Site icon ಒಡನಾಡಿ

ಒಳ ಮೀಸಲಾತಿ : ಸುಪ್ರೀಂ ತೀರ್ಪು ಸ್ವಾಗತಾರ್ಹವೆಂದ ಡಿ.ಸ್ಯಾಮಸನ್

‘ಒಳ ಮೀಸಲಾತಿ’ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ ಹಾಗೂ ಇದು ದಲಿತರ ದೀರ್ಘಕಾಲದ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಹಕ್ಕುಗಳ ಸಮಿತಿ ಯ ಮುಖಂಡ ಡಿ.ಸ್ಯಾಮಸನ್ ಅಭಿಪ್ರಾಯಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಡಿ. ಸ್ಯಾಮಸನ್ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಸಂಖ್ಯಾ ಆಧಾರದಲ್ಲಿ ಮೀಸಲಾತಿ ಜಾರಿಯಾಗಬೇಕೆಂದು ದಲಿತ ಸಂಘಟನೆಗಳು ಹೋರಾಟ ನಡೆಸಿದ್ದವು. ಈ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಈ ಹೋರಾಟಕ್ಕೆ ಸಂದ ಜಯವಾಗಿದೆ. ಮತ್ತು ಸಂವಿಧಾನದ ಆಶಯಗಳಿಗೆ ಬದ್ದವಾದುದ್ದಾಗಿದೆ.

 ಪರಿಶಿಷ್ಟ ಜಾತಿಯಲ್ಲಿ 101, ಪರಿಶಿಷ್ಟ ಪಂಗಡದಲ್ಲಿ 57 ಉಪ ಜಾತಿ ಗುಂಪುಗಳಿದ್ದು, ಸೌಲಭ್ಯಗಳು ಸಿಗದ  ಕಟ್ಟ ಕಡೆಯ ಜನಕ್ಕೆ ಅವರವರ ಗುಂಪುಗಳ ಜನಸಂಖ್ಯೆ ಆಧಾರದಲ್ಲಿ ಉದ್ಯೋಗ, ಅಭಿವೃದ್ಧಿ ಸೌಲಭ್ಯಗಳು ಸಿಗಬೇಕೆಂದು ನಾವು ಒತ್ತಾಯಿಸಿದ್ದೆವು. ಈ ಬಗ್ಗೆ ಅಂದಿನ ಸರ್ಕಾರ ನ್ಯಾಯಮೂರ್ತಿ ಡಾ.ಸದಾಶಿವ ಆಯೋಗ ನೇಮಿಸಿ ವರದಿ ಪಡೆಯಲಾಗಿತ್ತು. ವರದಿ ಮಂಡಿಸಿ 3 ದಶಕಗಳು ಕಳೆದು ಹೋದವು. ನೆರೆ ರಾಜ್ಯವಾದ ಆಂಧ್ರ ಪ್ರದೇಶದಲ್ಲಿ ಈ ಹೋರಾಟ ತೀವ್ರಗೊಂಡಿತ್ತು. ಆಗ ಕೇಂದ್ರ ಸರ್ಕಾರ ನ್ಯಾಯಮೂರ್ತಿ ಉಷಾ ಮಹೆತಾರವರ ನೇತ್ರದಲ್ಲಿ ಆಯೋಗ ನೇಮಿಸಿತ್ತು. ಆಯೋಗವು ಕೇಂದ್ರ ಸರ್ಕಾರಕ್ಕೆ ತನ್ನ ಅಭಿಪ್ರಾಯವನ್ನು ಮಂಡಿಸಿ 341(3) ತಿದ್ದುಪಡಿ  ಮಾಡಲು ಸೂಚಿಸಿ ಕೇಂದ್ರ ಸರ್ಕಾರವೇ ಸಂಸತ್ತಿನಲ್ಲಿ ತೀರ್ಮಾನ ಮಾಡಬೇಕೆಂದು ವರದಿ ನೀಡಿತ್ತು. ಇದು ಬಿಜೆಪಿ ಕೇಂದ್ರ ಸರ್ಕಾರದಲ್ಲಿ ಮೂಲೆ ಗುಂಪಾಗಿತ್ತು.

ಇದು ಹೊಲೆ, ಮಾದಿಗರು ಸೇರಿದಂತೆ ಸಣ್ಣ ಸಣ್ಣ ಉಪ ಜಾತಿ ಜನಸಂಖ್ಯೆ ಆಧಾರದಲ್ಲಿ ಎಲ್ಲಾ ಎಸ್ಸಿ, ಎಸ್ಟಿ ಗುಂಪುಗಳಿಗೆ ಅನ್ವಯಿಸಿದ ವಿಷಯವಾಗಿದೆ .
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ತೀರ್ಪನಂತೆ ವರದಿಯನ್ನು ಜಾರಿಗೊಳಿಸಲು ಭರವಸೆ ನೀಡಿರುವುದು ಸ್ವಾಗತರ್ಹವಾಗಿದೆ. ಯಾವ ಒತ್ತಡಕ್ಕೂ ಮಣಿಯದೆ ಜಾರಿಗೆ ಕ್ರಮವಹಿಸಬೇಕೆಂದು ಡಿ. ಸ್ಯಾಮಸನ್ ಒತ್ತಾಯಿಸಿದ್ದಾರೆ.

Exit mobile version