ದಾಂಡೇಲಿ : ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪೊಲೀಸರಿಗೆ ಹೇಳಿದ್ದ ದಾಂಡೇಲಿಯ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಚಾರ್ಯ ವಿಶ್ವನಾಥ್ ಹುಲಸದಾರ ಅವರ ಮೇಲೆ ಪೊಲೀಸರು ದೂರು ದಾಖಲಿಸಿದೆ ಬಿಟ್ಟಿರುವ ಮಾಹಿತಿ ಲಭ್ಯವಾಗಿದೆ.
ವರ್ಗಾವಣೆಗೊಂಡಿದ್ದ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಚಾರ್ಯ ಮತ್ತೆ ಅದೇ ಶಾಲೆಗೆ ಬಂದು ವಿದ್ಯಾರ್ಥಿಗಳಿಗೆ ಅವಾಚ್ಯವಾಗಿ ಬೈದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಠಾತ್ ಪ್ರತಿಭಟನೆ ನಡೆಸಿದರು. ಪ್ರಾಚಾರ್ಯರ ಕಾರಿಗೆ ಘೇರಾವ್ ಹಾಕಿದ್ದರು. ಕಾರಿನಿಂದ ಹೊರಗೆ ಬಾರದ ಪ್ರಾಚಾರ್ಯ ಫೋನ್ ಮೂಲಕ ಪೊಲೀಸರಿಗೆ ‘ನನ್ನನ್ನ ಇಲ್ಲಿಂದ ಹೊರಗಡೆ ಕಳಿಸಿ. ಇಲ್ಲಾಂದ್ರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಹೇಳಿದ್ದರು. ಇದನ್ನ ಸ್ವತಃ ದಾಂಡೇಲಿ ನಗರ ಠಾಣೆಯ ಪಿ.ಎಸ್.ಐ. ಐ.ಆರ್. ಗಡ್ಡೇಕರವರೇ ಸಾರ್ವಜನಿಕರ ಎದುರು ಹೇಳಿ, ‘ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅನ್ನುತ್ತಿದ್ದಾರೆ. ಎನಾದರೂ ಆದರೆ ಹೇಗೆ. ದಯವಿಟ್ಟು ಅವರನ್ನು ಬಿಟ್ಟುಬಿಡಿ’ ಅಂದಿದ್ದರು.
ನಂತರ ಸಿಪಿಐ ಭೀಮಣ್ಣ ಸೂರಿ ಪ್ರವೇಶ. ಪತ್ರಕರ್ತರ ಮೇಲೆ ದರ್ಪ. ಇವುಗಳ ನಂತರ ಪ್ರಕರಣ ಮುಗಿದಿತ್ತಾದರೂ, ಪತ್ರಕರ್ತರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಬಂದ ಪೊಲೀಸರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದ ಪ್ರಾಚಾರ್ಯರ ಮೇಲೆ ಕಾನೂನು ಪ್ರಕಾರ ಪ್ರಕರಣ ದಾಖಲಿಸಬೇಕಿತ್ತು. ಆದರೆ ಪ್ರಕರಣ ದಾಖಲಿಸಿದೇ ಬಿಟ್ಟಿರುವ ಬಗ್ಗೆ ಮಾಹಿತಿ ಬಂದಿದೆ.
ಈ ಬಗ್ಗೆ ನಗರ ಠಾಣೆ ಪಿಎಸ್ಐ. ಐ.ಆರ್. ಗಡ್ಡೇಕರ್ ಅವರನ್ನು ದೂರವಾಣಿ ಮೂಲಕ ವಿಚಾರಿಸಿದಾಗ ‘ಈ ಕುರಿತಂತೆ ಯಾವುದೇ ಪ್ರಕರಣ ದಾಖಲಿಸಿಲ್ಲ’ ಎಂದು ತಿಳಿಸಿದ್ದಾರೆ.
‘