ದಾಂಡೇಲಿ: ವರ್ಷವಿಡೀ ನೂರಾರು ಮೊಸಳೆಗಳನ್ನು ನೋಡಬಹುದಾದ ಜಾಗವೆಂದರೆ ಅದು ದಾಂಡೇಲಿಗೆ ಹತ್ತಿರದ ಹಾಲಮಡ್ಡಿಯ ದಾಂಡೇಲಪ್ಪಾ ದೇವಸ್ಥಾನದ ಬಳಿಯ ಕಾಳಿನದಿಯ ದಂಡೆ. ಇದೀಗ ಇಲ್ಲಿ ಮೊಸಳಗಳು ಮೊಟ್ಟೆಯಟ್ಟು, ಮರಿಯೊಡೆದು ಆ ಮರಿಗಳನ್ನು ಕಾಳಜಿಯಿಂದ ಕಾಯುತ್ತಿರುವ ಮೊಸಳೆ ಮಾತೃತ್ವದ ಅಪರೂಪದ ದೃಷ್ಯ ಸದ್ಯ ಕಾಣಬಹುದಾಗಿದೆ.
ದಾಂಡೇಲಿಯ ಕಾಳಿನದಿಗುಂಟ ಸಾಕಷ್ಟು ಮೊಸಳೆಗಳು ಕಾಣಸಿಗುತ್ತವೆ. ಅದರಲ್ಲೂ ಹಾಲಮಡ್ಡಿ ದಾಂಡೇಲಪ್ಪ ದೇವಸ್ಥಾನದ ಬಳಿಯ ಪಾಟೀಲರ ಹೊಲಕ್ಕೆ ಅಂಟಿಕೊಂಡಿರುವ ನದಿ ದಂಡೆಯ ಉದ್ದಕ್ಕೂ ಈ ಮೊಸಳೆಗಳು ಗುಂಪು ಗುಂಪಾಗಿ ಕಾಣ ಸಿಗುತ್ತವೆ. ಈ ಪ್ರದೇಶ ಈಗಾಲೇ ಮೊಸಳೆ ಪಾರ್ಕ ಎಂದು (ಅ) ಘೋಷಿತಗೊಂಡಿದೆ. ( ಹಾಗಾಗಿಯೇ ಇದೀಗ ಈ ಜಾಗದ ಪಕ್ಕದಲ್ಲೇ ಮಸಳೆ ಉದ್ಯಾನವನವೂ ನಿರ್ಮಾಣ ಹಂತದಲ್ಲಿದೆ) ನದಿಯ ದಂಡೆಯ ಮೇಲೆ ಹಾಗೂ ನದಿಯ ನಡುವಿನ ಸಣ್ಣ ಸಣ್ಣ ನಡುಗಡ್ಡೆಗಳ ಮೇಲೆ ಸಾಲಾಗಿ, ಗುಂಪಾಗಿ ಬಿದ್ದುಕೊಂಡಿರುವ ಮೊಸಳೆಗಳನ್ನು ನೋಡುವುದೇ ಚಂದ. ಬೃಹದ್ದಾಕಾರದ ಇವು ಭಯಾನಕವಾಗಿ ಕಾಣುತ್ತಿದ್ದರು ಒಂದು ರೀತಿಯಲ್ಲಿ ನಿರುಪದ್ರವಿಗಳು, ಮಾನವ ಸ್ನೇಹಿ ಮೊಸಳೆಗಳು ಎನ್ನಬಹುದು (ಅಪವಾದವೆಂಬಂತೆ ಕೆಲವೊಂದು ಅಹಿತಕರ ಘಟನೆಗಳು ನಡೆದಿದ್ದು ಬಿಟ್ಟರೆ.)
ಒಂದೇ ಕಡೆ ಕಾಣಸಿಗುವ ಈ ಮೊಸಳೆಗಳನ್ನು ನೋಡಲೆಂದೇ ಸಾಕಷ್ಟು ಜನ ಹೊರ ಊರಿನಿಂದಲೂ ಬಂದು ಹೋಗುತ್ತಾರೆ.
ಹಿಂಂದೆ ರೆಸಾರ್ಟ, ಹೋಮ್ ಸ್ಟೇ ನವರ ಪ್ಯಾಕೇಜನಲ್ಲಿ ಕ್ರೊಕೋಡೈಲ್ ಪಾರ್ಕ ವಿಸಿಟ್ ಎಂಬ ಪ್ಯಾಕೇಜ್ ಜೊತೆಯಿರುತ್ತಿತ್ತು. ಈ ಮೊಸಳೆಗಳನ್ನು ತೋರಿಸಿ ಹಣ ಮಾಡಿಕೊಂಡವರೂ ಇದ್ದಾರೆ. ಬೇಸಿಗೆಲ್ಲಿ ಎತ್ತರದ ಖಾಲಿ ಪ್ರದೇಶಲ್ಲಿ ಬಿಸಲಿಗೆ ಮೈ ಆನಿಸಿ ಬಾಯ್ ತೆರೆದು ಮಲಗುವ ಆ ದೃಷ್ಯ ರುದ್ರ ರಮಣೀಯವಾಗಿರುತ್ತದೆ. ಹಾಗೂ ಹೀಗೂ ಇಲ್ಲಿ ಸರಿ ಸುಮಾರು ನೂರಕ್ಕೂ ಹೆಚ್ಚಿನ ದೊಡ್ಡಗಾತ್ರದ ಮೊಸಳೆಗಳೆ ಇರಬಹುದೆಂದೇ ಅಂದಾಜಿಸಲಾಗಿದೆ. ಹೀಗೆ ಇಷ್ಟೊಂದು ಮೊಸಳೆಗಳು ಇದೊಂದೇ ಸ್ಥಳದಲ್ಲಿ ವರ್ಷವಿಡೀ ಗುಂಪಾಗಿರಲು ಕಾರಣವೇನು ಎಂಬುದರ ಬಗ್ಗೆ ಯಾರಿಂದಲೂ ಸ್ಪಷ್ಟ ಮಾಹಿತಿಯಿಲ್ಲ.
ಬಲ್ಲವರು ಹೇಳುವ ಪ್ರಕಾರ ಈ ಮೊಸಳೆಗಳು ಡಿಸೆಂಬರ ಹಾಗೂ ಜನವರಿ ತಿಂಗಳಲ್ಲಿ ಮೊಟ್ಟೆರಯಿಡುತ್ತವೆ. ಮೊಟ್ಟೆಯಿಡಲು ಅವು ನದಿ ದಂಡೆಯ ಮೇಲೆ ಮಣ್ಣಿನಲ್ಲಿ ತಮ್ಮದೇ ಗೂಡುಗಳನ್ನು ನಿರ್ಮಿಸಿಕೊಳ್ಳುತ್ತವೆ. ಅಲ್ಲಿ ಒಂದೊಂದು ಮೊಸಳೆ ಹತ್ತಾರು ಮೊಟ್ಟೆರಯಿಟ್ಟು ಸುಮಾರು ಮೂರು ತಿಂಗಳುಗಳ ಕಾಯುತ್ತ ಇರುತ್ತವೆ. ಇಟ್ಟ ಮೊಟ್ಟೆಗಳನ್ನು, ಹಾವು, ಮುಂಗೂಸಿ ಅಥವಾ ಇತರೆ ಪ್ರಾಣಿಗಳು ತಿನ್ನುವ ಸಾಧ್ಯತೆಗಳಿರುವುದರಿಂದ ತಾಯಿ ಮೊಸಳೆಗಳು ಮೊಟ್ಟೆÀಯಿಟ್ಟ ನಂತರ ಅಲ್ಲಿಯೇ ಕಾದಿರುತ್ತವೆ. ಹಿಗೆ ಈ ವರ್ಷ ಈ ದಂಡೆ ಮೇಲೆ ಹತ್ತಕ್ಕೂ ಹೆಚ್ಚು ಮೊಸಳೆಗಳು ಮೊಟ್ಟಯಿಟ್ಟಿದ್ದು ಕಾಣುತ್ತದೆ.
ಇನ್ನು ಮೂರು ತಿಂಗಳ ನಂತರ ಈ ಮೊಟ್ಟೆಯೊಡೆದು ಮರಿಯಿಯಾಗುತ್ತವೆ. ಆಗ ತಾಯಿ ಮೊಸಳೆಗಳು ಆ ಮರಿಗಳನ್ನು ಬಿಟ್ಟು ಹೋಗುವುದೇ ಇಲ್ಲ. ಕೆಲಕಾಲ ಮೊಟ್ಟೆಯಿಟ್ಟ ಅದೇ ಗೂಡಿನಲ್ಲಿ, ಮತ್ತೆ ಮರಿಗಳೂ ಹರಿದಾಡರಂಬಿಸಿದ ನಂತರ ಕೆಲ ಕಾಲ ನದಿ ದಂಡೆಯ ಮೇಲೆ ಅವುಗಳನ್ನು ತಮ್ಮ ಹೊಟ್ಟೆಯ ಕೆಳಗೆ ಜಾಗ ಮಾಡಿಟ್ಟು ರಕ್ಷಿಸುತ್ತವೆ. ಗಿಡುಗ ಹಾಗೂ ಇತರೆ ಹಕ್ಕಿಗಳು ಹಾಗೂ ಬೇರೆ ಪ್ರಾಣಿಗಳು ಮರಿ ಮೊಸಳೆಗಳನ್ನು ತಿನ್ನುವ ಸಾಧ್ಯತೆಯಿರುವುದರಿಂದ ತಾಯಿ ಮೊಸಳೆ ಅವುಗಳನ್ನು ಬಹಳ ಜಾಗೃತೆಯಿಂದ ಕಾಯುತ್ತಿರುತ್ತದೆ. ಮರಿಗಳನ್ನು ಬಿಟ್ಟು ಬೇರೆಲ್ಲು ಹೋಗುವುದೇ ಇಲ್ಲ. ಹಸಿವಾದಾಗ ಕೆಲ ಸಮಯ ನೀರಿಗಿಳಿದು ಬರುತ್ತದೆ ಅಷ್ಟೆ. ಮರಿ ಮೊಸಳೆಗಳೂ ಸಹ ತಾಯಿಯ ಅಕ್ಕ ಪಕ್ಕದಲ್ಲೇ ಹರಿದಾಡುತ್ತಿರುತ್ತವೆ.
ದಿನ ಕಳೆದಂತೆ ದೊಡ್ಡದಾದ ಮೇಲೆ ನದಿಗಿಳಿಯುತ್ತವೆ. ಅವುಗಳಲ್ಲಿ ಅರ್ದದಷ್ಟು ಬೇರೆ ಪ್ರಾಣಿಗಳ ಆಹಾರವಾಗಿಯೋ ಆಥವಾ ಇನ್ಯಾವುದೋ ಕಾರಣದಿಂದ ಸಾಯುತ್ತಿದ್ದು, ಅರ್ದದಷ್ಟೇ ಮೊಸಳೆಗಳು ಉಳಿಯುತ್ತವೆ ಎನ್ನುತ್ತಾರೆ ತಿಳಿದವರು.
ಮೊಸಳೆಯ ಮಾತೃತ್ವ…
ಹಾಲಮಡ್ಡಿ ಪಾಟೀಲರ ತೋಟದ ಕೆಳಭಾಗದಲ್ಲಿರುವ ಬಾಳೆಗಿಡಗಳ ಬುಡದಲ್ಲಿ ಹಾಗೂ ಗಿಡ ಗಂಟಿಯ ಸಂದಿಯಲ್ಲಿ ತಾಯಿ ಮೊಸಳೆ ತನ್ನ ಮರಿಗಳನ್ನು ಕಾಯುವ ಜಾಗೃತಾವಸ್ಥೆಯಲ್ಲಿ ಮಲಗಿಕೊಂಡಿರುತ್ತದೆ. ಸಣ್ಣ ಶಬ್ದವಾದರೂ ತಲೆ ಎತ್ತಿ ನೋಡುತ್ತದೆ. ಆಗಾಗ ನದಿಗಿಳಿದು ತನ್ನ ಆಹಾರ ಸೇವಿಸಿ ಬರುವ ತಾಯಿ ಮೊಸಳೆ ಮರಿಗಳ ರಕ್ಷಣೆಯಲ್ಲಿಯೇ ಹೆಚ್ಚು ಕಾಲ ಕಳೆಯುವುದು ವಿಶೇಷವಾದುದ್ದಾಗಿದೆ. ಇಲ್ಲಿ ಮೊಸಳೆಯ ಮಾತೃತ್ವ ಕಾಣಬಹುದಾಗಿದೆ.
—ಬಿ.ಎನ್. ವಾಸರೆ
ಈ ಸುದ್ದಿಗೆ ಸಂಬಂದಿಸಿದ ವಿಡಿಯೋ ಇಲ್ಲಿದೆ … ಕ್ಲಿಕ್ ಮಾಡಿ….