ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತವು ತನ್ನ ನಾಲ್ಕನೇ ಪದಕವನ್ನು ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದೆ. ಭಾರತದ ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್ ಅವರು ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ನ ಕಂಚಿನ ಪದಕದ ಪಂದ್ಯದಲ್ಲಿ ಸೋಲು ಕಂಡಿದ್ದಾರೆ.
ಕಠಿಣ ಪಂದ್ಯದಲ್ಲಿ ಕೆಚ್ಚೆದೆಯ ಆಟ ಪ್ರದರ್ಶಸಿದ ಲಕ್ಷ್ಯ ಸೇನ್ ಅವರು ಮಲೇಷ್ಯಾದ ಲೀ ಜಿ ಜಿಯಾ ವಿರುದ್ಧ 21-13, 16-21, 11-21 ಸೆಟ್‌ಗಳಿಂದ ಸೋತರು. ಇದರೊಂದಿಗೆ ಕಂಚಿನ ಪದಕ ಗೆದ್ದು ಚರಿತ್ರೆ ಸೃಷ್ಟಿಸುವ ಅವಕಾಶದಿಂದ ಲಕ್ಷ್ಯ ಸೇನ್ ವಂಚಿತರಾಗಿದ್ದಾರೆ.
ಒಲಿಂಪಿಕ್ಸ್ ಇತಿಹಾಸದಲ್ಲಿ ಇಲ್ಲಿವರೆಗೂ ಭಾರತದ ಯಾವುದೇ ಪರುಷ ಷಟ್ಲರ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪದಕ ಗೆದ್ದಿಲ್ಲ. ಒಂದು ವೇಳೆ ಇಂದು ಸೇನ್ ಪದಕ ಗೆದ್ದಿದ್ದರೆ, ಬ್ಯಾಡ್ಮಿಂಟನ್‌ನಲ್ಲಿ ಒಲಿಂಪಿಕ್ ಪದಕ ಗೆದ್ದ ಭಾರತದ ಮೊದಲ ಪುರುಷ ಬ್ಯಾಡ್ಮಿಂಟನ್ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗುತ್ತಿದ್ದಾರೆ. 22 ವರ್ಷದ ಲಕ್ಷ್ಯ ಸೇನ್‌ಗೆ ಇದು ಚೊಚ್ಚಲ ಒಲಿಂಪಿಕ್ಸ್ ಆಗಿದ್ದು, ಇದರಲ್ಲಿ ಸೆಮಿಫೈನಲ್ ತಲುಪುವ ಮೂಲಕ ಅದ್ಭುತ ದಾಖಲೆಗಳನ್ನು ಮಾಡಿದ್ದಾರೆ.