ದಾಂಡೇಲಿಯ ಕಲಾಶ್ರೀ ಸಂಸ್ಥೆಯ ಆಶ್ರಯದಲ್ಲಿ ಖ್ಯಾತ ಯಕ್ಷಗಾನ ಭಾಗವತ ರಾಘವೇಂದ್ರ ಮಯ್ಯ ಹಾಗೂ ಹಿರಿಯ ಕಲಾವಿದ ಕೋಡಿ ವಿಶ್ವನಾಥ ಗಾಣಿಗ ಇವರ ಸಾರಥ್ಯದ ಕುಂದಾಪುರದ ಹಾಲಾಡಿಯ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ಯ ಕಲಾವಿದರಿಂದ ದಾಂಡೇಲಿಯ ವಿದ್ಯಾಧಿರಾಜ ಸಭಾಭವನದಲ್ಲಿ ಪ್ದರ್ಶಿಸಲ್ಪಟ್ಟ ‘ಶಿವಶಕ್ತಿ ಗುಳಿಗ’ ಎಂಬ ಯಕ್ಷಗಾನ ಜನಮನ ರಂಜಿಸುವಲ್ಲಿ ಯಶಸ್ವಿಯಾಯಿತು.
ಹಿಮ್ಮೇಳದಲ್ಲಿ ಪ್ರಸಿದ್ಧ ಭಾಗವತರಾದ ರಾಘವೇಂದ್ರ ಮಯ್ಯರ ಮಧುರ ಹಾಡುಗಾರಿಕೆ ಮೆಚ್ಚುಗೆಗೊಳಗಾಯಿತು. ಮುಮ್ಮೇಳದಲ್ಲಿ ಕೋಡಿ ವಿಶ್ವನಾಥ ಗಾಣಿಗ, ಸನ್ಮಯ ಭಟ್ , ಚಂದ್ರಹಾಸ ಗೌಡ, ಹೊಸಪಟ್ಟಣ, ರಾಜೇಶ ಬೈಕಾಡಿ, ಪ್ರಸನ್ನಕುಮಾರ, ರಜಿತ್ ಕುಮಾರ ವಂಡ್ಸೆ, ಉಳ್ಳೂರು ನಾರಾಯಣ ನಾಯ್ಕ, ಕುಮಾರವಿಘ್ನೇಶ, ಸ್ತ್ರೀ ಪಾತ್ರಧಾರಿಗಳಾಗಿ ಮಾಧವ ನಾಗೂರು, ರವೀಂದ್ರ ಶೆಟ್ಟಿ ಹಕ್ಲಾಡಿ, ಕುಮಾರ ಅರಳುಸುರುಳಿ ಹಾಗೂ ಹಾಸ್ಯ ಪಾತ್ರದಲ್ಲಿ ಕಾರ್ತಿಕ ರಾವ್ ಪಾಂಡೇಶ್ವರ, ಉಳ್ಳೂರು ಶಂಕರ ನಾಯ್ಕ ಮನೋಜ್ಞ ಅಭಿನಯ ನೀಡಿದರು.
ಶಿವ ಶಕ್ತಿ ಗುಳಿಗ ಇದು ಭಕ್ತಿ ಪ್ರಧಾನವಾದ ಯಕ್ಷಗಾನ ಪ್ರಸಂಗವಾಗಿದ್ದು, ದೈವ ಶಕ್ತಿಯ ಹಿರಿಮೆಯನ್ನು ಈ ಕಥಾನಕದಲ್ಲಿ ಕಟ್ಟಿಕೊಡಲಾಗಿದೆ. ಭುತ, ಪ್ರೇತ,ಮಾಟ, ಮಂತ್ರಗಳಿಂದ ಏನನ್ನೂ ಮಾಡಲು ಸಾಧ್ಯವಿಲ್ಲ. ದೈವ ಬಲವಿದ್ದರೆ ಎಲ್ಲವೂ ಸರಳವಾಗಿರುತ್ತದೆ ಎಂಬುದನ್ನು ಈ ಕಥಾನಕದಲ್ಲಿ ಹೇಳಲಾಗಿದೆ.
ಕಲಾಶ್ರೀ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಶೆಟ್ಟಿ, ಪ್ರಮುಖರಾದ ಸುರೇಶ ಕಾಮತ್, ವಿಶ್ವನಾಥ ಶೆಟ್ಟಿ , ಬಿ.ಎನ್. ವಾಸರೆ, ಸುಧಾಕರ ಶೆಟ್ಟಿ, ಕರುಣಾಕರ ಶೆಟ್ಟಿ, ಉದಯ ಶೆಟ್ಟಿ, ನವೀನ ಕಾಮತ, ಶೇಖರ ಪೂಜಾರಿ, ಚಂದ್ರು ಶೆಟ್ಟಿ, ಸೋಹನ ಶೆಟ್ಟಿ ಮುಂತಾದವರು ಯಕ್ಷಗಾನ ಸಂಘಟನೆಯಲ್ಲಿ ಜೊತೆಯಾಗಿದ್ದರು.
ವಿಡಿಯೋ ತುಣುಕು ವೀಕ್ಷಿಸಿ….