Site icon ಒಡನಾಡಿ

ಬಟ್ಟೆ ಚೀಲಗಳ ವಿತರಣೆಗೆ ಚಾಲನೆ ನೀಡಿದ ಕಾಗದ ಕಾರ್ಖಾನೆ

ದಾಂಡೇಲಿ:  ನಗರದ ವೆಸ್ಟ್ ಕೋಸ್ಟ್ ಪೇಪರ್ ಮಿಲನವರು ಪ್ರತಿ ವರ್ಷದಂತೆ ಈ ವರ್ಷವೂ ಸಹ ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆಯಡಿ ಹಾಗೂ ಪ್ಲಾಸ್ಟಿಕ್ ಬಳಕೆ ಬೇಡ ಎಂಬ ಘೋಷಣೆಯೊಂದಿಗೆ ಬಟ್ಟೆ ಚೀಲಗಳ ವಿತರಣೆಗೆ ಗಾಂಧೀ ಜಯಂತಿಯಂದು ಚಾಲನೆ ನೀಡಿದರು.

ದಾಂಡೇಲಿ ತಹಶೀಲ್ದಾರ್ ಶೈಲೇಶ ಪರಮಾನಂದ,  ದಾಂಡೇಲಿ ನಗರಸಭೆಯ ಅಧ್ಯಕ್ಷ  ಅಷ್ಪಾಕ ಶೇಖ್, ಉಪಾಧ್ಯಕ್ಷ ಶಿಲ್ಪಾ ಕೋಡೆ,  ಸ್ಥಾಯಿ ಸಮಿತಿಯ ಅಧ್ಯಕ್ಷೆ ಸುಧಾ ಜಾದವ್,  ಪೌರಾಯುಕ್ತ ರಾಜಾರಾಮ್ ಪವಾರ್,  ಡಿವೈಎಸ್ಪಿ ಶಿವಾನಂದ ಮಧುರಕಂಡಿ,  ಸಿಪಿಐ ಭೀಮಣ್ಣ ಸೂರಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ,  ಕಾಗದ ಕಂಪನಿಯ ಹಿರಿಯ ಅಧಿಕಾರಿಗಳಾದ ಅಶೋಕ್ ಶರ್ಮಾ, ಅನೊಜ ತಯಾಲ್,  ವಿಜಯ ಮಹಾಂತೇಶ್,  ಮುಂತಾದವರು ಬಟ್ಟೆ ಚೀಲವನ್ನು ಸ್ವೀಕರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ರಾಘವೇಂದ್ರ, ರಾಜೇಶ್ ತಿವಾರಿ ಕಾರ್ಯಕ್ರಮ ಸಂಘಟಿಸಿದ್ದರು. ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ಮಾತನಾಡಿ ಕಳೆದ ಹಲವು ವರ್ಷಗಳಿಂದ ಪ್ಲಾಸ್ಟಿಕ್ ಬಳಕೆ ಬೇಡ ಎಂಬ ಘೋಷಣೆಯೊಂದಿಗೆ ವೆಷ್ಟು ಪೇಪರ್ ಮೇಲ್ ನಗರದಲ್ಲಿ ಬಟ್ಟೆ ಚೀಲಗಳನ್ನ ಉಚಿತವಾಗಿ ವಿತರಣೆ ಮಾಡುತ್ತಿದೆ. ಈ ಬಾರಿ 25 ಸಾವಿರ ಬಟ್ಟೆ ಚೀಲಗಳನ್ನು ಮಾಡಿಸಿ ವಿತರಿಸಲಾಗುತ್ತಿದೆ ಎಂದರು.

ನಗರಸಭಾ ಸದಸ್ಯರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

Exit mobile version