ಭಾರತದ ಸ್ಟಾರ್ ಕುಸ್ತಿ ಪಟು ವಿನೇಶ್ ಪೋಗಟ್ ಅವರು ಸದ್ಯ ಚರ್ಚೆಯಲ್ಲಿದ್ದಾರೆ. ಇವರು ಪ್ಯಾರಿಸ್ ಒಲಿಂಪಿಕ್ಸ್ ಫೈನಲ್ ಪ್ರವೇಶಿಸಿ ಸುದ್ದಿಯಲ್ಲಿದ್ದರೆ, ನಂತರ ಅನರ್ಹತೆಯಿಂದ ಸುದ್ದಿಗೆ ಆಹಾರ ವಾಗಿದ್ದಾರೆ. ಈ ನಡುವೆ ವಿನೇಶ್ ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಕ್ರೀಡಾ ಕೋರ್ಟ್ ಮೊರೆ ಹೋಗಿದ್ದಾರೆ.
ಈಗ ವಿನೇಶ್ ಅವರ ಬದುಕಿಬ ಬಗ್ಗೆ ಜನ ಹೆಚ್ಚಾಗಿ ಹುಡುಕುತ್ತಿದ್ದಾರೆ. ವಿನೇಶ್ ಅವರ ಜೀವನದ ಬಗ್ಗೆ ತಿಳಿದು ಕೊಳ್ಳುವ ಆಸೆ ಜನರಲ್ಲಿ ಮೂಡಿದೆ. ಅಂದಹಾಗೆ ವಿನೇಶ್ ಮದುವೆ ಆಗಿದ್ದಾರೋ ಇಲ್ಲವೋ ಎಂಬ ಬಗ್ಗೆ ಹುಡಕಾಟ ಹೆಚ್ಚಾಗಿ ನಡೆದಿದೆ. ಆ ಬಗ್ಗೆ ವರದಿ ಇಲ್ಲಿದೆ.
ವಿನೇಶ್ ಲವ್ ಸ್ಟೋರಿ : ಫೈನಲ್‌ನಲ್ಲಿ ಅನರ್ಹಗೊಳುತ್ತಿದ್ದಂತೆ ವಿನೇಶ್ ಪೋಗಟ್ ಅವರ ಬೆಂಬಲಕ್ಕೆ ಇಡೀ ಭಾರತ ದೇಶ ನಿಂತಿತು. ವಿನೇಶ್ ಹಲವು ಬಾರಿ ಮೈಕ್ ಮುಂದೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಇವರ ಅಮ್ಮನ ಬಗ್ಗೆ ಆಗಾಗ ಹೇಳಿಕೊಂಡಿದ್ದಾರೆ. ಇವರು ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಕೆಲವೊಮ್ಮೆ ಮಾತನಾಡಿದ್ದಾರೆ. ಇನ್ನು ಇವರ ಲವ್ ಸ್ಟೋರಿಯನ್ನು ನೀವು ಏನಾದ್ರೂ ಕೇಳಿದ್ರೆ ರೋಮಾಂಚಕ..
ಪತಿ ಯಾರು? : ವಿನೇಶ್ ಪೋಗಟ್ ಅವರ ಗಂಡ ಸಹ ರಾಷ್ಟ್ರೀಯ ಕುಸ್ತಿ ಪಟು. ಇವರ ಹೆಸರು ಸೋಮವೀರ್ ರಾಠಿ. ಈ ಜೋಡಿ ಕೆಲವು ವರ್ಷಗಳ ಹಿಂದೆ ಸಪ್ತಪದಿ ತುಳಿಯಿತು. ಆದರೆ ಇವರಿಬ್ಬರ ಲವ್ ಸ್ಟೋರಿ ಮಾತ್ರ ಎಲ್ಲರೂ ಒಮ್ಮೆ ಕೇಳುವಂತೆ ಮಾಡುತ್ತಿದೆ. ಅಂದಹಾಗೆ ಭಾರತೀಯ ರೈಲ್ವೇಯಲ್ಲಿ ಕೆಲಸ ಮಾಡುತ್ತಿದ್ದಾಗ ವಿನೇಶ್ ಮತ್ತು ಸೋಮವೀರ್ ಮೊದಲು ಭೇಟಿಯಾದರು. ಇಬ್ಬರಿಗೂ ಕುಸ್ತಿಯೆಂದರೆ ಒಲವು. ಕುಸ್ತಿಯ ಮೇಲಿನ ಅವರ ಪ್ರೀತಿ ಕ್ರಮೇಣ ಪ್ರಣಯಕ್ಕೆ ತಿರುಗಿತು.
ಪ್ರಪೋಸ್ ಮಾಡಿದ್ದು ಎಲ್ಲಿ? : ವಿನೇಶ್ ಹಾಗೂ ಸೋಮವೀರ್ ಲವ್ ಸ್ಟೋರಿ 2018ರಲ್ಲಿ ಮುನ್ನೆಲೆಗೆ ಬಂದಿತು. ಸೋಮವೀರ್ ಹಾಗೂ ವಿನೇಶ್ ತಮ್ಮ ಪ್ರೇಮ ನಿವೇದನೆಯನ್ನು ಮಾಡಲು ಬಳಸಿಕೊಂಡಿದ್ದು ಸ್ಥಳವೂ ಸೂಪರ್. ಇಬ್ಬರೂ ಅಥ್ಲೀಟ್‌ಗಳು ಹೆಚ್ಚಾಗಿ ಪ್ರವಾಸದಲ್ಲೇ ಇರುತ್ತಿದ್ದರು. ವಿನೇಶ್ ಅವರ 24ನೇ ಹುಟ್ಟ ಹಬ್ಬದಂದು ಸೋಮವೀರ್ ತಮ್ಮ ಪ್ರೇಮ ನಿವೇದನೆಯನ್ನು ಏರ್‌ಪೋರ್ಟ್‌ನಲ್ಲಿ ಉಂಗುರ ತೊಡಿಸಿ ಮಾಡಿದರು. 2018ರಲ್ಲಿ ಇಬ್ಬರೂ ಸಪ್ತಪದಿ ತುಳಿದರು.
ಅಷ್ಟ ಪದಿ : ವಿನೇಶ್ ಏನೇ ಮಾಡಿದರೂ ವಿಶೇಷವಾಗಿ ಇರುತ್ತದೆ. ಇವರು ತಮ್ಮ ಮದುವೆ ದಿನ ಏಳು ಹೆಜ್ಜೆಯ ಬದಲು ಎಂಟು ಹೆಜ್ಜೆಯನ್ನು ಇಟ್ಟರು. ಇದರ ಮೂಲಕವೂ ಅವರು ಸಮಾಜಕ್ಕೆ ಸಂದೇಶವನ್ನು ನೀಡುವ ಕಾರ್ಯವನ್ನು ಮಾಡಿದರು. ಬೇಟಿ ಬಚಾವೋ, ಬೇಟಿ ಪಢಾವೋ ಮತ್ತು ಬೇಟಿ ಖೇಲಾವೋ ಹೆಸರಿನಲ್ಲಿ ಎಂಟನೇ ಹೆಜ್ಜೆ ಇಟ್ಟಿದ್ದರು.
