ ಹತ್ತಿರದ ಕುಳಗಿಯಿಂದ ಭಾಗವತಿ ವರೆಗಿನ ರಸ್ತೆಯಲ್ಲಿ ಕಂಡಿದ್ದು ಎಂದರೆ, ಮತ್ತೆ ಕೆಲವರು ಮೈಸೂರು, ಮತ್ತೆ ಕೆಲವರು ಬೆಂಗಳೂರು ಭಾಗದ ಅರಣ್ಯ ಪ್ರದೇಶದಲ್ಲಿ ಹಾದು ಹೋದ ರಸ್ತೆಯಲ್ಲಿ ಕಂಡಿದ್ದು ಎನ್ನುತ್ತಿದ್ದಾರೆ. ಸತ್ಯ ತಿಳಿಯುತ್ತಿಲ್ಲ. ಆದರೆ ವಿಡಿಯೋ ಮತ್ರ ಎಲ್ಲಡೆ ವೈರಲ್ ಆಗುತ್ತಿದೆ.