ದಾಂಡೇಲಿ ತಾಲೂಕಾಡಳಿತ ತಹಶೀಲ್ದಾರ ಕಾರ್ಯಾಲಯದಲ್ಲಿ ಬ್ರಹ್ಮರ್ಷಿ ನಾರಾಯಣ ಗುರುಗಳ 170ನೇ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು.
ಶಿಕ್ಷಕ ಪ್ರವೀಣ್ ನಾಯ್ಕ ನಾರಾಯಣ ಗುರುಗಳ ಬಗ್ಗೆ ಉಪನ್ಯಾಸ ನೀಡಿ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ವಿ. ಆರ್. ನಾಯ್ಕರನ್ನು ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು.
ಪ್ರಭಾರ ಉಪ ತಹಶೀಲ್ದಾರ ಗೋಪಿ ಚೌಹಾಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದರು. ಕಾರ್ಯಕ್ರಮದಲ್ಲಿ ನಾಮಧಾರಿ ಸಮಾಜದ ಅಧ್ಯಕ್ಷರಾದ ಆರ್. ಎಸ್. ನಾಯ್ಕ್, ದೇವಿದಾಸ ನಾಯ್ಕ, ಸುಧೀರ್ ನಾಯ್ಕ, ಸುಭಾಷ್ ನಾಯ್ಕ, ಮಂಜುನಾಥ್ ನಾಯ್ಕ, ರವಿ ನಾಯ್ಕ್, ಪರಶುರಾಮ್ ನಾಯ್ಕ, ಆರ್ .ಎಂ. ನಾಯ್ಕ ಉಪಸ್ಥಿತರಿದ್ದರು.
ಶಿಕ್ಷಕಿ ನಂದಿನಿ ನಾಯ್ಕ ಪ್ರಾರ್ಥಿಸಿದರು. ಪ್ರವೀಣ್ ನಾಯ್ಕ ಸ್ವಾಗತಿಸಿದರು. ಗ್ರಾಮ ಆಡಳಿತಾಧಿಕಾರಿ
ರವಿ ಕಮ್ಮಾರ್ ನಾರಾಯಣ ಗುರುಗಳ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು. ಸರಸ್ವತಿ ನಾಯ್ಕ ವಂದಿಸಿದರು.
ತಹಶಿಲ್ದಾರ ಕಚೇರಿ ಸಿಬ್ಬಂದಿಗಳಾದ ದೀಪಾಲಿ, ಗೌಡಪ್ಪ ಬನಾಕದಿನ್ನಿ, ದಯಾನಂದ ಚಿಟ್ಟೆ ಮುಕುಂದ ಸಹಕರಿಸಿದರು.