ದಾಂಡೇಲಿಯಲ್ಲಿ ಡಿ.ಎಪ್.ಎ. ಮೈದಾನದಲ್ಲಿ ಫೆ. 20 ರಿಂದ 23 ರ ವರೆಗೆ ನಡೆಯುತ್ತಿರುವ ದಾಂಡೇಲಿ ಪ್ರೀಮಿಯರ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ವೆಸ್ಟ್ ಕೋಸ್ಟ್ ಪೇಪರ್ ಮಿಲ್ 75 ಸಾವಿರ ರೂಪಾಯಿಗಳ ಧನ ಸಹಾುವನ್ನು ನೀಡಿ ಪ್ರೋತ್ಸಾಹಿಸಿದೆ.
ನೆರವಿನ ಚೆಕ್ ಹಸ್ತಾಂತರಿಸಿ ಮಾತನಾಡಿದ ಕಾಗದ ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿಯವರು ಕಾಗದ ಕಂಪನಿಯು ಉತ್ಪನ್ನಗಳ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ಹಲವು ಸೇವಾ ಕಾರ್ಯಗಳನ್ನೂ ಮಾಡುತ್ತಿದೆ. ಅದರ ಭಾಗವಾಗಿ ಈ ಕ್ರೀಡಾಕೂಟಕ್ಕೆ ನೆರವನ್ನು ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ದಾಂಡೇಲಿ ಪ್ರೀಮಿಯರ್ ಲೀಗ್ ನ ಪ್ರಮುಖರಾದ ವಿಷ್ಣುಮೂರ್ತಿ ರಾವ್, ಕುಲದೀಪ್ ರಜಪೂತ್, ಇಮಾಮ್ ಸರವರ, ನಿತಿನ್ ಕಾಮತ್ ಮುಂತಾದವರು ಉಪಸ್ಥಿತರಿದ್ದು ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಸಹಾಯ ಹಾಗೂ ಸಾಮಾಜಿಕ ಕಳಕಳಿಯ ಬಗ್ಗೆೆಚ್ಚುಗೆ ವ್ಯಕ್ತಪಡಿಸಿದರು.