ಬೆಥನಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ ದಾಂಡೇಲಿಯ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಅರ್ಥಪೂರ್ಣವಾಗಿ ನಡೆಯಿತು.
ಸೇಂಟ್ ಮೈಕಲ್ ಕಾನ್ವೆಂಟ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಸಿಸ್ಟರ್ ಸೆಲ್ವಿ, ಶಾಲಾ ಅಭಿವೃದ್ಧಿ ಮೇಲ್ವಿಚಾರಕ ಸಮಿತಿಯ ಸದಸ್ಯರು, ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಸಂಸ್ಥಾಪಕರ ದಿನಾಚರಣೆಗೆ ಚಾಲನೆ ನೀಡಿದರು.
ಶಾಲಾ ಅಭಿವೃದ್ಧಿ ಮೇಲ್ವಿಚಾರಕ ಸಮಿತಿಯ ಸದಸ್ಯರಾದ ಗುರು ಮಠಪತಿಯವರು ಮಾತನಾಡಿ ದಾಂಡೇಲಿ ನಗರದ ಪ್ರತಿಷ್ಠಿತ ಶಾಲಾ ಸಂಸ್ಥೆಯಲ್ಲಿ ಒಂದಾದ ಸೇಂಟ್ ಮೈಕಲ್ ಕಾನ್ವೆಂಟ್ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ನಮ್ಮ ನಾಡಿಗೆ ಬೆಥನಿ ಶಿಕ್ಷಣ ಸಂಸ್ಥೆಯ ಕೊಡುಗೆ ಅಪಾರವಾದುದು. ಈ ಸಂಸ್ಥೆಯ ಸ್ಥಾಪಕರನ್ನು ಸ್ಮರಿಸುವ ಕಾರ್ಯ ಅನಣ್ಯವಾದುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೇಂಟ ಮೈಕಲ್ ಕಾನ್ವೆಂಟ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಸಿಸ್ಟರ್ ಸೆಲ್ವಿ ದಾಂಡೇಲಿಯಲ್ಲಿ ಈ ಶಾಲೆ ನಡೆದು ಬಂದ ಬಗೆಯನ್ನು ತಿಳಿಸಿದರು.
ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಡಾ. ರಮೇಶ ಕದಂ, ಶಾಲಾ ಅಭಿವೃದ್ಧಿ ಮೇಲ್ವಿಚಾರಕ ಸಮಿತಿಯ ಸದಸ್ಯರುಗಳಾದ ಜಾಕ್ ಫರ್ನಾಂಡಿಸ್ , ಡೈನಾ ಬೊರಜಸ್, ರೇಷ್ಮಾ ಬಾವಾಜಿ, ದಿಪ್ತಿ ನಾಯಕ್, ಶೋಭಾ ರಾತೋಡ್, ಫಿಲೋಮಿನಾ ನುಸರತ್ ಖಾನಾಪುರಿ, ನಿರ್ಮಲಾ ದಂಡಗಲ, ಪೀರಜಾದೆ, ನಿಶಾ ಸಾವಂತ್, ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಗೂ ಪಾಲಕರು ಉಪಸ್ಥಿತರಿದ್ದರು.