Site icon ಒಡನಾಡಿ

ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೆ ಒತ್ತಾಯಿಸಿ ಪೌರಕಾರ್ಮಿಕರಿಂದ ಮುಖ್ಯಮಂತ್ರಿಗಳಿಗೆ ಮನವಿ

ದಾಂಡೇಲಿ: ಎಲ್ಲಾ ಗುತ್ತಿಗೆ ಮುನಿಸಿಪಲ್ ಕಾರ್ಮಿಕರ ನೇರ ಪಾವತಿ ಅಡಿಯಲ್ಲಿ ಸಮಾನ ವೇತನ ಜಾರಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘದ ವತಿಯಿಂದ ‌ಮುಖ್ಯ ಮಂತ್ರಿಗಳಿಗೆ ಬರೆದ ಮನವಿಯನ್ನು ತಹಸಿಲ್ದಾರ ಕಚೇರಿಯ ಶಿರಸ್ತೇದಾರ ಗೋಪಿ ಚೌಹಾಣ ಮೂಲಕ ಮಂಗಳವಾರ ಸಲ್ಲಿಸಿದರು.

ಕಳೆದ 15- 20 ವರ್ಷಗಳಿಂದ ನಿರಂತರವಾಗಿ ದುಡಿಯುತ್ತಿರುವ ಈ ಎಲ್ಲಾ ಗುತ್ತಿಗೆ, ಹೊರ ಗುತ್ತಿಗೆ, ಮುನಿಸಿಪಲ್ ಕಾರ್ಮಿಕರನ್ನು ಖಾಯಂಗೊಳಿಸಿದೆ. ಆದರೆ ಇತರೆ ಗುತ್ತಿಗೆ‌ ಮುನಿಸಿಪಲ್ ಕಾರ್ಮಿಕರ ಬಗ್ಗೆ ಯಾವುದೆ ಕ್ರಮ ವಹಿಸದೆ ಇರುವುದು ನ್ಯಾಯ ಸಮ್ಮತವಲ್ಲ. ಮುನಸಿಪಾಲ್ಟಿಗಳಲ್ಲಿ ದುಡಿಯುವ ಎಲ್ಲಾ ಗುತ್ತಿಗೆ ಹೊರ ಗುತ್ತಿಗೆ ಆಧಾರಿತ
ಪೌರಕಾರ್ಮಿಕರನ್ನು ವಿವಿಧ ವಿಭಾಗಗಳಲ್ಲಿನ ಸ್ವಚ್ಛತಾ ಕಾರ್ಮಿಕರು ಎಂಬ ಅಸಂಬದ್ಧ ವಿಗಂಡಣೆಯನ್ನು
ಕೈಬಿಟ್ಟು ಎಲ್ಲಾ ಸ್ವಚ್ಛತಾ ಕಾರ್ಮಿಕರನ್ನು ಈ ತಕ್ಷಣದಿಂದ ನೇರ ಪಾವತಿಯಡಿಯಲ್ಲಿ ತಂದು ಸಮಾನ ವೇತನ ನೀಡಬೇಕು.

ಎಲ್ಲಾ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನದ ವಿವಿಧ ವಿಭಾಗಗಳಲ್ಲಿನ ಕಾರ್ಮಿಕರ ಸೇವೆಗಳನ್ನು ಖಾಯಂ ಮಾಡಬೇಕು.ಕಾನೂನು ಬದ್ಧ ವೇತನ, ಅನಾರೋಗ್ಯ ರಜೆ, ಹೆಚ್ಚುವರಿ ಕೆಲಸಕ್ಕೆ‌ ವಾರದಲ್ಲಿ ಸಂಬಳ ಸಹಿತ ರಜೆ, ರಾಷ್ಟ್ರೀಯ ಹಬ್ಬಗಳ, ಹಬ್ಬಗಳ ರಜೆ, ಗಳಿಕೆ ರಜೆ, ಸೇರಿದಂತೆ ಕನಿಷ್ಟ ಕೂಲಿ 31000 ತುಟ್ಟಿಭತ್ಯೆ, ಪಿ.ಎಫ್. ಹಾಗು ಇ.ಎಸ್. ಐ ಸೌಲಭ್ಯ, ಗೃಹಭಾಗ್ಯ ಯೋಜನೆಯಡಿಯಲ್ಲಿ ಉಚಿತ ನಿವೇಶನವನ್ನು ನೀಡಬೇಕೆಂದು ಈ ಹಕ್ಕೊತ್ತಾಯಗಳ ಅಧಾರದ ಮೇಲೆ ಸೆಪ್ಟಂಬರ 30ರಂದು ಮುನಿಸಿಪಲ್ ಕಾರ್ಮಿಕರು ವಿಧಾನ ಸೌಧ ಚಲೋ ನಡೆಸಲಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ಮುನಿಸಿಪಲ್ ಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷ ಡಿ.ಸ್ಯಾಮಸನ್, ಮುಖಂಡರಾದ ಕಾಂತರಾಜು, ರೋಸಯ್ಯ, ಬಾಬಾರಾವ್, ರಾಮಾಂಜನೇಯ ತಿರುಪತಿ, ಚನ್ನದೌವಯ್ಯಾ, ಪೆದ್ದ ದೇವಯ್ಯ, ವಿನಾಯಕ, ಭರತ, ರಾಘವೇಂದ್ರ , ಸ್ವಚ್ಛತಾ ,ನೀರು ಸರಬರಾಜು, ವಾಹನ ಚಾಲಕರು ಇದ್ದರು.

Exit mobile version