ದಾಂಡೇಲಿ ನಗರದ ಜೆ.ಎನ್. ರಸ್ತೆಯಲ್ಲಿ ಎಚ್. ಡಿ. ಎಫ್. ಸಿ. ಬ್ಯಾಂಕಿನ ನೂತನ ಶಾಖೆ ಗುರುವಾರ ಶುಭಾರಂಭಗೊಂಡಿತು.
ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ತಾಂತ್ರಿಕ ವಿಭಾಗದ ಹಿರಿಯ ಉಪಾಧ್ಯಕ್ಷರಾದ ಅನುಜ್ ಥಯಾಲ ಎಚ್.ಡಿ.ಎಫ್.ಸಿ. ಬ್ಯಾಂಕ್ ದಾಂಡೇಲಿಯಲ್ಲಿ ತನ್ನ ಶಾಖೆ ತೆರೆದಿರುವುದು ಈ ಭಾಗದ ಆರ್ಥಿಕ ವ್ಯವಹಾರಕ್ಕೆ ಇನ್ನೆಷ್ಟು ಹೆಚ್ಚಿನ ಬಲ ಬಂದಂತಾಗಿದೆ. ಇಡೀ ವಿಶ್ವದಲ್ಲಿ ಶಾಖೆಯನ್ನು ಹೊಂದಿರುವ, ದೇಶದಲ್ಲಿಯೂ ಕೂಡ ಅತಿ ಹೆಚ್ಚು ಶಾಖೆ ಹೊಂದಿರುವ ಈ ಬ್ಯಾಂಕ್ ದಾಂಡೇಲಿಯಲ್ಲಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವಂತಾಗಲಿ ಎಂದರು.
ಎಚ್.ಡಿ.ಎಫ್.ಸಿ. ಬ್ಯಾಂಕಿನ ಎಟಿಎಂ ವಿಭಾಗವನ್ನ ಉದ್ಘಾಟಿಸಿ ಮಾತನಾಡಿದ ನಗರದ ಹಿರಿಯ ವೈದ್ಯರಾದ ಡಾ. ಮೋಹನ ಪಾಟೀಲ್ ದಾಂಡೇಲಿ ಇದೊಂದು ವಾಣಿಜ್ಯ ನಗರ. ಸಾಕಷ್ಟು ವಾಣಿಜ್ಯ ಸಂಸ್ಥೆಗಳಿವೆ. ಇದೀಗ ಹೆಚ್.ಡಿ.ಎಫ್.ಸಿ. ಬ್ಯಾಂಕ್ ಕೂಡ ತನ್ನ ಶಾಖೆಯನ್ನು ಆರಂಭಿಸಿರುವುದು ಹೆಮ್ಮೆಯ ವಿಚಾರವಾಗಿದೆ. ವಿಶ್ವದಲ್ಲಿ ಗ್ರಾಹಕರ ನಂಬಿಕೆಯನ್ನು ಪಡೆದಂತಹ ಶ್ರೇಷ್ಠ ಬ್ಯಾಂಕ್ ಇದಾಗಿದೆ ಎಂದರು.
ಎಚ್.ಡಿ.ಎಫ್. ಸಿ. ಯ ವಲಯ ಮುಖ್ಯಸ್ಥ ವಿಶ್ವಜಿತ್ ಪಾಲ್ ದೇಶದಲ್ಲಿ ಎರಡನೆಯ ಸ್ಥಾನದಲ್ಲಿ ವಿಶ್ವದಲ್ಲಿ ಆರನೆಯ ಸ್ಥಾನದಲ್ಲಿರುವ ಎಚ್.ಡಿ.ಎಫ್.ಸಿ. ಬ್ಯಾಂಕ್ ಗ್ರಾಹಕರ ನಂಬಿಕೆಯನ್ನು ಗಳಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಎಸ್. ಪ್ರಕಾಶ್ ಶೆಟ್ಟಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ , ಎಚ್.ಡಿ.ಎಫ್.ಸಿ. ಲೈಫ್ ಇನ್ಸೂರೆನ್ಸ್ ನ ಎಂ.ಡಿ.ಆರ್.ಟಿ. ಮೆಂಬರ್ ಆರ್.ಪಿ. ನಾಯ್ಕ, ಕಟ್ಟಡದ ಮಾಲಕರಾದ ಉದಯ್ ಷಾ, ಉಜ್ವಲ್ ಷಾ, ಮುಂತಾದವರಿದ್ದರು.
ಎಚ್.ಡಿ.ಎಫ್.ಸಿ. ಜಿಲ್ಲಾ ವ್ಯವಸ್ಥಾಪಕ ಗಣಪತಿ ಭಟ್ ಪ್ರಾಸ್ತಾವಿಕ ಬಗ್ಗೆ ಮಾತನಾಡಿದರು. ಹೆಚ್.ಡಿ.ಎಫ್.ಸಿ ದಾಂಡೇಲಿ ಶಾಖೆಯ ಮುಖ್ಯ ವ್ಯವಸ್ಥಾಪಕ ಶಶಿಧರ ಉರನಕರ ಸ್ವಾಗತಿಸಿದರು. ಸಂಗೀತಾ ವಂದಿಸಿದರು. ಬ್ಯಾಂಕಿನ ಸಿಬ್ಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.