Site icon ಒಡನಾಡಿ

ಜೋಗ ಜಲಪಾತದಲ್ಲಿ ರಾಜಾ, ರಾಣಿ, ರೋರಲ್‌, ರಾಕೆಟ್‌ ಜೊತೆ ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಪ್ಪ-ದೊಡ್ಡಮ್ಮ : ವಿಡಿಯೋ ವೈರಲ್‌

ನಿರಂತರವಾಗಿ ಭೋರ್ಗರೆಯುತ್ತಿರುವ ಮಳೆಯಿಂದಾಗಿ ಜಗದ್ವಿಖ್ಯಾತ ಜೋಗ ಜಲಪಾತ ಮೈದುಂಬಿಕೊಂಡು ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರ ಹೃನ್ಮನಗಳನ್ನು ಸೆಳೆಯುತ್ತಿದೆ. ಇಲ್ಲಿಯ ರಾಜಾ, ರಾಣಿ, ರೋರಲ್, ರಾಕೆಟ್ ಜೊತೆ ಇನ್ನೂ ನಾಲ್ಕು ದಿಕ್ಕಿನಲ್ಲಿ ಜಲಪಾತ ಧುಮ್ಮಿಕ್ಕುತ್ತಿದೆ. ಈ ನೋಟ ಇದೀಗ ಹಲವರ ಮೊಬೈಲ್ ಗಳಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ಇದಕ್ಕೆ ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ – ಚಿಕ್ಕಮ್ಮ ಎಂದು ಕರೆಯುತ್ತಿದ್ದಾರೆ.

ಎಡೆ ಬಿಡದೇ ಸುರಿಯುತ್ತಿರುವ ಮಳೆಯ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನದಿ, ಕೆರೆ-ಕಟ್ಟೆಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಮತ್ತೊಂದೆಡೆ ಹಲವು ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದು, ಇನ್ನು ಕೆಲವು ಡ್ಯಾಂಗಳು ಭರ್ತಿಯಾಗುವ ಹಂತವನ್ನು ತಲುಪಿವೆ. ಹಾಗೆಯೇ ಫಾಲ್ಸ್‌ಗಳು ಕೂಡ ಮೇಲಿನಿಂದ ಧುಮ್ಮಿಕ್ಕುತ್ತಿವೆ. ಜೋಗ ಫಾಲ್ಸ್ ಕೂಡಾ. ಜೋಗ ಜಲಪಾತದ ರಾಜ, ರಾಣಿ, ರೋರಲ್‌, ರಾಕೇಟ್‌ ಜೊತೆ ಚಿಕ್ಕಪ್ಪ, ದೊಡ್ಡಮ್ಮ, ದೊಡ್ಡಪ್ಪ ಎನ್ನುವ ನೀರಿನ ಸೆಲೆಗಳು ಹುಟ್ಟಿಕೊಂಡಿದ್ದು, ಆ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಜೋಗ ಫಾಲ್ಸ ನ ರುದ್ರ ರಮಣೀಯ ವಿಡಿಯೋ ವೀಕ್ಷಿಸಿ

ಆಹಾ ಎದೆಂತಹ ಸೊಬಗು ….

ಶಿವಮೊಗ್ಗ ಜಿಲ್ಲೆಯಿಂದ ಜೋಗ್‌ ಫಾಲ್ಸ್ 106.3 ಕಿಲೋ ಮೀಟರ್‌ ದೂರದಲ್ಲಿದೆ. ಉತ್ತರ ಕನ್ನಡಸ ಸಿದ್ದಾಪುರದಿಂದ 18 ಕಿ.ಮಿ. ದೂರದಲ್ಲಿದೆ. ಕರಾವಳಿಯ ಹೊನ್ನಾವರದಿಂದ ಸುಮಾರು 65 ಕಿ.ಮಿ. ದೂರದಲ್ಲಿದೆ. ಬೆಂಗಳೂರಿನಿಂದ 402.4 ಕಿಲೋ ಮೀಟರ್‌ ದೂರ ಆಗುತ್ತಿದೆ.

ಇನ್ನೂ ಕಳೆದ ವರ್ಷ ಅಂದರೆ 2023ರಲ್ಲಿ ಮುಂಗಾರು ಕೈಕೊಟ್ಟ ಕಾರಣ ಈ ಫಾಲ್ಸ್‌ಗೆ ನೀರಿನ ಹರಿವಿನ ಪ್ರಮಾಣ ತುಂಬಾ ಕಡಿಮೆಯಾಗಿತ್ತು. ಆದರೆ ಇದೀಗ 2024 ಜೂನ್‌ ಆರಂಭವಾಗುತ್ತಿದ್ದಂತೆ ಮುಂಗಾರು ಚುರುಕು ಪಡೆದಿದ್ದು, ಇದೀಗ ಫಾಲ್ಸ್‌ನಲ್ಲಿ ಬರೀ ರಾಜ, ರಾಣಿ, ರೋರಲ್‌, ರಾಕೇಟ್‌ ಜೊತೆಗೆ ಹೊಸದಾಗಿ ಚಿಕ್ಕಪ್ಪ, ದೊಡ್ಡಮ್ಮ, ದೊಡ್ಡಪ್ಪ ಹುಟ್ಟಿಕೊಂಡಿದ್ದಾರೆ ಎನ್ನುವ ವಿಡಿಯೋವೊಂದು ಸದ್ದು ಮಾಡುತ್ತಿದೆ.

ಫಾಲ್ಸ್‌ಗೆ ರಾಜ, ರಾಣಿ, ರೋರಲ್‌, ರಾಕೇಟ್‌ ಜೊತೆಗೆ ಹೊಸದಾಗಿ ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಮ್ಮ-ದೊಡ್ಡಪ್ಪ ಮಕ್ಕಳನ್ನು ಕೂಡ ಕೊರೆದುಕೊಂಡು ಬಂದಿವೆ ಎನ್ನುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಲೆನಾಡಿನ ಪ್ರವಾಸಿ ತಾಣಗಳ ಹೆಬ್ಬಾಗಿಲು ಎಂದೇ ಪ್ರಖ್ಯಾತಿ ಪಡೆದಿರುವ ಶಿವಮೊಗ್ಗ ಜಿಲ್ಲೆಯಲ್ಲೂ ಮಳೆರಾಯ ಆರ್ಭಟ ಮುಂದುರೆಸಿದ ಹಿನ್ನೆಲೆ ಇಲ್ಲಿನ ವಿಶ್ವಪ್ರಸಿದ್ಧ ತಾಣವಾದ ಜೋಗ ಜಲಪಾತಕ್ಕೆ ಮತ್ತೆ ಜೀವಕಳೆ ಬಂದಿದೆ. ಇನ್ನು ಈ ನೀರನ್ನು ಆಶ್ರಯಿಸಿದ್ದ ಜೀವಸಂಕುಲಗಳು, ಸರಿಸೃಪಗಳು ಹಾಗೂ ಜಲಚರಗಳಲ್ಲೂ ಹೊಸ ಚೈತನ್ಯ ಮೂಡಿದಂತಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ.


Exit mobile version