Site icon ಒಡನಾಡಿ

ಪೌರಸೇವಾ ನೌಕರರ ಸಂಘದ ಅಧ್ಯಕ್ಷರಾಗಿ ‌ಮೈಕಲ್ ಫರ್ನಾಂಡೀಸ್ ಪುನರಾಯ್ಕೆ

ದಾಂಡೇಲಿ: ಪೌರಸೇವಾ ನೌಕರರ ಸಂಘದ ಅಧ್ಯಕ್ಷರಾಗಿ ದಾಂಡೇಲಿ ನಗರಸಭೆಯ ಲೆಕ್ಕಾಧೀಕ್ಷಕರಾದ ಮೈಕಲ್ ಫರ್ನಾಂಡೀಸ್ ಪುನರಾಯ್ಕೆಯಾಗಿದ್ದಾರೆ.

ದಾಂಡೇಲಿ‌ನಗರ ಸಭೆಯಲ್ಲಿ ಶನಿವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಮೈಕಲ್ ಫರ್ನಾಂಡೀಸ್ 45 ಮತಗಳಲ್ಲಿ 41 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದರು. ಮೈಕಲ್ ಫರ್ನಾಂಡೀಸ್ ಅವರು ಕಳೆದ 16 ವರ್ಷಗಳಿಂದ ನಿರಂತರವಾಗಿ ಪೌರಸೇವಾ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗುತ್ತ, ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತ ಬಂದವರಾಗಿದ್ದಾರೆ. ಇವರ ಆಯ್ಕೆಗೆ ಪೌರಾಯುಕ್ತ ವಿವೇಕ ಬನ್ನೆ ಹಾಗೂ ಎಲ್ಲ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Exit mobile version