ದಾಂಡೇಲಿ: ಮುನಿಸಿಪಲ್ ಕಾರ್ಮಿಕರ ಸೇವೆಗಳ
ಖಾಯಂಗೊಳಿಸುವಂತೆ ಹಾಗೂ ಖಾಯಂ ಗೊಳಿಸುವ ವರೆಗೆ ನೇರ ಪಾವತಿಯಡಿಯಲ್ಲಿ ಸಮಾನ ವೇತನ ನೀಡುವಂತೆ ಮುಂಬರುವ ಬಜೆಟ್ ನಲ್ಲಿ ಕ್ರಮ ವಹಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದವರು ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರರು ಹಾಗೂ ಪೌರಾಯುಕ್ತರಿಗೆ ಸಲ್ಲಿಸಿದರು.
ಹೊರಗುತ್ತಿಗೆ, ಕ್ಷೇಮಾಭಿವೃದ್ಧಿ ಮನೆ-ಮನೆ ಕಸ ಸಂಗ್ರಹಿಸುವ ಪೌರಕಾರ್ಮಿಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಲೋಡರ್, ಕಸದ ವಾಹನ ಚಾಲಕರು, ಸಹಾಯಕರು, ಹಾಗೂ ಪಾರ್ಕ, ಸ್ಮಶಾನ, ಘನ ತ್ಯಾಜ್ಯ ಘಟಕ, ಶೌಚಾಲಯ ಕಾರ್ಮಿಕರು, ಯು.ಜಿ.ಡಿ ನೀರು ಸಂಸ್ಕರಣಾ ಘಟಕ, ಕಾರ್ಮಿಕರು ಎಂಬ ಅಸಂಬದ್ಧ ವಿಗಂಡನೆಯನ್ನು ಕೈಬಿಟ್ಟು ಎಲ್ಲಾ ಸ್ವಚ್ಛತಾ ಕಾರ್ಮಿಕರು, ನೀರು ಸರಬರಾಜು, ಕಂಪ್ಯೂಟರ್ ಅಪರೇಟರಳು , ಇತರೆ ಗುತ್ತಿಗೆ ಮುನಿಸಪಲ್ ಕಾರ್ಮಿಕರನ್ನು ಏಕ ಕಾಲಕ್ಕೆ ಖಾಯಂ ಮಾಡಬೇಕು. ಖಾಯಂ ಮಾಡುವ ತನಕ ಸಮಾನ ಕೆಲಸಕ್ಕೆ ಸಮಾನ ವೇತನ ನೇರ ಪಾವತಿ ಅಡಿಯಲ್ಲಿ ನೀಡಬೇಕು.
ಎಲ್ಲಾ ಗುತ್ತಿಗೆ ಮುನಿಸಿಪಲ್ ಕಾರ್ಮಿಕರನ್ನು ಖಾಯಂಗೊಳಸುವ ತನಕ ನೇರ ಪಾವತಿಯಡಿಯಲ್ಲಿ
ತರಬೇಕು. ಇದು ಸರ್ಕಾರದ ಖಜಾನೆಗೆ 25 ಶೇಖಡಾ ಒಟ್ಟಾರೆ ವೆಚ್ಚವನ್ನು ಉಳಿಸುತ್ತದೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಹಿಳಾ ಪೌರಕಾರ್ಮಿಕರಿಗೆ ಶೌಚಾಲಯ, ಕುಡಿಯುವ ನೀರು, ಹೆರಿಗೆ ಭತ್ಯೆ, ಹೆರಿಗೆ ರಜೆ, ಬಾಲವಾಡಿ, ವಿಶ್ರಾಂತಿ ಗೃಹದಂತಹ ಅತ್ಯವಶ್ಯಕ ಮೂಲಭೂತ ಸೌಲಭ್ಯಗಳನ್ನು ಕಡ್ಡಾಯವಾಗಿ ರಾಜ್ಯದ ಎಲ್ಲಾ ಕಡೆ ನೀಡಲೇಬೇಕು ಎಂಬ ಸರ್ಕಾರಿ ಅದೇಶವನ್ನು ಕೂಡಲೇ ಹೊರಡಿಸಬೇಕು.
ಹಿಂದಿನ ಸರ್ಕಾರ ಅರಂಭಿಸಿರುವ ಪೌರ ಕಾರ್ಮಿಕರ ನೇಮಕಾತಿ ಪಕ್ರಿಯೆ ತ್ವರಿತವಾಗಿ ಮುಗಿಸಿ
ಸಂಬಂಧಿಸಿದ ಕಾರ್ಮಿಕರ ಸೇವೆಗಳನ್ನು ತಕ್ಷಣವೆ ಖಾಯಂಗೊಳಸಬೇಕು. ಪೌರಕಾರ್ಮಿಕರಿಗಾಗಿ ಜಾರಿ ಮಾಡಿರುವ ಗೃಹ ಭಾಗ್ಯ ಯೋಜನೆಯನ್ನು ಕೇವಲ ಖಾಯಂ ಪೌರಕಾರ್ಮಿಕರಿಗೆ ಸೀಮಿತ ಮಾಡಿ ಶೇ.85 ರಷ್ಟು ಸ್ವಚ್ಛತಾ ಕಾರ್ಮಿಕರಿಗೆ ತಾರತಮ್ಯ ಮಾಡಲಾಗಿದೆ. ಎಲ್ಲರಿಗೂ ಅನ್ವಯವಾಗಿವಂತೆ ಸರ್ಕಾರಿ ಅದೇಶವನ್ನು ಕೂಡಲೇ ಹೊರಡಿಸಬೇಕು.
ನೇರಪಾವತಿ, ಹೊರಗುತ್ತಿಗೆ, ಕ್ಷೇಮಾಭಿವೃದ್ಧಿ, ಮನೆ-ಮನೆ ಕಸ ಸಂಗ್ರಹಿಸುವ ಪೌರಕಾರ್ಮಿಕರು,
ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಲೋಡರ್, ಕಸದ ವಾಹನ ಚಾಲಕರು, ಸಹಾಯಕರ ಮಕ್ಕಳು ಖಾಸಗಿ ಶಾಲೆ ಕಾಲೇಜುಗಳಲ್ಲಿಯೂ ವ್ಯಾಸಂಗ ಮಾಡಲು ಅನುಕೂಲವಾಗುವಂತೆಅದಕ್ಕೆ ಅಗತ್ಯವಿರುವ ಹಣ ಕಾಸಿನ ನೆರವು ನೀಡಲು ಸೂಕ್ತ ಅದೇಶ ಹೊರಡಿಸಬೇಕು, ನಿವೃತ್ತರಿಗೆ ಪಿಂಚಣಿ ಸೌಲಭ್ಯ
ನೀಡಬೇಕು ಎಂಬನೇಕ ಒತ್ತಾಯದ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುನ್ಸಿಪಲ್ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷ ಡಿ. ಸ್ಯಾಮಸನ್, ಪ್ರಮುಖರಾದ ವೆಂಕಟೇಶ್ ಲಮಾಣಿ, ಕಾಂತರಾಜ್’ ಇರ್ಷಾದ್ ರಾಣಿಬೆನ್ನೂರ್, ಜಾನ್ಸನ್ ಡಿಸೋಜಾ, ರಮೇಶ್ ಹಾದಿಮನಿ, ಬಾಬುರಾವ್, ಭರತ ಶ್ರೀನಿವಾಸ್ ಮುಂತಾದವರಿದ್ದರು.